TTD Recruitment 2025: ಟಿಟಿಡಿಯಿಂದ ಕೈತುಂಬಾ ಸಂಬಳದ ಹುದ್ದೆಗಳಿಗೆ ಅರ್ಜಿ ಆಹ್ವಾನ
TTD Recruitment 2025: ಟಿಟಿಡಿ (ತಿರುಮಲ ತಿರುಪತಿ ದೇವಸ್ಥಾನ) ಖಾಲಿ ಇರುವ 4 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಹಾಗಾದ್ರೆ ಯಾವೆಲ್ಲಾ ಹುದ್ದೆಗಳು? ಆಯ್ಕೆ ಆದವರಿಗೆ ಮಾಸಿಕ ವೇತನ ಎಷ್ಟಿರಲಿದೆ? ಎನ್ನುವ ಪ್ರಶ್ನೆಗೆ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
3 ಆಹಾರ ಸುರಕ್ಷತಾ ಅಧಿಕಾರಿಗಳು ಮತ್ತು 1 ಹಿರಿಯ ಆಹಾರ ಸುರಕ್ಷತಾ ಅಧಿಕಾರಿ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಜೂನ್ 17 2025ರಿಂದ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಜುಲೈ 10 ಕೊನೆ ದಿನಾಂಕವಾಗಿದೆ. ಹಾಗಾದ್ರೆ ಯಾರಿಗೆ ಎಷ್ಟು ಮಾಸಿಕ ವೇತನ ಇರಲಿದೆ ಎನ್ನುವ ಮಾಹಿತಿಯನ್ನು ಕೆಳಗೆ ನೀಡಲಾಗಿದೆ ಗಮನಿಸಿ.

ಯಾರಿಗೆ ಎಷ್ಟು ಮಾಸಿಕ ವೇತನ?
* ಸೀನಿಯರ್ ಆಹಾರ ಸುರಕ್ಷತಾ ಅಧಿಕಾರಿ - ₹61,960
* ಆಹಾರ ಸುರಕ್ಷತಾ ಅಧಿಕಾರಿ - ₹44,570
ವಿದ್ಯಾರ್ಹತೆ, ವಯೋಮಿತಿ, ವೆಬ್‌ಸೈಟ್ ವಿವರಗಳು: ಈ ಹುದ್ದೆಗಳುಗೆ ಅರ್ಜಿ ಸಲ್ಲಿಸಬಯಸುವ ಅಭ್ಯರ್ಥಿಗಳು, ಬಿ.ಎಸ್ಸಿ, ಬಿ.ಟೆಕ್/ಬಿ.ಇ, ಬಿವಿಎಸ್ಸಿ ಅಥವಾ ಎಂ.ಎಸ್ಸಿ ವಿದ್ಯಾರ್ಹತೆಯನ್ನು ಹೊಂದಿರಬೇಕು. 42 ವರ್ಷಗಳ ಒಳಗಿನವರಾಗಿರಬೇಕು. ಆಫ್‌ಲೈನ್ ಅಥವಾ ಅಧಿಕೃತ ಟಿಟಿಡಿ ವೆಬ್‌ಸೈಟ್ tirumala.org ವೆಬ್‌ಸೈಟ್‌ಗೆ ಭೇಟಿ ಅರ್ಜಿ ಸಲ್ಲಿಕೆ ಮಾಡಬಹುದು.
ಅಭ್ಯರ್ಥಿಗಳು ಗಮನಿಸಬೇಕಾದ ಪ್ರಮುಖ ಅಂಶಗಳು
* ವಿದ್ಯಾರ್ಹತೆ - ಬಿ.ಎಸ್ಸಿ, ಬಿ.ಟೆಕ್/ಬಿ.ಇ, ಬಿವಿಎಸ್ಸಿ ಅಥವಾ ಎಂ.ಎಸ್ಸಿ
* ಗರಿಷ್ಠ ವಯಸ್ಸಿನ ಮಿತಿ - 42 ವರ್ಷ
* ಅರ್ಜಿ ಸಲ್ಲಿಕೆ ವಿಧಾನ - ಟಿಟಿಡಿ ವೆಬ್‌ಸೈಟ್ tirumala.org
ಟಿಟಿಡಿ ನಿರ್ದೇಶಕರ ಹುದ್ದೆ 2025: ಟಿಟಿಡಿಯು ಖಾಲಿ ಇರುವ ಒಂದು ನಿರ್ದೇಶಕ ಹುದ್ದೆಗೆ ಅರ್ಜಿ ಆಹ್ವಾನಿಸಿತ್ತು. ಈ ಹುದ್ದಗೆ ಅರ್ಜಿ ಸಲ್ಲಿಸಬಯಸುವ ಅಭ್ಯರ್ಥಿಗಳು ಸ್ನಾತಕೋತ್ತರ ಪದವಿ ಪಡೆದಿರಬೇಕು. ವಯಸ್ಸಿನ ಮಿತಿ 21 ರಿಂದ 65 ವರ್ಷಗಳು ಆಗಿದ್ದು, ನಿಯಮಗಳ ಪ್ರಕಾರ ವಯೋಮಿತಿ ಸಡಿಲಿಕೆ ಇರಲಿದೆ ಎಂದು ಇತ್ತೀಚೆಗಷ್ಟೇ ತಿಳಿಸಿತ್ತು.
ಅಭ್ಯರ್ಥಿಗಳು ಗಮನಿಸಬೇಕಾದ ಪ್ರಮುಖ ಅಂಶಗಳು
* ಆಯ್ಕೆ ಪ್ರಕ್ರಿಯೆ - ಲಿಖಿತ ಪರೀಕ್ಷೆ
* ವೇತನ - ಕನಿಷ್ಠ ₹1,00,000
* ಅರ್ಜಿ ಶುಲ್ಕ ಇರುವುದಿಲ್ಲ
* ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಿದ್ದು, ಕೊನೆಯ ಜೂನ್ 30, 2025 ಆಗಿತ್ತು












Click it and Unblock the Notifications