51 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದ ಎಸ್‌ಎಸ್‌ಸಿ

Posted By:
Subscribe to Oneindia Kannada

ಬೆಂಗಳೂರು, ಆಗಸ್ಟ್ 31 : ಸಿಬ್ಬಂದಿ ನೇಮಕಾತಿ ಆಯೋಗ (ಎಸ್‌ಎಸ್‌ಸಿ) ಕರ್ನಾಟಕ ಮತ್ತು ಕೇರಳ ವಲಯದಲ್ಲಿ ಖಾಲಿ ಇರುವ 51 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ. ಆಸಕ್ತರು ಸೆಪ್ಟೆಂಬರ್ 26ರೊಳಗೆ ಆನ್‌ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.

ಎಸ್‌ಎಸ್‌ಸಿ ಪ್ರತಿವರ್ಷ ಭಾರತ ಸರ್ಕಾರದ ಅಧೀನದಲ್ಲಿರುವ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಸ್ಮರ್ಧಾತ್ಮಕ ಪರೀಕ್ಷೆಗಳ ಮೂಲಕ ಭರ್ತಿ ಮಾಡುತ್ತದೆ. ಸದ್ಯ, 51 ಹುದ್ದೆಗಳ ಭರ್ತಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ.[ಹಲವು ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದ ಕೆಪಿಸಿಎಲ್]

SSC KKR Recruitment notification 2016

ಯಾವ ಹುದ್ದೆಗಳು? : ಅಸಿಸ್ಟೆಂಟ್ (ಲೀಗಲ್), ಅಸಿಸ್ಟೆಂಟ್ ಸೆಂಟ್ರಲ್ ಇಂಟಲಿಜೆನ್ಸ್ ಆಫೀಸರ್ ಗ್ರೇಡ್ - 1, ರಿಸರ್ಚ್ ಅಸಿಸ್ಟೆಂಟ್, ಸೆಕ್ಷನ್ ಆಫೀಸರ್, ಆಫೀಸ್ ಸೂಪರಿಟೆಂಡೆಂಟ್, ಡೇಟಾ ಎಂಟ್ರಿ ಆಪರೇಟರ್ ಸೇರಿದಂತೆ ಹಲವು ಹುದ್ದೆಗಳು ಬಾಕಿ ಇವೆ.[159 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದ KPSC]

ಅರ್ಹತೆ : ಪಿಯುಸಿ, ಕಾನೂನು ಪದವಿ, ಬಿಇ/ಬಿಟೆಕ್, ಬಿಎಸ್ಸಿ, ಪರಿಸರ, ಸಸ್ಯಶಾಸ್ತ್ರ, ಜೀವಾಶಾಸ್ತ್ರ, ಕೃಷಿ, ರಸಾಯನಶಾಸ್ತ್ರ, ಗಣಿತ ಸೇರಿದಂತೆ ವಿವಿಧ ವಿಷಯಗಳಲ್ಲಿ ಎಂಎಸ್ಸಿ, ಅರ್ಥಶಾಸ್ತ್ರ ಸೇರಿದಂತೆ ವಿವಿಧ ವಿಷಯಗಳಲ್ಲಿ ಪದವಿ ವ್ಯಾಸಂಗ ಪೂರ್ಣಗೊಳಿಸಿರುವ ಅಭ್ಯರ್ಥಿಗಳು ವಿದ್ಯಾರ್ಹತೆಗೆ ಅನುಗುಣವಾಗಿ ಸರಿಹೊಂದುವ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ಗರಿಷ್ಠ ವಯೋಮಿತಿ 30 ವರ್ಷಗಳು.

100 ರೂ. ಅರ್ಜಿ ಶುಲ್ಕದ ಜೊತೆ ssconline.nic.in ವೆಬ್‌ಸೈಟ್‌ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ಶುಲ್ಕವನ್ನು ಎಸ್‌ಬಿಐ ನೆಟ್ ಬ್ಯಾಂಕಿಂಗ್/ಕ್ರೆಡಿಟ್‌ ಕಾರ್ಡ್/ಡೆಬಿಟ್ ಕಾರ್ಡ್ ಮೂಲಕ ಪಾವತಿ ಮಾಡಬಹುದು. ಮಹಿಳೆ/ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ/ಮಾಜಿ ಸೈನಿಕ/ಅಂಗವಿಕಲ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕದಲ್ಲಿ ವಿನಾಯಿತಿ ಇರುತ್ತದೆ.

ಇಂಗ್ಲಿಶ್ ನಲ್ಲಿ ಓದಿ

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Staff Selection Commission has issued employment notification for recruitment to 51 group B and group C Non-Gazetted, Non-Ministerial posts at Karnataka Kerala Region. Last date for submission of application is 26th September 2016.
Please Wait while comments are loading...