ಸ್ಟಾಫ್ ಸೆಲೆಕ್ಷನ್ ಕಮಿಷನ್(SSC) ನೇಮಕಾತಿ 5134 ಹುದ್ದೆಗಳಿವೆ

Posted By:
Subscribe to Oneindia Kannada

ಬೆಂಗಳೂರು, ಅಕ್ಟೋಬರ್ 28: ಸ್ಟಾಫ್ ಸೆಲೆಕ್ಷನ್ ಕಮಿಷನ್(ಎಸ್‌ಎಸ್ಸಿ) 2016-17ನೇ ಸಾಲಿನ ವಿವಿಧ ಇಲಾಖೆ, ಕಚೇರಿ ಹಾಗೂ ಸಚಿವಾಲಯಗಳಲ್ಲಿ ಅಗತ್ಯವಿರುವ ಸಹಾಯಕರು, ಕ್ಲರ್ಕ್ ಸೇರಿದಂತೆ ಹಲವಾರು ಹುದ್ದೆಗಳ ಭರ್ತಿಗೆ ನೇಮಕಾತಿ ಪ್ರಕಟಣೆ ಹೊರಡಿಸಿದೆ.

ಸರಿ ಸುಮಾರು 5134ಕ್ಕೂ ಅಧಿಕ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳನ್ನು ಪರೀಕ್ಷಾ ಪ್ರಕ್ರಿಯೆ ಮೂಲಕ SSC ಆಯ್ಕೆ ಮಾಡಲಿದೆ. ಅರ್ಜಿಗಳನ್ನು ಆನ್ ಲೈನ್ ಮೂಲಕ ಸಲ್ಲಿಸಬಹುದು.10+2 ಓದಿದ್ದರೆ ಸಾಕು, ಅರ್ಜಿ ಸಲ್ಲಿಸಲು ನವೆಂಬರ್ 11 ಕೊನೆ ದಿನಾಂಕ.

ಎಸ್‌ಎಸ್ಸಿ ಸಿಬ್ಬಂದಿ ಮತ್ತು ತರಬೇತಿ ಇಲಾಖೆಯೊಂದಿಗೆ ಕಾರ್ಯನಿರ್ವಹಿಸುತ್ತದೆ.

ಹುದ್ದೆಗಳ ವಿವರ :

ಸಂಸ್ಥೆ:
ಸ್ಟಾಫ್ ಸೆಲೆಕ್ಷನ್ ಕಮಿಷನ್(ಕೇಂದ್ರ ಸರ್ಕಾರಿ ಹುದ್ದೆ)

ಒಟ್ಟು ಹುದ್ದೆಗಳು:
5134 (ಬದಲಾವಣೆಗೆ ಒಳಪಟ್ಟಿರುತ್ತದೆ)
ಪೋಸ್ಟಲ್ ಅಸಿಸ್ಟೆಂಟ್/ಸಾರ್ಟಿಂಗ್ ಅಸಿಸ್ಟೆಂಟ್- 3281
ಡಾಟಾ ಎಂಟ್ರಿ ಆಪರೇಟರ್- 506
ಲೋಯರ್ ಡಿವಿಷನ್ ಕ್ಲರ್ಕ್- 1321
ಕೋರ್ಟ್ ಕ್ಲರ್ಕ್- 26

SSC CHSL Recruitment 2016-17-(5134 Vacancies) Apply Online

ವೇತನ ಶ್ರೇಣಿ: 5,200 ರಿಂದ 20,200 ರು +ಗ್ರೇಡ್ ಪೇ 2400/1900

ವಿದ್ಯಾರ್ಹತೆ: 12ನೇ ತರಗತಿ ಅಥವಾ ತತ್ಸಮಾನ ವಿದ್ಯಾರ್ಹತೆ ಪೂರೈಸಿರಬೇಕು.

ವಯೋಮಿತಿ: ಕನಿಷ್ಠ 18 ಮತ್ತು ಗರಿಷ್ಠ 27(1/01/2017 ರಂತೆ) ಎಸ್ಸಿ, ಎಸ್ಟಿ ಅಭ್ಯರ್ಥಿಗಳಿಗೆ 5, ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ ಹಾಗೂ ಅಂಗವಿಕಲರಿಗೆ 10 ವರ್ಷ ಸಡಿಲಿಕೆಯಿದೆ.

ಅರ್ಜಿ ಶುಲ್ಕ:
100 ರು. ಎಸ್ ಬಿಐ ಆನ್ ಲೈನ್ ಬ್ಯಾಂಕಿಂಗ್/ಚಲನ್/ ಡೆಬಿಟ್

ಮುಖ್ಯ ದಿನಾಂಕಗಳು:
ಆನ್ ಲೈನ್ ಅರ್ಜಿ ಕೊನೆ ದಿನಾಂಕ : 11/11/2016 ಸಂಜೆ 5.
ನೇರವಾಗಿ ಅರ್ಜಿ ನೀಡಲು ಕೊನೆ ದಿನಾಂಕ : 9/11/2016 ಸಂಜೆ 5.

ವಿವಿಧ ಹುದ್ದೆಗಳಿಗೆ ಹೇಗೆ ಅರ್ಜಿ ಸಲ್ಲಿಸುವುದು, ಇನ್ನಿತರ ವಿವರಗಳನ್ನು ಈ ಲಿಂಕ್ ಮೂಲಕ ಪಡೆಯಿರಿ ಕ್ಲಿಕ್ ಮಾಡಿ

(ಒನ್ಇಂಡಿಯಾ ಸುದ್ದಿ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Staff Selection Commission CHSL Recruitment 2016-17 notification for 5134 Vacancies. Interested candidates can apply Online. Candidates must be passed in 12th Standard from Authorized board of examination or University.
Please Wait while comments are loading...