• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸುರತ್ಕಲ್ ಟೋಲ್ ರದ್ದು; ಉದ್ಯೋಗ ಕಳೆದುಕೊಂಡ 50 ಜನ

|
Google Oneindia Kannada News

ಮಂಗಳೂರು, ಡಿಸೆಂಬರ್ 01; ಹಲವಾರು ದಿನಗಳ ಹೋರಾಟದ ಬಳಿಕ ಮಂಗಳೂರಿನ ಸುರತ್ಕಲ್ ಟೋಲ್ ಗೇಟ್ ರದ್ದು ಮಾಡಲಾಗಿದೆ. ಡಿಸೆಂಬರ್ 1ರಿಂದಲೇ ಟೋಲ್ ಸಂಗ್ರಹ ಸ್ಥಗಿತಗೊಳಿಸಲಾಗಿದೆ. ಆದರೆ ಟೋಲ್ ರದ್ದಾದ ಬಳಿಕ 50 ಜನರು ಉದ್ಯೋಗ ಕಳೆದುಕೊಂಡಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಎಂ. ಆರ್. ರವಿ ಕುಮಾರ್ ಡಿಸೆಂಬರ್ 1ರಿಂದ ಸುರತ್ಕಲ್ ಟೋಲ್‌ಗೇಟ್‌ನಲ್ಲಿ ಟೋಲ್ ಸಂಗ್ರಹ ರದ್ದುಪಡಿಸುವ ಕುರಿತು ಆದೇಶ ಹೊರಡಿಸಿದ್ದರು. ಇಂದಿನಿಂದ ಟೋಲ್ ಇಲ್ಲದೇ ವಾಹನಗಳು ಉಚಿತವಾಗಿ ಸಂಚಾರ ನಡೆಸುತ್ತಿವೆ.

ಸುರತ್ಕಲ್ ಟೋಲ್ ವಿವಾದ: ಕೈಲಾಗದ ಯುಟಿ ಖಾದರ್ ಟೀಕೆ ಹಾಸ್ಯಾಸ್ಪದ ಎಂದ ಶಾಸಕ ಭರತ್ ಶೆಟ್ಟಿ ಸುರತ್ಕಲ್ ಟೋಲ್ ವಿವಾದ: ಕೈಲಾಗದ ಯುಟಿ ಖಾದರ್ ಟೀಕೆ ಹಾಸ್ಯಾಸ್ಪದ ಎಂದ ಶಾಸಕ ಭರತ್ ಶೆಟ್ಟಿ

ಗುರುವಾರ ಮುಂಜಾನೆ ಟೋಲ್‌ ಗೇಟ್ ಬಳಿ ಆಗಮಿಸಿದ ಉದ್ಯೋಗಿಗಳು ಮೊಬೈಲ್ ನೋಡುತ್ತಾ ಕುಳಿತರು. ಈ ಟೋಲ್‌ ಗೇಟ್‌ನಲ್ಲಿ ಮೂರು ಪಾಳಿಯಲ್ಲಿ ಸುಮಾರು 50 ಉದ್ಯೋಗಿಗಳು ಕಾರ್ಯ ನಿರ್ವಹಣೆ ಮಾಡುತ್ತಿದ್ದರು.

Surathkal toll gate cancelled : ಸತತ ಹೋರಾಟಕ್ಕೆ ಮಣಿದ ಕೇಂದ್ರ: ಸುರತ್ಕಲ್ ಟೋಲ್ ಗೇಟ್ ರದ್ದು Surathkal toll gate cancelled : ಸತತ ಹೋರಾಟಕ್ಕೆ ಮಣಿದ ಕೇಂದ್ರ: ಸುರತ್ಕಲ್ ಟೋಲ್ ಗೇಟ್ ರದ್ದು

ಸುರತ್ಕಲ್‌ನ ಟೋಲ್‌ಗೇಟ್‌ ರದ್ದುಪಡಿಸಿ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಆದೇಶ ಹೊರಡಿಸಿತ್ತು. ಈ ಟೋಲ್ಅನ್ನು ಹೆಜಮಾಡಿಯ ಟೋಲ್‌ಗೇಟ್ ಜೊತೆ ವಿಲೀನಗೊಳಿಸಲಾಗಿದೆ. ಆದ್ದರಿಂದ ಟೋಲ್ ಪ್ಲಾಜಾದ ಉದ್ಯೋಗಿಗಳಿಗೆ ಕೆಲವವಿಲ್ಲದಂತಾಗಿದೆ.

