ರಾಯಚೂರು, ಬಳ್ಳಾರಿ, ಕೊಪ್ಪಳ ಹಾಲು ಒಕ್ಕೂಟ ನೇಮಕಾತಿ, 63 ಹುದ್ದೆ

ಬೆಂಗಳೂರು, ನವೆಂಬರ್ 09; ರಾಯಚೂರು, ಬಳ್ಳಾರಿ, ಕೊಪ್ಪಳ ಮತ್ತು ವಿಜಯನಗರ ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟ ನಿ. ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿಗಳನ್ನು ಆಹ್ವಾನಿಸಿದೆ.

ಹಾಲು ಒಕ್ಕೂಟದಲ್ಲಿ ವಿವಿಧ ವೃಂದದಲ್ಲಿ ಖಾಲಿ ಇರುವ ಒಟ್ಟು 63 ಹುದ್ದೆಗಳ ನೇಮಕಾತಿಗಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆಸಕ್ತರು ಆನ್‌ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಕೆ ಮಾಡಲು 7/12/2023 ಕೊನೆಯ ದಿನಾಂಕವಾಗಿದೆ.

RBKMUL Recruitment 63 Post Apply Online Details

ಹುದ್ದೆಗಳ ವಿವರಗಳು; ಉಪ ವ್ಯವಸ್ಥಾಪಕರು (ಶೇಖರಣೆ) 2, ಉಪ ವ್ಯವಸ್ಥಾಪಕರು (ಎಫ್‌ & ಎಫ್) 1, ಉಪ ವ್ಯವಸ್ಥಾಪಕರು (ಮಾರುಕಟ್ಟೆ) 1, ಉಪ ವ್ಯವಸ್ಥಾಪಕರು (ವಿತ್ತ) 1, ಉಪ ವ್ಯವಸ್ಥಾಪಕರು (ಖರೀದಿ) 1, ಸಹಾಯಕ ವ್ಯವಸ್ಥಾಪಕರು 9, ಸಹಾಯಕ ವ್ಯವಸ್ಥಾಪಕರು ( ಎಫ್‌ & ಎಫ್‌) 1, ಸಹಾಯಕ ವ್ಯವಸ್ಥಾಪಕರು (ವಿತ್ತ) 1 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ.

ಸಹಾಯಕ ವ್ಯವಸ್ಥಾಪಕರು (ಎಂ. ಐ. ಎನ್) 1, ಸಹಾಯಕ ವ್ಯವಸ್ಥಾಪಕರು (ಆಡಳಿತ) 1, ತಾಂತ್ರಿಕ ಅಧಿಕಾರಿ (ಡಿ. ಟಿ) 5, ತಾಂತ್ರಿಕ ಅಧಿಕಾರಿ (ಕ್ಯುಸಿ), ಮಾರುಕಟ್ಟೆ ಅಧಿಕಾರಿ 2, ಲೆಕ್ಕ ಅಧಿಕಾರಿ 2, ಸಾರ್ವಜನಿಕ ಸಂಪರ್ಕ ಅಧಿಕಾರಿ 1, ಐ. ಎಂ. ಉಗ್ರಾಣ ಅಧಿಕಾರಿ 1, ಎಂ. ಐ. ಎಸ್./ ಸಿಸ್ಟಂ ಅಧಿಕಾರಿ 1, ಮಾರುಕಟ್ಟೆ ಅಧೀಕ್ಷಕರು 2, ಖರೀದಿ ಉಗ್ರಾಣ ಅಧಿಕಾರಿ 1, ಡೈರಿ ಸೂಪರ್ ವೈಸರ್ ದರ್ಜೆ-2 2, ಕ್ಷೇತ್ರ ಸಹಾಯಕರು 5, ಮಾರುಕಟ್ಟೆ ಸಹಾಯಕ ದರ್ಜೆ-2 1, ಜೂನಿಯರ್ ಸಿಸ್ಟಂ ಆಪರೇಟರ್ 1, ಹಿರಿಯ ಚಾಲಕರು 2 ಸೇರಿದಂತೆ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ.

ಒಕ್ಕೂಟದಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಸಂಬಂಧ ನೇಮಕಾತಿ ಪ್ರಕ್ರಿಯೆಯ ಪೂರ್ಣ ವಿವರಗಳನ್ನು ರಾಯಚೂರು, ಬಳ್ಳಾರಿ ಕೊಪ್ಪಳ ಮತ್ತು ವಿಜಯನಗರ ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟ ನಿ., ಬಳ್ಳಾರಿ. ಜಾಲತಾಣ www.rbkmul.in ನಲ್ಲಿ ಲಭ್ಯವಿದ್ದು, ಅಭ್ಯರ್ಥಿಗಳು ಕಡ್ಡಾಯವಾಗಿ ಆನ್‌ಲೈನ್ ಮೂಲಕವೇ ಅರ್ಜಿ ಸಲ್ಲಿಸತಕ್ಕದ್ದು.

