Post Office Recruitment 2023: ಲಿಖಿತ ಪರೀಕ್ಷೆ ಇಲ್ಲ, ನೇರ ಸಂದರ್ಶನದಡಿ ಸರ್ಕಾರಿ ಉದ್ಯೋಗ ಭರ್ತಿ
ಬೆಂಗಳೂರು, ಆಗಸ್ಟ್ 03: ಭಾರತೀಯ ಅಂಚೆ ಇಲಾಖೆಯು ತನ್ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿ ಪ್ರಕ್ರಿಯೆ ಆರಂಭಿಸಿದ್ದು, ಈ ಸಂಬಂಧ ಅರ್ಹರಿಂದ ಅರ್ಜಿ ಆಹ್ವಾನಿಸಿದೆ. ಕೇಂದ್ರ ಸರ್ಕಾರಿ ಉದ್ಯೋಗ ಬಯಸುವವರಿಗೆ ಇದೊಂದು ಉತ್ತಮ ಅವಕಾಶವಾಗಿದೆ. ಆಸಕ್ತರಿಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಕೆಗೆ ಆಗಸ್ಟ್ 23ರವರೆಗೆ ಅವಕಾಶ ಇರಲಿದೆ.
ಭಾರತೀಯ ಅಂಚೆ ಇಲಾಖೆಯಲ್ಲಿ ಬ್ರಾಂಚ್ ಪೋಸ್ಟ್‌ಮಾಸ್ಟರ್ (BPM), ಅಸಿಸ್ಟೆಂಟ್ ಬ್ರಾಂಚ್ ಪೋಸ್ಟ್‌ಮಾಸ್ಟರ್ (ABPM), ಡಾಕ್ ಸೇವಕ್ ಹುದ್ದೆಗಳಿಗೆ ಗ್ರಾಮೀಣ ಡಾಕ್ ಸೇವಕ್ (ಜಿಡಿಎಸ್) ನೇಮಕಾತಿಗಾಗಿ ಇಲಾಖೆ ಅಧಿಸೂಚನೆ ಹೊರಡಿಸಿದೆ. ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಕೆ ಮುನ್ನ ಹುದ್ದೆಯ ಸಂಪೂರ್ಣ ಮಾಹಿತಿ, ನೇಮಕಾತಿ ಹೇಗೆ? ಶೈಕ್ಷಣಿಕ ಅರ್ಹತೆ ಬಗ್ಗೆ ತಿಳಿಯಿರಿ.

ವಿಶೇಷವೆಂದರೆ ಅಭ್ಯರ್ಥಿಗಳನ್ನು ಮೆರಿಟ್ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ದೆ. ಈ ನೇಮಕಾತಿಗಾಗಿ ಯಾವುದೇ ಲಿಖಿತ ಪರೀಕ್ಷೆ ಅಥವಾ ಸಂದರ್ಶನ ಇರುವುದಿಲ್ಲ. ಅರ್ಜಿ ಸಲ್ಲಿಸಲಿರುವ ಅಭ್ಯರ್ಥಿಗಳು 10ನೇ ತರಗತಿ ಉತ್ತೀರ್ಣರಾಗಿರಬೇಕು. ಅಭ್ಯರ್ಥಿಗಳ ವಯಸ್ಸು ಕನಿಷ್ಠ 18 ವರ್ಷ ಇದ್ದು, ಗರಿಷ್ಠ 40 ವರ್ಷ ಮೀರಿಬಾರದು.
ವೇತನ ವಿವರ
ಇಲಾಖೆಯು ಅಭ್ಯರ್ಥಿಗಳ 10ನೇ ತರಗತಿ ಅಂಕದ ಆಧಾರದಲ್ಲಿ ಆಯ್ಕೆ ಮಾಡಲಾಗುತ್ತದೆ. ಆಯ್ಕೆ ಆಗುವವರಿಗೆ ಮಾಸಿಕವಾಗಿ 12,000 ರೂಪಾಯಿಯಿಂದ 24,470 ರೂಪಾಯಿವರೆಗೆ ಇರಲಿದೆ.

ಅರ್ಜಿ ಶುಲ್ಕ ಎಷ್ಟು?
ಅಂಚೆ ಇಲಾಖೆಯ ಖಾಲಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಸಾಮಾನ್ಯ ವರ್ಗದವರು 100 ರೂಪಾಯಿ ಪಾವತಿಸಬೇಕಿದೆ. ಎಸ್‌ಸಿ, ಎಸ್‌ಟಿ/PWD ವರ್ಗದ ಅಭ್ಯರ್ಥಿಗಳಿಗೆ ಯಾವ ಶುಲ್ಕ ಇರುವುದಿಲ್ಲ.
ದಾಖಲೆ ಪರಿಶೀಲನೆ
ಅಭ್ಯರ್ಥಿಗಳ ಮೆರಿಟ್ ಪಟ್ಟಿಯಿಂದ ಶಾರ್ಟ್‌ಲಿಸ್ಟ್ ಮಾಡಿದ ಬಳಿಕ ಅವರು ದಾಖಲೆಗಳನ್ನು ಪರಿಶೀಲನೆ ಇರಲಿದೆ. ಅಂದು ಅಭ್ಯರ್ಥಿಗಳು ಹಾಜರಾಗಬೇಕಿರುತ್ತದೆ. ಅವರ ಅರ್ಹತೆಯನ್ನು ಪರಿಶೀಲನೆಗಾಗಿ ಮೂಲ ದಾಖಲೆಗಳನ್ನು ಕಡ್ಡಾಯವಾಗಿ ಒದಗಿಬೇಕಿರುತ್ತದೆ.
ಈ ಎಲ್ಲ ಪ್ರಕ್ರಿಯೆ ಮುಗಿದು ಆಯ್ಕೆಯಾದ ಅಭ್ಯರ್ಥಿಗಳನ್ನು ಆಯಾ ಅಂಚೆ ವಲಯದಲ್ಲಿ GDS ಆಗಿ ನೇಮಕ ಮಾಡಲಾಗುವುದು ಎಂದು ಅಧಿಸೂಚನೆ ತಿಳಿಸಿದೆ. ಹೆಚ್ಚಿನ ಮಾಹಿತಿಗೆ ಅಧಿಕೃತ ವೆಬ್‌ಸೈಟ್ https://indiapostgdsonline.gov.in/ ಗೆ ಭೇಟಿ ನೀಡುವಂತೆ ತಿಳಿಸಲಾಗಿದೆ.












Click it and Unblock the Notifications