Surathkal Toll Gate : ಸುರತ್ಕಲ್ ಟೋಲ್‌ ಬಂದ್‌ಗೆ ಆಗ್ರಹಿಸಿ ಪ್ರತಿಭಟನಾಕಾರರ ಆಕ್ರೋಶ; 360 ಜನ ವಶಕ್ಕೆ Surathkal Toll Gate : ಸುರತ್ಕಲ್ ಟೋಲ್‌ ಬಂದ್‌ಗೆ ಆಗ್ರಹಿಸಿ ಪ್ರತಿಭಟನಾಕಾರರ ಆಕ್ರೋಶ; 360 ಜನ ವಶಕ್ಕೆ

ವಿಜಯೋತ್ಸವ ಆಚರಣೆ; ಸುರತ್ಕಲ್ ಟೋಲ್ ರದ್ದು ಪಡಿಸಲು ಹೋರಾಟ ನಡೆಸಿದ್ದ ವಿವಿಧ ಸಂಘಟನೆಗಳು ಗುರುವಾರ ಸಂಜೆ ವಿಜಯೋತ್ಸವ ಆಚರಣೆ ಮಾಡಲು ತೀರ್ಮಾನಿಸಿವೆ. ಸುರತ್ಕಲ್ ಟೋಲ್ ರದ್ದುಪಡಿಸಿದ ಬಳಿಕ ಹೆಜಮಾಡಿಯಲ್ಲಿ ಹೆಚ್ಚುವರಿ ಶುಲ್ಕ ಸಂಗ್ರಹಣೆ ಮಾಡಿದರೆ ಮತ್ತೆ ಹೋರಾಟ ನಡೆಸುತ್ತೇವೆ ಎಂದು ಎಚ್ಚರಿಕೆ ನೀಡಲಾಗಿದೆ.

ನಳಿನ್ ಕುಮಾರ್‌ ಕಟೀಲ್ ಟ್ವೀಟ್; ಸುರತ್ಕಲ್ ಟೋಲ್ ವಿರೋಧಿ ಹೋರಾಟದ ಬಳಿಕ ಟ್ವೀಟ್ ಮಾಡಿದ್ದ ದಕ್ಷಿಣ ಕನ್ನಡದ ಸಂಸದ ನಳಿನ್ ಕುಮಾರ್ ಕಟೀಲ್, 'ಮಂಗಳೂರಿನ ಸುರತ್ಕಲ್ ಸಮೀಪದ ಟೋಲ್ ಸಂಗ್ರಹ ಕೇಂದ್ರ ರದ್ದಾಗಿದ್ದು, ನಮ್ಮ ಮನವಿಗೆ ಸೂಕ್ತವಾಗಿ ಸ್ಪಂದಿಸಿದ ಕೇಂದ್ರ ಸಚಿವರಾದ ಶ್ರೀ ನಿತಿನ್ ಗಡ್ಕರಿ ಹಾಗೂ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರಿಗೆ ನಾಗರಿಕರ ಪರವಾಗಿ ಧನ್ಯವಾದಗಳು. ಟೋಲ್ ರದ್ದು ಮಾಡುವ ಭರವಸೆಯನ್ನು ಈ ಮೊದಲೇ ಕೇಂದ್ರ ಸಚಿವರು ನೀಡಿದ್ದು, ಈಗ ತಾಂತ್ರಿಕ ಅಂಶ ಪೂರೈಸಲಾಗಿದೆ' ಎಂದು ಹೇಳಿದ್ದರು.

ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಬಿ. ಕೆ. ಹರಿಪ್ರಸಾದ್ ನಳಿನ್ ಕುಮಾರ್ ಕಟೀಲ್ ಟ್ವೀಟ್‌ಗೆ ತಿರುಗೇಟು ನೀಡಿದ್ದರು. 'ಕರಾವಳಿ ಸಂಸದರು ಯಾವ ಪುರುಷಾರ್ಥಕ್ಕೆ ಸ್ವಯಂ ಬೆನ್ನುತಟ್ಟಿಕೊಂಡಿದ್ದು ಬಹಿರಂಗಪಡಿಸಬೇಕು. ವಾಹನ ಸವಾರರ ಬೆವರಿನ ಹಣವನ್ನ ಜಿಗಣೆಯಂತೆ ರಕ್ತ ಹೀರುತ್ತಿದ್ದ ಸುರತ್ಕಲ್ ಟೋಲ್‌ಗೇಟ್‌ ರದ್ದು ಪಡಿಸಿ, ಹೆಜಮಾಡಿ ಟೋಲ್‌ ಅಲ್ಲಿ ದುಪ್ಪಟ್ಟು ಸುಲಿಗೆ ಮಾಡಲು ವಿಲೀನಗೊಳಿಸಿದ್ದಕ್ಕಾ?' ಎಂದು ಪ್ರಶ್ನೆ ಮಾಡಿದ್ದರು.

Surathkal

'ಕರಾವಳಿಯ ಬಿಜೆಪಿ ಸಂಸದರು, ಶಾಸಕರು ಟೋಲ್‌ಗೇಟ್‌ಗಳ ಪರ ವಕಾಲತ್ತು ವಹಿಸುತ್ತಿರುವುದು ಯಾಕೆ?. ಸುಲಿಗೆ ಮಾಡುತ್ತಿರುವ ಹಣದಲ್ಲಿ ತಮ್ಮ ಪಾಲೆಷ್ಟು ಬಹಿರಂಗಪಡಿಸಿ?. ಮತಕೊಟ್ಟ ಜನರಿಗೆ ದ್ರೋಹ ಮಾಡಿ, ಬೆನ್ನ ತಟ್ಟಿಕೊಂಡಿರುವ ಸಂಸದರದ್ದು ಲಜ್ಜೆಗೆಟ್ಟ ಪರಮಾವಧಿ. ಅಕ್ರಮ ಟೋಲ್ ಅಂತೆ ನಿಮ್ಮನ್ನ ಎತ್ತಂಗಡಿ ಮಾಡುವ ಕಾಲ ಬಂದಾಯ್ತು‌' ಎಂದು ವಾಗ್ದಾಳಿ ನಡೆಸಿದ್ದರು.

ದರಗಳು ಏರಿಕೆ; ಸುರತ್ಕಲ್ ಟೋಲ ಗೇಟ್ ಅನ್ನು ಹೆಜಮಾಡಿ ಟೋಲ್ ಜೊತೆ ವಿಲೀನಗೊಳಿಸಿದ ಬಳಿಕ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಟೋಲ್ ದರಗಳನ್ನು ಪರಿಷ್ಕರಣೆ ಮಾಡಿದೆ. ಇಲ್ಲಿ ರದ್ದಾಗಿರುವ ಟೋಲ್ ಶುಲ್ಕವನ್ನು ಹೆಜಮಾಡಿಯಲ್ಲಿಯೇ ಸಂಗ್ರಹ ಮಾಡಲಾಗುತ್ತದೆ.

ಹೆಜಮಾಡಿ ಟೋಲ್‌ನಲ್ಲಿ ಡಿಸೆಂಬರ್ 1 ರಿಂದ ಕಾರಿಗೆ 100 ರೂ., ಬಸ್‌ ಮತ್ತು ಟ್ರಕ್‌ಗಳಿಗೆ ಏಕಮುಖ ಸಂಚಾರಕ್ಕೆ 355 ರೂ.ಗಳು, ಮಲ್ಟಿ ಆಕ್ಸೆಲ್‌ ವಾಹನಗಳಿಗೆ 555 ರೂ., ಲಘು ವಾಣಿಜ್ಯ ಮತ್ತು ಸರಕು ವಾಹನಗಳಿಗೆ 170 ರೂ. ದರ ನಿಗದಿ ಮಾಡಲಾಗಿದೆ.

English summary
The toll collection at the plaza in Surathkal stopped completely from December 1. Around 50 employees lost their jobs after merge of toll plaza.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X