ಪಿಎಸ್‌ಐ ಹುದ್ದೆಗೆ ಅರ್ಜಿ ಸಲ್ಲಿಸಿದವರು ತಪ್ಪದೇ ಓದಿ

ಬೆಂಗಳೂರು, ಫೆಬ್ರವರಿ 16 : ಪೊಲೀಸ್ ಸಬ್ ಇನ್ಸ್‌ಪೆಕ್ಟರ್ (ಸಿವಿಲ್) ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಪ್ರಮುಖ ಮಾಹಿತಿಯೊಂದಿದೆ. 8/3/2020ರಂದು ಲಿಖಿತ ಪರೀಕ್ಷೆಯನ್ನು ನಡೆಸಲಾಗುತ್ತದೆ ಎಂದು ಪ್ರಕಟಣೆ ಹೇಳಿದೆ.

ಪೊಲೀಸ್ ಸಬ್ ಇನ್ಸ್‌ಪೆಕ್ಟರ್ (ಸಿವಿಲ್) (ಪುರುಷ & ಮಹಿಳಾ) ಮತ್ತು ಸೇವಾನಿರತರನ್ನೊಳಗೊಂಡ ಹುದ್ದೆಗಳಿಗೆ ಮಾರ್ಚ್ 8ರಂದು ಲಿಖಿತ ಪರೀಕ್ಷೆಯನ್ನು ನಡೆಸಲಾಗುತ್ತದೆ.

ಒಂದು ಕೊಠಡಿಯಲ್ಲಿ 20*1 = 20 ಅಥವ 20*2= 40 ಅಭ್ಯರ್ಥಿಗಳು ಕುಳಿತು ಪರೀಕ್ಷೆ ಬರೆಯಲು ಸ್ಥಳಾವಕಾಶವಿರುವ ಪರೀಕ್ಷಾ ಕೇಂದ್ರಗಳ ಪಟ್ಟಿಯನ್ನು ತಯಾರಿಸಿ 18/2/2020ರೊಳಗಾಗಿ ಕಳುಹಿಸುವಂತೆ ಸೂಚನೆ ನೀಡಲಾಗಿದೆ.

PSI Recruitment Written Exam On March 8

8/3/2020ರಂದು ಬೆಳಗ್ಗೆ 10 ರಿಂದ 11.30ರ ತನಕ ಪತ್ರಿಕೆ -1, ಮಧ್ಯಾಹ್ನ 1 ರಿಂದ 2.30ರ ತನಕ ಲಿಖಿತ ಪರೀಕ್ಷೆಗಳು ನಡೆಯಲಿದೆ. ಅರ್ಜಿಗಳನ್ನು ಸಲ್ಲಿಸಿರುವ ಅಭ್ಯರ್ಥಿಗಳು ಪರೀಕ್ಷೆಗೆ ತಯಾರಿ ಆರಂಭಿಸಬೇಕು.

ಬೆಂಗಳೂರು ನಗರದಲ್ಲಿ 18000, ಮೈಸೂರು ನಗರದಲ್ಲಿ 10000, ಹುಬ್ಬಳ್ಳಿ-ಧಾರವಾಡದಲ್ಲಿ 9500, ದಾವಣಗೆರೆಯಲ್ಲಿ 7500, ಬಳ್ಳಾರಿಯಲ್ಲಿ 9000 ಅಭ್ಯರ್ಥಿಗಳು ಪರೀಕ್ಷೆಯನ್ನು ಬರೆಯಲಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+