PWD Recruitment: ಲೋಕೋಪಯೋಗಿ ಇಲಾಖೆಯಲ್ಲಿ ಖಾಲಿಯಿರುವ ಹುದ್ದೆಗಳಿಗೆ ಅರ್ಜಿ ಆಹ್ವಾನ

PWD Recruitment: ಸರ್ಕಾರಿ ಇಲಾಖೆಗಳಲ್ಲಿ ಉದ್ಯೋಗಾವಕಾಶಗಳು ತೆರೆದುಕೊಳ್ಳುತ್ತಲೇ ಇವೆ. ಹಾಗೆಯೇ ಇದೀಗ ಕರ್ನಾಟಕ ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಗ್ರೂಪ್‌ ಎ ಹುದ್ದೆಗಳಿಗೆ ಕೆಪಿಎಸ್‌ಸಿ ಮತ್ತೆ ಅರ್ಜಿ ಆಹ್ವಾನ ಮಾಡಿದ್ದು, ಈ ಹುದ್ದೆಗಳಿಗೆ ಅರ್ಜಿ ಸಲ್ಲಿಕೆಗೆ ನಾಳೆ ಅಂದರೆ ಫೆಬ್ರವರಿ 3, 2025ರಂದೇ ಕೊನೇ ದಿನ. ಹಾಗಾದರೆ ಅರ್ಜಿ ಸಲ್ಲಿಸುವವರು ಗಮನಿಸಬೇಕಾದ ಮಾಹಿತಿಯನ್ನು ಇಲ್ಲಿ ತಿಳಿಯಿರಿ.

2024ರ ಸೆಪ್ಟೆಂಬರ್ 18ರಂದು ಅಧಿಸೂಚನೆ ಹೊರಡಿಸಿ ಅರ್ಜಿ ಸ್ವೀಕಾರ ಮಾಡಿತ್ತು. ಮತ್ತೆ ಇದೇ ಹುದ್ದೆಗಳಿಗೆ ಕರ್ನಾಟಕ ಲೋಕಸೇವಾ ಆಯೋಗ ಅರ್ಜಿ ಆಹ್ವಾನ ಮಾಡಿತ್ತು. ಗ್ರೂಪ್‌- ಎ 30 ಹುದ್ದೆಗಳಿದ್ದು, ಇದರಲ್ಲಿ 29 ಹುದ್ದೆಗಳು ಮುಕ್ತ ಸ್ಪರ್ಧೆ ಅಭ್ಯರ್ಥಿಗಳನ್ನು ಹಾಗೂ 01 ಕೆಲಸಕ್ಕೆ ಸೇವಾನಿರತ ಸ್ಪರ್ಧೆ ಅಭ್ಯರ್ಥಿಯನ್ನು ಭರ್ತಿ ಮಾಡಲಾಗುತ್ತಿದೆ.

PWD Recruitment Applications Invited for 30 Posts in Public Works Department

ಈ ಹುದ್ದೆಗಳ ಜೊತೆ ಹೈದ್ರಾಬಾದ್-ಕರ್ನಾಟಕ ವೃಂದದ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಗ್ರೂಪ್- ಎ ವೃಂದದ 12 ಹುದ್ದೆಗಳನ್ನು ನೇಮಕಾತಿ ಮಾಡಲಾಗುತ್ತಿದೆ. 11 ಉದ್ಯೋಗಗಳಿಗೆ ಮುಕ್ತ ಸ್ಪರ್ಧೆ ಅಭ್ಯರ್ಥಿಗಳು ಹಾಗೂ 1 ಹುದ್ದೆಗೆ ಸೇವಾನಿರತ ಅಭ್ಯರ್ಥಿಯನ್ನು ಭರ್ತಿ ಮಾಡಲಾಗುತ್ತದೆ. ಹೈದ್ರಾಬಾದ್-ಕರ್ನಾಟಕಕ್ಕೆ ಹುದ್ದೆಗಳನ್ನು ವರ್ಗೀಕರಣಗೊಳಿಸಲಾಗಿದೆ.

ಇನ್ನು ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ವೇತನ 83,700-1,55,200 ರೂಪಾಯಿ ನೀಡಲಾಗುತ್ತದೆ. ಸಾಮಾನ್ಯ ವರ್ಗ- 13, ಪರಿಶಿಷ್ಟ ಜಾತಿ- 05, ಪರಿಶಿಷ್ಟ ಪಂಗಡ - 02, ಪ್ರವರ್ಗ1 - 01, ಪ್ರವರ್ಗ-2ಎ - 05, ಪ್ರವರ್ಗ-2ಬಿ - 01, ಪ್ರವರ್ಗ-3ಎ - 01, ಪ್ರವರ್ಗ-3ಬಿ - 01, ಸೇವಾನಿರತ (ಎಸ್ಸಿ) - 01, ಹೈದರಾಬಾದ್-ಕರ್ನಾಟಕದವರಿಗೆ - 12 ಹುದ್ದೆಗಳು ಸೇರಿದಂತೆ ಒಟ್ಟು 42 ಹುದ್ದೆಗಳು ಖಾಲಿಯಿವೆ.

