ವಿವಿಧ ಇಲಾಖೆಗಳ ನೇಮಕಾತಿ; ಅರ್ಜಿ ಹಾಕಿ

ಬೆಂಗಳೂರು, ನವೆಂಬರ್ 24: ಬೆಂಗಳೂರು ಸ್ಟಾಫ್ ಸೆಲೆಕ್ಷನ್ ಕಮಿಷನ್ ಕೇಂದ್ರ ಸರ್ಕಾರದ ಅಂಚೆ ಮತ್ತು ಇತರೆ ಇಲಾಖೆಗಳಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಕರೆದಿದೆ. ಅರ್ಜಿಗಳನ್ನು ಸಲ್ಲಿಕೆ ಮಾಡಲು 15/12/2020 ಕೊನೆಯ ದಿನವಾಗಿದೆ.

ಅಂಚೆ ಸಹಾಯಕ, ಸಾರಟಿಂಗ್ ಅಸಿಸ್ಟೆಂಟ್, ಡಾಟಾ ಎಂಟ್ರಿ ಆಪರೇಟರ್, ಎಲ್. ಡಿ. ಸಿ ಮುಂತಾದ ಹುದ್ದೆಗಳ ನೇಮಕಾತಿಗಾಗಿ ಆನ್‍ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಅರ್ಜಿಗಳನ್ನು ಸಲ್ಲಿಸುವ ಅಭ್ಯರ್ಥಿಗಳು ಪಿಯುಸಿ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿರಬೇಕು. ಕಂಪ್ಯೂಟರ್ ಜ್ಞಾನವನ್ನು ಕಡ್ಡಾಯವಾಗಿ ಹೊಂದಿರಬೇಕು. ಅಭ್ಯರ್ಥಿಗಳಿಗೆ 18 ರಿಂದ 27 ವರ್ಷಗಳ ವಯೋಮಿತಿ ನಿಗದಿ ಮಾಡಲಾಗಿದೆ.

Staff Selection Commission Recruitment Various Departments

ಅಭ್ಯರ್ಥಿಗಳು ಪರಿಶಿಷ್ಟ ಜಾತಿ/ ಪಂಗಡ/ ಓಬಿಸಿ/ ಅಂಗವಿಕಲರಾಗಿದ್ದರೆ ವಯೋಮಿತಿಯಲ್ಲಿ ನಿಯಮಾನುಸಾರ ವಿನಾಯಿತಿ ನೀಡಲಾಗುತ್ತದೆ ಎಂದು ಪ್ರಕಟಣೆ ತಿಳಿಸಿದೆ. ವೇತನ ಶ್ರೇಣಿ 32,000 ರೂ.ಗಳಿಂದ 45,000 ರೂ.ಗಳು.

ಆಸಕ್ತ ಅಭ್ಯರ್ಥಿಗಳು ಅರ್ಜಿಗಳನ್ನು ಸಲ್ಲಿಸಲು ಅಂತಿಮ ದಿನಾಂಕ 15/12/2020. ಹೆಚ್ಚಿನ ಮಾಹಿತಿಗಾಗಿ www.ssckkr.kar.nic.in ಅಥವ https://ssc.nic.in ವೆಬ್ ಸೈಟ್‌ಗೆ ಭೇಟಿ ನೀಡಬಹುದಾಗಿದೆ.

ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ವಿನಿಮಯ ಕಚೇರಿಯನ್ನು ಸಂಪರ್ಕಿಸಬಹುದು ಅಥವ 08172-296374 ಸಂಖ್ಯೆಗೆ ಕರೆ ಮಾಡಬಹುದಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+