ಎಸ್‌ಬಿಐನಲ್ಲಿ ಅರ್ಜಿ ಸಲ್ಲಿಸಲು ಜೂನ್ 20 ಕೊನೆಯ ದಿನಾಂಕ

Posted By:
Subscribe to Oneindia Kannada

ಬೆಂಗಳೂರು, ಜೂನ್ 02: ಸರ್ಕಾರಿ ಸ್ವಾಮ್ಯದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ ಬಿಐ) ವಿಶೇಷ ಅಧಿಕಾರಿ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಜೂನ್ 02ರಿಂದ ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಬಹುದಾಗಿದ್ದು, ಜೂನ್ 20 ಅರ್ಜಿ ಸಲ್ಲಿಸಲು ಕೊನೆ ದಿನಾಂಕವಾಗಿದೆ.

ಅರ್ಹ ಅಭ್ಯರ್ಥಿಗಳು ಒಂದು ಹುದ್ದೆಗೆ ಮಾತ್ರ ಅರ್ಜಿ ಸಲ್ಲಿಸಬಹುದಾಗಿದೆ. ನೋಂದಣಿ ಕಾರ್ಯವು ಅರ್ಜಿ ಶುಲ್ಕಪಾವತಿ(ಆನ್ ಲೈನ್ ಮೂಲಕ ಅಥವಾ ನೇರ ಶುಲ್ಕ ಪಾವತಿ) ಖಾತ್ರಿ ಆದ ಬಳಿಕ ಪೂರ್ಣಗೊಳ್ಳಲಿದೆ.

ಲಭ್ಯ ವಿರುವ ಹುದ್ದೆಗಳು:
* ಬಿಸಿನೆಸ್ ಅನಾಲಿಸ್ಟ್ (ವಯೋಮಿತಿ 40 ವರ್ಷ) (ವಿದ್ಯಾರ್ಹತೆ : ಬಿಇ.ಬಿಟೆಕ್, ಎಂಬಿಎ), (ಅನುಭವ: 7 ವರ್ಷ)

* ಗ್ರಾಹಕ ಸೇವಾ ವಿಶ್ಲೇಷಕ (ವಯೋಮಿತಿ 40 ವರ್ಷ) (ವಿದ್ಯಾರ್ಹತೆ : ಬಿಇ.ಬಿಟೆಕ್, ಎಂಬಿಎ), (ಅನುಭವ: 7 ವರ್ಷ)

* ಹಿರಿಯ ಮ್ಯಾನೇಜರ್ [ಮಾರ್ಕೆಟಿಂಗ್] (ವಯೋಮಿತಿ 35 ವರ್ಷ) (ವಿದ್ಯಾರ್ಹತೆ : ಬಿಇ. ಬಿಟೆಕ್, ಎಂಬಿಎ), (ಅನುಭವ: 5 ವರ್ಷ)

* ರಿಲೇಶನ್ ಶಿಪ್ ಮ್ಯಾನೇಜರ್ (ವಯೋಮಿತಿ 32 ವರ್ಷ) (ವಿದ್ಯಾರ್ಹತೆ : ಬಿಇ. ಬಿಟೆಕ್, ಎಂಬಿಎ), (ಅನುಭವ: 3 ವರ್ಷ)

* ಸಹಾಯಕ ರಿಲೇಶನ್ ಶಿಪ್ ಮ್ಯಾನೇಜರ್ (ವಯೋಮಿತಿ 3೦ ವರ್ಷ) (ವಿದ್ಯಾರ್ಹತೆ : ಬಿಇ. ಬಿಟೆಕ್, ಎಂಬಿಎ), (ಅನುಭವ: 1 ವರ್ಷ)

State Bank of India Specialized Position Jobs 2016

* ಹಿರಿಯ ಮ್ಯಾನೇಜರ್ [ಸರ್ವೀಸಿಂಗ್] (ವಯೋಮಿತಿ 30 ವರ್ಷ) (ವಿದ್ಯಾರ್ಹತೆ : ಬಿಇ. ಬಿಟೆಕ್, ಎಂಬಿಎ), (ಅನುಭವ: 5 ವರ್ಷ)

