ಆರ್ ಬಿಐಯಲ್ಲಿ ನೂರಾರು ಹುದ್ದೆಗಳಿಗೆ ಅರ್ಜಿ ಆಹ್ವಾನ

Written By: Ramesh
Subscribe to Oneindia Kannada

ಬೆಂಗಳೂರು. ನವೆಂಬರ್. 07 : ಭಾರತೀಯ ರಿಸರ್ವ್ ಬ್ಯಾಂಕ್ ನಲ್ಲಿ ವಿವಿಧ ರಾಜ್ಯಗಳಲ್ಲಿ ಖಾಲಿ ಇರುವ 610 ಅಸಿಸ್ಟೆಂಟ್ ಹುದ್ದೆಗಳಿಗೆ ಭಾರತೀಯ ರಿಸರ್ವ್ ಬ್ಯಾಂಕ್ (ಆರ್ ಬಿಐ) ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಿದೆ.

610 ಹುದ್ದೆಗಳ ಪೈಕಿ 35 ಹುದ್ದೆಗಳು ಬೆಂಗಳೂರು ಆರ್ ಬಿಐ ಕಚೇರಿಯಲ್ಲಿ ಖಾಲಿ ಇವೆ. ಅರ್ಜಿ ಸಲ್ಲಿಸಲು ನವೆಂಬರ್ 28 ಕೊನೆ ದಿನವಾಗಿದೆ.

ಪ್ರಾಥಮಿಕ ಪರೀಕ್ಷೆ, ಮುಖ್ಯ ಪರೀಕ್ಷೆ, ಮತ್ತು ಸಂದರ್ಶನ ಮೂಲಕ ಈ ಹುದ್ದೆಗಳಿಗೆ ಮೂರು ಹಂತಗಳಲ್ಲಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಇಂಗ್ಲೀಷ್ ಹಾಗೂ ಹಿಂದಿ ಭಾಷೆಗಳಲ್ಲಿ ಸಂದರ್ಶನವಿರುತ್ತದೆ.

RBI Recruitment 2016 Notification 610 Assistant Posts

ಹುದ್ದೆ: ಅಸಿಸ್ಟೆಂಟ್

ವಯೋಮಿತಿ: ಸಾಮಾನ್ಯ ವರ್ಗದವರಿಗೆ 20 ರಿಂದ 28, ಪರಿಶಿಷ್ಟ ಪಂಗಡ ಹಾಗೂ ಪರಿಶಿಷ್ಟ ಜಾತಿ ವರ್ಗಕ್ಕೆ 20 ರಿಂದ 35, ಇನ್ನುಳಿದ ಹಿಂದೂಳಿದ ವರ್ಗಕ್ಕೆ 31 ನಿಗದಿ ಮಾಡಲಾಗಿದೆ.

ವಿದ್ಯಾರ್ಹತೆ: ಬ್ಯಾಚ್ಯುಲರ್ ಆಫ್ ಡಿಗ್ರಿಯಲ್ಲಿ ಶೇ. 50 ರಷ್ಟು ಅಂಕಗಳೊಂದಿಗೆ ತೇರ್ಗಡೆಯಾಗಿರಬೇಕು. ಇನ್ನು ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ವರ್ಗದ ಅಭ್ಯರ್ಥಿಗಳು ಜಸ್ಟ್ ಪಾಸ್ ಆಗಿದ್ದರೆ ಸಾಕು.

ಸಂಬಳ: ಬೇಸಿಕ್ 14650 ತಿಂಗಳಿಗೆ. ಸಾರಿಗೆ ಸೌಲಭ್ಯ, ಮನೆ ಬಾಡಿಗೆ ಸೇರಿದಂತೆ ಹಲವು ಸೌಲಭ್ಯಗಳು ಇರಲಿವೆ.
ಶುಲ್ಕ: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ 50 ರುಗಳು, ಸಾಮಾನ್ಯ ವರ್ಗದವರಿಗೆ 450 ರುಗಳು.
ಹೆಚ್ಚಿನ ಮಾಹಿತಿಗಾಗಿ: www.rbi.org.in ವೆಬ್ ಸೈಟ್ ಸಂಪರ್ಕಿಸಿ.[610 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ ಆರ್ ಬಿಐ]

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Reserve Bank of India is ready to hire the appliction for the 610 available posts of Assistant jobs as the RBI Recruitment 2016. and interested to apply they can submit their application from before the last date that is 28th November 2016.
Please Wait while comments are loading...