ಅರ್ಜಿ ಸಲ್ಲಿಸಬಯಸುವವರು ಇಂಜಿನಿಯರಿಂಗ್ ಪದವಿ- ಸಿವಿಲ್ ಇಂಜಿನಿಯರ್, ಕನ್ಸ್ಟ್ರಕ್ಷನ್ ಟೆಕ್ನಲಾಜಿ, ಬಿಲ್ಡಿಂಗ್ ಅಂಡ್ ಕಂಸ್ಟ್ರಕ್ಷನ್ ಟೆಕ್ನಾಲಜಿ, ಸಿವಿಲ್ ಟೆಕ್ನಾಲಜಿ ಕಂಸ್ಟ್ರಕ್ಷನ್ ಟೆಕ್ನಾಲಜಿ, ಕಂಸ್ಟ್ರಕ್ಷನ್ ಇಂಜಿನಿಯರಿಂಗ್ ಮತ್ತು ಮ್ಯಾನೇಜ್‌ಮೆಂಟ್, ಜಿಯೋ ಮೆಕಾನಿಕ್ಸ್‌ ಮತ್ತು ಸ್ಟ್ರಕ್ಚರ್ಸ್‌, ಸ್ಟ್ರಕ್ಚರಲ್ ಅಂಡ್ ಫೌಂಡೇಷನ್ ಇಂಜಿನಿಯರಿಂಗ್, ಸ್ಟ್ರಕ್ಚರಲ್ ಇಂಜಿನಿಯರಿಂಗ್ ಮತ್ತು ಕಂಸ್ಟ್ರಕ್ಷನ್ ಇವುಗಳಲ್ಲಿ ಯಾವುದಾದರು ಒಂದು ಪದವಿ ಪೂರ್ಣಗೊಳಿಸಿರಬೇಕಾಗುತ್ತದೆ.

ಸೇವಾನಿರತ ಹುದ್ದೆ ಸ್ಪರ್ಧೆಯ ಹುದ್ದೆಗೆ ಅರ್ಜಿ ಸಲ್ಲಿಸುವವರು ಲೋಕೋಪಯೋಗಿ ಇಲಾಖೆಯಲ್ಲಿ ಸಹಾಯಕ ಇಂಜಿನಿಯರ್ (ಗ್ರೇಡ್-1) ಅಥವಾ ಸಹಾಯಕ ಇಂಜಿನಿಯರ್ (ಗ್ರೇಡ್‌-2) ಅಥವಾ ಕಿರಿಯ ಇಂಜಿನಿಯರ್ ಆಗಿರಬೇಕು. ಯಾವುದೇ ಕೇಡರ್‌ನಲ್ಲಿ ಕನಿಷ್ಠ 5 ವರ್ಷ ಕೆಲಸ ಮಾಡಿರಬೇಕು. ಇಲಾಖೆ ವಯಸ್ಸು ನಿಗದಿ ಪಡಿಸಿಲ್ಲ. ಸೇವಾನಿರತ ಅಭ್ಯರ್ಥಿ, ಸಹ ಮುಕ್ತ ಅಭ್ಯರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆ ಇರುತ್ತದೆ.

ಅರ್ಜಿ ಶುಲ್ಕದ ವಿಚಾರಕ್ಕೆ ಬಂದರೆ, ಸಾಮಾನ್ಯ ಅರ್ಹತೆ ಅಭ್ಯರ್ಥಿಗಳು - 600 ರೂಪಾಯಿ, ಇತರೆ ಹಿಂದುಳಿದ ವರ್ಗದ ಅಭ್ಯರ್ಥಿಗಳು - 300 ರೂಪಾಯಿ, ಎಸ್ಸಿ, ಎಸ್ಟಿ, ಪ್ರ-01, ಮಾಜಿ ಸೈನಿಕ, ವಿಶೇಷ ಚೇತನ ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ.

ಹೆಚ್ಚಿನ ಮಾಹಿತಿಗಾಗಿ https://www.kpsc.kar.nic.in/Corrigendum%20Notification%20RPC.pdf, https://www.kpsc.kar.nic.in/Corrigendum%20Notification%20HK.pdf ಭೇಟಿ ನೀಡಬಹುದಾಗಿದೆ. ಇನ್ನು ಅರ್ಜಿ ಸಲ್ಲಿಕೆಗೆ https://kpsconline.karnataka.gov.in/HomePage/index.html ಗೆ ಭೇಟಿ ನೀಡಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+