Mysore Paints Recruitment 2023 : ಮೈಸೂರು ಪೇಯಿಂಟ್ಸ್ ನೇಮಕಾತಿ, ತಕ್ಷಣ ಅರ್ಜಿ ಹಾಕಿ

ಮೈಸೂರು ಪೇಯಿಂಟ್ಸ್ ಅಂಡ್ ವಾರ್ನಿಷ್ ಲಿಮಿಟೆಡ್, ಮೈಸೂರು 4 ಹುದ್ದೆಗಳ ನೇಮಕಾತಿಗೆ ಅರ್ಜಿ ಕರೆದಿದೆ.

ಬೆಂಗಳೂರು, ಮಾರ್ಚ್ 10; ಮೈಸೂರು ಪೇಯಿಂಟ್ಸ್ ಅಂಡ್ ವಾರ್ನಿಷ್ ಲಿಮಿಟೆಡ್, ಮೈಸೂರು ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿಗಳನ್ನು ಕರೆದಿದೆ. ಆಸಕ್ತರು ಆಫ್‌ಲೈನ್ ಮೂಲಕ ಮಾರ್ಚ್ 13ರ ತನಕ ಅರ್ಜಿಗಳನ್ನು ಸಲ್ಲಿಕೆ ಮಾಡಬಹುದಾಗಿದೆ. ಆಯ್ಕೆಗೊಂಡ ಅಭ್ಯರ್ಥಿಗಳು ಮೈಸೂರಿನಲ್ಲಿ ಕೆಲಸ ಮಾಡಬೇಕಿದೆ ಎಂದು ನೇಮಕಾತಿ ಆದೇಶ ತಿಳಿಸಿದೆ.

ಅನುಚ್ಛೇಧ 371 (ಜೆ) ಅಡಿಯಲ್ಲಿ ಮೀಸಲಿರಿಸಿರುವ ಹುದ್ದೆಗಳ ನೇರ ನೇಮಕಾತಿಗಾಗಿ ಅರ್ಜಿಗಳನ್ನು ಕರೆಯಲಾಗಿದೆ. ಎಂಪಿವಿಎಲ್ ವೃಂದ ಮತ್ತು ನೇಮಕಾತಿ ನಿಯಮಾವಳಿಗಳು 2010ರ ಪ್ರಕಾರ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಕರೆಯಲಾಗಿದೆ. ಕೊನೆಯ ದಿನಾಂಕದ ನಂತರ ಬರುವ ಅರ್ಜಿಗಳನ್ನು ಪರಿಗಣಿಸುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.

Mysore Paints Recruitment Apply For 4 Posts

ಕಂಪನಿ ಕಾರ್ಯದರ್ಶಿ ಗ್ರೂಪ್ 'ಎ' 1 ಹುದ್ದೆ, ವೇತನ 56,800-80,100 ರೂ.ಗಳು. ವ್ಯವಸ್ಥಾಪಕರು (ಲೆಕ್ಕಪತ್ರ) ಗ್ರೂಪ್ 'ಎ' 1 ಹುದ್ದೆ, ವೇತನ 42,000-72,500 ರೂ.ಗಳು. ಉಪ ವ್ಯವಸ್ಥಾಪಕರು (ಮೈಟೆನೆನ್ಸ್) ಗ್ರೂಪ್ 'ಬಿ' 1 ಹುದ್ದೆ, ವೇತನ 26,000-55,350 ರೂ.ಗಳು. ಸೂಪರ್ ವೈಸರ್ ಗ್ರೂಪ್ 'ಸಿ' 1 ಹುದ್ದೆ, ವೇತನ 20,400-45,300 ರೂ.ಗಳು. ಈ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಕರೆಯಲಾಗಿದೆ.

