ಕರ್ನಾಟಕ ಎನ್ ಐಟಿಯಲ್ಲಿ ಹಿರಿಯ, ಕಿರಿಯ ಸಂಶೋಧಕರ ಹುದ್ದೆಗಳಿಗೆ ಅರ್ಜಿ
ಬೆಂಗಳೂರು, ಏಪ್ರಿಲ್ 13 : ಕರ್ನಾಟಕದ ನ್ಯಾಷನಲ್ ಇನ್ಸ್ ಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ (ಎನ್ಐಟಿ) ಖಾಲಿ ಇರುವ ಹಿರಿಯ ಮತ್ತು ಕಿರಿಯ ಸಂಶೋಧಕರ ಒಟ್ಟು 6 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.
ಆಸಕ್ತ ಮತ್ತು ಅರ್ಹರು ನಿಗದಿತ ದಿನಾಂಕ ಏಪ್ರಿಲ್ 29ರೊಳಗೆ ಅರ್ಜಿ ಸಲ್ಲಿಸಹುದಾಗಿದೆ.[ಕರ್ನಾಟಕದಾದ್ಯಂತ ಅಂಚೆ ಕಚೇರಿಯಲ್ಲಿ 1048 ಹುದ್ದೆಗಳಿವೆ, ಅರ್ಜಿ ಹಾಕಿ]

ಹುದ್ದೆಗಳು: 6
* ಹಿರಿಯ ಸಂಶೋಧಕರು-04
* ಕಿರಿಯ ಸಂಶೋಧಕರು-02
ವಯೋಮಿತಿ: ಹಿರಿಯ ಸಂಶೋಧಕ ಹುದ್ದೆಗೆ 30 ವರ್ಷ ಮತ್ತು ಕಿರಿಯ ಸಂಶೋಧಕ ಹುದ್ದೆಗೆ 28 ವಯಸ್ಸನ್ನು ನಿಗದಿ ಮಾಡಲಾಗಿದೆ.
ವಿದ್ಯಾರ್ಹತೆ: ಮೆಕ್ಯಾನಿಕಲ್ ಇಂಜಿನಿಯರಿಂಗ್, ಬಿಇ ಮತ್ತು ಬಿಟೆಕ್ ಮೆಕ್ಯಾನಿಕಲ್ ಡಿಸೈನ್ ಮತ್ತು ಮಶೀನ್ ಡಿಸೈನ್ ನಲ್ಲಿ ಇಂಜಿನಿಯರಿಗ್ ಪದವಿಯನ್ನು ಶೇ.60 ಅಂಕದೊಂದೊಗೆ ಉತ್ತೀರ್ಣರಾಗಿರಬೇಕು.
ಆಯ್ಕೆ ವಿಧಾನ: ಹಿರಿಯ ಸಂಶೋಧಕ ಮತ್ತು ಕಿರಿಯ ಸಂಶೋಧಕ ಹುದ್ದೆಗಳಿಗೆ ಸಂದರ್ಶನ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.
ಇನ್ನು ಹೆಚ್ಚಿನ ವಿವರಣೆಗೆ ಇಲ್ಲಿ ಕ್ಲಿಕ್ಕಿಸಿ











Click it and Unblock the Notifications