ಅರ್ಜಿಗಳನ್ನು ಸಲ್ಲಿಕೆ ಮಾಡುವ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-1 ಹಾಗೂ ಅಂಗವಿಕಲ ಅಭ್ಯರ್ಥಿಗಳು ಅರ್ಜಿ ಶುಲ್ಕ 750 ರೂ. ಮತ್ತು ಬ್ಯಾಂಕ್ ಶುಲ್ಕವನ್ನು ಪ್ರತ್ಯೇಕವಾಗಿ ಪಾವತಿ ಮಾಡಬೇಕಿದೆ. ಇತರೆ ವರ್ಗದ ಅಭ್ಯರ್ಥಿಗಳು ಅರ್ಜಿ ಶುಲ್ಕ ರೂ. 1500 ಮತ್ತು ಬ್ಯಾಂಕ್ ಶುಲ್ಕ ಪ್ರತ್ಯೇಕವಾಗಿ ಪಾವತಿಸಬೇಕು. ಅರ್ಜಿ ಶುಲ್ಕವನ್ನು ಪಾವತಿ ಮಾಡದ ಅರ್ಜಿಗಳನ್ನು ತಿರಸ್ಕಾರ ಮಾಡಲಾಗುತ್ತದೆ.

ಅರ್ಜಿಗಳನ್ನು ಸಲ್ಲಿಕೆ ಮಾಡಲು ನಿಗದಿ ಮಾಡಿದ ಕೊನೆಯ ದಿನಾಂಕ 7/12/2023ಕ್ಕೆ ಅಭ್ಯರ್ಥಿಗಳಿಗೆ ಕನಿಷ್ಠ ವಯೋಮಿತಿ 18 ವರ್ಷ ನಿಗದಿ ಮಾಡಲಾಗಿದೆ. ಗರಿಷ್ಠ ವಯೋಮಿತಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಪ್ರವರ್ಗ-1 40 ವರ್ಷಗಳು, ಪ್ರವರ್ಗ 2ಎ, 2ಬಿ, 3ಎ ಮತ್ತು 3ಬಿ 38 ವರ್ಷಗಳು. ಸಾಮಾನ್ಯ ವರ್ಗಕ್ಕೆ 35 ವರ್ಷಗಳು.

ಮೇಲಿನ ಹುದ್ದೆಗಳಲ್ಲಿ ಚಾಲಕರು ಮತ್ತು ಜೂನಿಯರ್ ಟೆಕ್ನಿಷಿಯನ್ ಹುದ್ದೆಯನ್ನು ಹೊರತುಪಡಿಸಿ ಉಳಿದ ಎಲ್ಲಾ ಹುದ್ದೆಗಳ ನೇಮಕಾತಿಗೆ ಅಭ್ಯರ್ಥಿಗಳು ಕಂಪ್ಯೂಟರ್ ಸರ್ಟಿಫಿಕೇಟ್ ತರಬೇತಿ ಪ್ರಮಾಣ ಪತ್ರವನ್ನು ಸಲ್ಲಿಸತಕ್ಕದ್ದು. ಪದವಿಯಲ್ಲಿ ಕನಿಷ್ಠ ಒಂದು ಕೋರ್ಸ್‌ನಲ್ಲಿ ಕಂಪ್ಯೂಟರ್ ವಿಷಯ ಅಧ್ಯಯನ ಮಾಡಿದಲ್ಲಿ ಕಂಪ್ಯೂಟರ್ ಸರ್ಟಿಫಿಕೇಟ್ ಸಲ್ಲಿಸಲು ವಿನಾಯಿತಿ ನೀಡಲಾಗುತ್ತದೆ.

ಅರ್ಜಿ ಸಲ್ಲಿಕೆ ಮಾಡಿದ ಅಭ್ಯರ್ಥಿಗಳಿಗೆ ಪರೀಕ್ಷೆ ಪ್ರವೇಶ ಪತ್ರಗಳನ್ನು ಕಳುಹಿಸಲಾಗುತ್ತದೆ. ಪರೀಕ್ಷೆಗೆ ಹಾಜರಾಗುವುದು, ಈ ಬಗ್ಗೆ ಮಾಹಿತಿಯನ್ನು ಒಕ್ಕೂಟದ ವೆಬ್‌ಸೈಟ್‌ನಲ್ಲಿ ಖಾತರಿಪಡಿಸಿಕೊಳ್ಳುವುದು ಅಭ್ಯರ್ಥಿಗಳ ಜವಾಬ್ದಾರಿಯಾಗಿರುತ್ತದೆ. ನೇಮಕಾತಿ ಕುರಿತು ಒಕ್ಕೂಟದೊಡನೆ ಪತ್ರ ವ್ಯವಹಾರಕ್ಕೆ ಅವಕಾಶವಿಲ್ಲ.

ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳಿಗಾಗಿ ಸಹಾಯವಾಣಿ 9036072155.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+