ಆಸಕ್ತ ಮತ್ತು ಅರ್ಹರು ಅರ್ಜಿ ನಮೂನೆಗಳನ್ನು ಡೌನ್‌ಲೋಡ್ ಮಾಡಿಕೊಂಡು ಅಗತ್ಯ ದಾಖಲೆಗಳನ್ನು ಲಗತ್ತಿಸಿ ಸಲ್ಲಿಸಬೇಕು. ಅಭ್ಯರ್ಥಿಗಳು ತಾಳ್ಮೆಯಿಂದ ಸೂಚನೆಗಳನ್ನು ಓದಿ ಅಗತ್ಯ ಮಾಹಿತಿ ಭರ್ತಿ ಮಾಡಬೇಕು, ಅರ್ಜಿಯಲ್ಲಿ ಸಲ್ಲಿಕೆ ಮಾಡಿದ ಮಾಹಿತಿ ಬದಲಾವಣೆ ಮಾಡಲು ಅವಕಾಶವಿಲ್ಲ. ಒಂದಕ್ಕಿಂತ ಹೆಚ್ಚು ಹುದ್ದೆಗಳಿಗೆ ಅರ್ಜಿ ಸಲ್ಲಿಕೆ ಮಾಡುವವರು ಪ್ರತ್ಯೇಕವಾಗಿ ಅರ್ಜಿ ಸಲ್ಲಿಸಬೇಕು. ತಪ್ಪು ಮಾಹಿತಿ ನೀಡಿದರೆ ಕಾನೂನಿನ ಅನ್ವಯ ಕ್ರಮ ಕೈಗೊಳ್ಳಲಾಗುತ್ತದೆ.

jobs

ವಯೋಮಿತಿ ವಿವರ; ಅರ್ಜಿಗಳನ್ನು ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕದ ಒಳಗಾಗಿ ಅಭ್ಯರ್ಥಿಗಳು ಕನಿಷ್ಠ 21 ವರ್ಷದ ವಯೋಮಿತಿ ಹೊಂದಿರಬೇಕು. ಗರಿಷ್ಠ ವಯೋಮಿತಿ ಸಾಮಾನ್ಯ ವರ್ಗಕ್ಕೆ 35 ವರ್ಷ,ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ/ ಪ್ರವರ್ಗ-1ಕ್ಕೆ 40 ವರ್ಷ. ಪ್ರವರ್ಗ 2(ಎ), ಪ್ರವರ್ಗ 2(ಬಿ)/ ಪ್ರವರ್ಗ 3 (ಬಿ) 38 ವರ್ಷಗಳು. ಮಾಜಿ ಸೈನಿಕ ಅಭ್ಯರ್ಥಿಗಳಿಗೆ ಸೇನೆಯಲ್ಲಿ ಸಲ್ಲಿಕೆ ಮಾಡಿರುವ ಸೇವೆಯ ಒಟ್ಟು ವರ್ಷಗಳ ಜೊತೆಗೆ 3 ವರ್ಷದ ಸಡಿಲಿಕೆ ನೀಡಲಾಗುತ್ತದೆ.

ಅರ್ಜಿ ಸಲ್ಲಿಸುವವರು ಕನ್ನಡ ಓದಲು ಬರೆಯಲು ಮತ್ತು ಮಾತನಾಡಲು ತಿಳಿದಿರುವುದು ಕಡ್ಡಾಯ. ಇಂಗ್ಲಿಶ್/ ಹಿಂದಿ ಭಾಷೆ ಮಾತನಾಡುವುದು, ಬರೆಯುವಿಕೆ ಅಪೇಕ್ಷಣೀಯ.

ಅಗತ್ಯ ದಾಖಲೆಗಳನ್ನು ಸ್ವಯಂ ದೃಢೀಕರಿಸಿ, ಅರ್ಜಿಯ ಜೊತೆ ಲಗತ್ತಿಸಿ ಸ್ಪೀಡ್, ರಿಜಿಸ್ಟರ್, ಕೋರಿಯರ್ ಮೂಲಕ ಸಲ್ಲಿಕೆ ಮಾಡಲು ವಿಳಾಸ. Mysore Paints & Varnish Limited, New Banni Mantapa Layout, Mysuru - 570015, Karnataka.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+