* ಮ್ಯಾನೇಜರ್ [ಸರ್ವೀಸಿಂಗ್] (ವಯೋಮಿತಿ 30 ವರ್ಷ) (ವಿದ್ಯಾರ್ಹತೆ : ಬಿಇ. ಬಿಟೆಕ್, ಎಂಬಿಎ), (ಅನುಭವ: 2 ವರ್ಷ)

* ಪ್ರಾಜೆಕ್ಟ್ ಮ್ಯಾನೇಜರ್ (ವಯೋಮಿತಿ 42 ವರ್ಷ) (ವಿದ್ಯಾರ್ಹತೆ : ಬಿಇ.ಬಿಟೆಕ್, ಎಂಬಿಎ), (ಅನುಭವ: 5 ವರ್ಷ)

* ಡಿಜಿಟಲ್ ಸಿಸ್ಟಮ್ ಆರ್ಕಿಟೆಕ್ಟ್ (ವಯೋಮಿತಿ 40 ವರ್ಷ) (ವಿದ್ಯಾರ್ಹತೆ : ಬಿಇ.ಬಿಟೆಕ್, ಎಂಸಿಎ), (ಅನುಭವ: 7 ವರ್ಷ)

* ಸಿಸ್ಟಮ್/ ಬಿಸಿನೆಸ್ ಅನಾಲಿಸ್ಟ್ (ವಯೋಮಿತಿ 40 ವರ್ಷ) (ವಿದ್ಯಾರ್ಹತೆ : ಎಂಬಿಎ), (ಅನುಭವ: 5 ವರ್ಷ)

* ಅನಾಲಿಸ್ಟ್ (ವಯೋಮಿತಿ 35 ವರ್ಷ) (ವಿದ್ಯಾರ್ಹತೆ : ಪದವಿ), (ಅನುಭವ: 3 ವರ್ಷ)

ಅರ್ಜಿ ಸಲ್ಲಿಸಲು : https://www.sbi.co.in/careers ಗೆ ಭೇಟಿ ನೀಡಿ Latest Announcements ನಲ್ಲಿ ಸಂಬಂಧಪಟ್ಟ ಒಂದು ಹುದ್ದೆಯ ಅರ್ಜಿಯನ್ನು ಭರ್ತಿ ಮಾಡಿ ರಸೀತಿಯನ್ನು ಪ್ರಿಂಟ್ ಔಟ್ ತೆಗೆದುಕೊಳ್ಳಿ. ಅರ್ಜಿ ಶುಲ್ಕ 600 ರು ಗಳನ್ನು ಆನ್ ಲೈನ್ ನಲ್ಲೇ ಪಾವತಿಸಬಹುದು.

* ಅರ್ಜಿ ಸಲ್ಲಿಸಲು ಆನ್ ಲೈನ್ ನೋಂದಣಿ ಆರಂಭ : 02/06/2016
* ಆನ್ ಲೈನ್ ಮೂಲಕ ನೋಂದಣಿ ಹಾಗೂ ಅರ್ಜಿ ಶುಲ್ಕ ಸಲ್ಲಿಸಲು ಕೊನೆ ದಿನಾಂಕ : 14/06/2016
* ಅರ್ಜಿ ಸಲ್ಲಿಸಲು ಕೊನೆ ದಿನಾಂಕ : 20/06/2016

ವಿದ್ಯಾರ್ಹತೆ, ವಯೋಮಿತಿ, ಅರ್ಜಿ ಸಲ್ಲಿಸುವ ವಿಧಾನ ಸೇರಿದಂತೆ ಹೆಚ್ಚಿನ ಮಾಹಿತಿಗೆ ಈ ಕೆಳಕಂಡ ಲಿಂಕ್ ಕ್ಲಿಕ್ ಮಾಡಿ ಪೂರ್ಣ ವಿವರ ಪಡೆದುಕೊಳ್ಳಿ:

(ಒನ್ಇಂಡಿಯಾ ಸುದ್ದಿ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
State Bank of India invites Online applications from Indian citizens for appointment in following Positions in Specialist Cadre on contract basis in State Bank of India. Candidates are requested to apply Online through official website.
Please Wait while comments are loading...