Job in Bengaluru: ನಿಮ್ಹಾನ್ಸ್‌ನಲ್ಲಿ ನೇರ ಸಂದರ್ಶನ, ತಿಂಗಳಿಗೆ ₹1.50 ಲಕ್ಷ ವೇತನ

ಬೆಂಗಳೂರು, ನವೆಂಬರ್ 20: ಬೆಂಗಳೂರಲ್ಲಿನ ರಾಷ್ಟ್ರೀಯ ಮಾನಸಿಕ ಹಾಗೂ ನರ ವಿಜ್ಞಾನ ಸಂಸ್ಥೆ ( NIMHANS) ತನ್ನಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ನೇಮಕಾತಿ ಪ್ರಕ್ರಿಯೆ ಆರಂಭಿಸಿದೆ. ಈ ನಿಮಿತ್ತ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಆಸಕ್ತರು ಬೆಂಗಳೂರಿನಲ್ಲಿ ಕೆಲಸಕ್ಕಾಗಿ ಹುಡುಕಾಡುವವರಿಗೆ ಇದೊಂದು ಉತ್ತಮ ಅವಕಾಶವಾಗಿದೆ.

ಬೆಂಗಳೂರಲ್ಲಿನ ರಾಷ್ಟ್ರೀಯ ಮಾನಸಿಕ ಹಾಗೂ ನರ ವಿಜ್ಞಾನ ಸಂಸ್ಥೆ (NIMHANS) ನಲ್ಲಿ ಒಟ್ಟು ಒಂದು ಕ್ಲಿನಿಕಲ್ ಸೈಂಟಿಸ್ಟ್ (ಮೆಡಿಕಲ್) ಹುದ್ದೆ ಖಾಲಿ ಇದೆ. ಈ ಹುದ್ದೆಗೆ ಸೇರಬಯಸುವ ಆಸಕ್ತ ಅಭ್ಯರ್ಥಿಗಳಿಗೆ ಕೂಡಲೇ ಅರ್ಜಿ ಸಲ್ಲಿಸಬೇಕಿದೆ. ಅಭ್ಯರ್ಥಿಗಳಿಗೆ ಬೆಂಗಳೂರಿನಲ್ಲಿಯೇ ಬೆಳಗ್ಗೆ 10.30ಕ್ಕೆ ಸಂದರ್ಶನ ನಡೆಯಲಿದೆ ಎಂದು ನಿಮ್ಹಾನ್ಸ್ ಅಧಿಸೂಚನೆ ತಿಳಿಸಿದೆ.

Nimhans Jobs Recruitment 2024 Direct Interview on Nov 21st

ನೇಮಕಾತಿ ಪೂರ್ಣ ಮಾಹಿತಿ

ನೇಮಕಾತಿ ಸಂಸ್ಥೆ: NIMHANS ಬೆಂಗಳೂರು

ನೇಮಕಾತಿ ಹುದ್ದೆ: ಕ್ಲಿನಿಕಲ್ ಸೈಂಟಿಸ್ಟ್

ಒಟ್ಟು ಹುದ್ದೆ: ಒಂದು

ವಯೋಮಿತಿ: ಗರಿಷ್ಠ 40 ವರ್ಷ

ಮಾಸಿಕ ವೇತನ: 1,50,000 ರೂಪಾಯಿ

ಪೋಸ್ಟಿಂಗ್: ಬೆಂಗಳೂರು

ಸಂದರ್ಶನ ಸ್ಥಳ: ಬೆಂಗಳೂರು

ಶೈಕ್ಷಣಿಕ ಅರ್ಹತೆ ಏನಿರಬೇಕು?

ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಇಲ್ಲಿವೇ ಶೈಕ್ಷಣಿಕ ಮಂಡಳಿಯಲ್ಲಿ ಸಾಯಿಯಾಟ್ರಿಯಲ್ಲಿ ಎಂ.ಡಿ ಪೂರ್ಣ ಮಾಡಿರಬೇಕು ಎಂದು ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರ ವಿಜ್ಞಾನ ಸಂಸ್ಥೆ- ಬೆಂಗಳೂರು ನೇಮಕಾತಿ ಪ್ರಕಟಣೆ ತಿಳಿಸಿದೆ.

ವಯಸ್ಸಿನ ಮಿತಿ

ಅರ್ಜಿ ಸಲ್ಲಿಸಲಿರುವ ಅಭ್ಯರ್ಥಿಗಳ ಗರಿಷ್ಠ ವಯಸ್ಸು 40 ವರ್ಷ ಎಂದು ತಿಳಿಸಲಾಗಿದೆ. ಅಷ್ಟು ವಯೋಮಿತಿ ಒಳಗಿನವರು ನೇರವಾಗಿ ಸಂದರ್ಶನಕ್ಕೆ ಹಾಜರಾಗಬಹುದು.

ಆಯ್ಕೆ ಪ್ರಕ್ರಿಯೆ ಹೇಗೆ

ಅರ್ಜಿ ಸಲ್ಲಿಸುವ ಅಭ್ಯರ್ಥಿಗಲಿಗೆ ಮೊದಲು ಲಿಖಿತ ಪರೀಕ್ಷೆ ನಡೆಸಲಿದೆ. ಬಳಿಕ ಅವರಿಗೆ ಸಂದರ್ಶನ ನಡೆಸಲಿದೆ. ಆಯ್ಕೆ ಆಗುವವರಿಗೆ ಮಾಸಿಕವಾಗಿ ಒಂದು 1,50,000 ರೂಪಾಯಿ ವೇತನ ಜೊತೆಗೆ ಬೆಂಗಳೂರಿನಲ್ಲಿ ಪೋಸ್ಟಿಂಗ್ ನೀಡಲಿದೆ.

ಸಂದರ್ಶನ ದಿನ

ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ನಾಳೆ ಗುರುವಾರ ನವೆಂಬರ್ 21ರಂದು ಕೊನೆಯ ದಿನವಾಗಿದೆ. ನಾಳೆಯೇ ಬೆಳಗ್ಗೆ 10.30ಕ್ಕೆ ಬೆಂಗಳೂರಿನಲ್ಲಿ ಸಂದರ್ಶನ ನಡೆಯಲಿದೆ.

ಈ ಸಂದರ್ಶನವು ಸಮಿತಿ ಕೊಠಡಿ, ಶೈಕ್ಷಣಿಕ ಮತ್ತು ಮೌಲ್ಯಮಾಪನ ವಿಭಾಗದ ಬಳಿ, IV ಮಹಡಿ, ನ್ಯೂರೋಬಯಾಲಜಿ ಸಂಶೋಧನಾ ಕೇಂದ್ರ, ಆಡಳಿತಾತ್ಮಕ ಬ್ಲಾಕ್, ನಿಮ್ಹಾನ್ಸ್, ಬೆಂಗಳೂರು ಇಲ್ಲಿ ನಡೆಯಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+