
ನಿಮಗೆ ಉದ್ಯೋಗ ಬೇಕೆ? ಹಾಗಾದ್ರೆ ಹಿಂದಿ ಮೂಲಕ ಜಪಾನೀಸ್ ಕಲಿಯಿರಿ
ಬೆಂಗಳೂರು ಆಗಸ್ಟ್ 24: 'ನಾವೀಸ್ ಹ್ಯೂಮನ್ ರಿಸೋರ್ಸಸ್ ಪ್ರೈವೇಟ್ ಲಿಮಿಟೆಡ್' ಸಂಸ್ಥೆ ಹೊರ ತಂದ ಹಿಂದಿ ಭಾಷೆಯ ಮೂಲಕ ಜಪಾನೀಸ್ ಕಲಿಯಬಹುದಾದ ವಿಶ್ವದ ಪ್ರಪ್ರಥಮ 'ಮಾಂತೇನ್' ಹೆಸರಿನ ಪುಸ್ತಕವನ್ನು ಬೆಂಗಳೂರಿನಲ್ಲಿ ಲೋಕಾರ್ಪಣೆ ಮಾಡಲಾಯಿತು.
ಬುಧವಾರ ಈ ಪುಸ್ತಕವನ್ನು ಜಪಾನ್ ದೇಶದ ರಾಯಭಾರಿ ಎಚ್.ಇ ಸತೋಷಿ ಸುಜುಕಿ ಲೋಕಾರ್ಪಣೆ ಮಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಜಪಾನ್ ದೇಶದಲ್ಲಿ ವೃದ್ಧಾಪ್ಯರ ಸಂಖ್ಯೆ ಹೆಚ್ಚಿದೆ. ಇವರ ಆರೈಕೆ, ಹಾಸ್ಪಿಟಾಲಿಟಿ, ಕೃಷಿ ಮತ್ತು ಇತರೆ ಕ್ಷೇತ್ರಗಳಲ್ಲೂ ಜಪಾನ್‌ನಲ್ಲಿ ಉದ್ಯೋಗಾವಕಾಶಗಳು ಹೆಚ್ಚಿವೆ. ಭಾರತೀಯರು ಈ ಅವಕಾಶಗಳನ್ನು ಸದುಪಯೋಗ ಪಡೆದುಕೊಳ್ಳಬೇಕು. ಅದಕ್ಕಾಗಿ ನಾವೀಸ್ ಸಂಸ್ಥೆ ಹೊರತಂದಿರುವ ಹಿಂದಿ ಭಾಷೆಯಲ್ಲಿ ಜಪಾನೀಸ್ ಭಾಷೆಯನ್ನು ಕಲಿಯಬಹುದಾದ ವಿಶ್ವದಲ್ಲೆ ಪ್ರಪ್ರಥಮ ಪುಸ್ತಕ 'ಮಾಂತೇನ್' ಭಾರತೀಯರಿಗೆ ನೆರವಾಗಲಿದೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಸಮೀಕ್ಷೆ: ಹಳೇ ಕೆಲಸಕ್ಕೆ ಸುಸ್ತಾದ ಉದ್ಯೋಗಿಗಳು! 30% ಮಂದಿ ಕೆಲಸ ಬದಲಾಯಿಸಲು ಕಾರಣವೇನು?
ಜಪಾನ್ ಹಾಗೂ ಭಾರತ ದೇಶ ಬಹಳ ಆತ್ಮೀಯ ಸಂಬಂಧವನ್ನು ಹೊಂದಿವೆ. ದಶಕಗಳ ಈ ಸಂಬಂಧವನ್ನು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಉತ್ತಮ ಸಹಕಾರ ನೀಡುತ್ತಿದ್ದಾರೆ. ಜಪಾನ್ ದೇಶದಲ್ಲಿ ವೃದ್ಧರ ಸಂಖ್ಯೆ ಹೆಚ್ಚಿದೆ. ಅವರ ಆರೈಕೆಗೆ ಅಗತ್ಯವಿರುವ ಕೌಶಲ್ಯ ಹೊಂದಿರುವ ಮಾನವ ಸಂಪನ್ಮೂಲದ ಅಗತ್ಯತೆ ಹೆಚ್ಚಾಗಿದೆ. ಅದರಲ್ಲೂ ಜಪಾನೀಸ್ ಭಾಷೆಯನ್ನು ಕಲಿತಿರುವಂತಹ ಆರೈಕೆ ಕ್ಷೇತ್ರದ ಜನರಿಗೆ ಉತ್ತಮ ಬೇಡಿಕೆಯೂ ಇದೆ.

ಜಪಾನ್ ಉದ್ಯೋಗವಕಾಶ ಲಾಭ ಪಡೆಯಿರಿ
ಜಪಾನ್ ದೇಶದಲ್ಲಿ ಉದ್ಯೋಗ ಪಡೆಯಲು ಜಪಾನೀಸ್ ಭಾಷೆಯನ್ನು ಕಲಿತಿರುವುದು ಕಡ್ಡಾಯವಾಗಿ. ಆ ಭಾಷೆಯನ್ನು ಸುಲಭವಾಗಿ ಕಲಿಯುವ ನಿಟ್ಟಿನಲ್ಲಿ ಪ್ರಪ್ರಥಮವಾಗಿ ಭಾರತೀಯರಿಗೆ ಅನುಕೂಲವಾಗುವಂತೆ ಹಿಂದಿಯಲ್ಲಿ ಮಾಂತೇನ್ (ಹಿಂದಿ-ಜಪಾನೀಸ್) ಪುಸ್ತಕ ಬಿಡುಗಡೆ ಮಾಡಲಾಗಿದೆ. ಭಾರತೀಯ ಯುವ ಜನತೆ ಈ ಉದ್ಯೋಗಾವಕಾಶಗಳ ಸದುಪಯೋಗ ಪಡೆದುಕೊಳ್ಳುವಂತೆ ಜಪಾನ್ ದೇಶದ ರಾಯಭಾರಿ ಎಚ್.ಇ ಸತೋಷಿ ಸುಜುಕಿ ಕರೆ ನೀಡಿದ್ದಾರೆ.

10ಸಾವಿರಕ್ಕೂ ಅಧಿಕ ಮಂದಿಗೆ ತರಬೇತಿ
ನಾವೀಸ್ ಸಂಸ್ಥೆಯ ಅಧ್ಯಕ್ಷರು ಹಾಗೂ ವ್ಯವಸ್ಥಾಪಕ ನಿರ್ದೇಶಕರಾದ ಸಂಬಂದಮ್ ರಾಜಕುಮಾರ್ ಮಾತನಾಡಿ, ನಮ್ಮ ಸಂಸ್ಥೆ ಜಪಾನ್ ದೇಶದ ಜೊತೆ ಉತ್ತಮ ಸಂಬಂಧ ಹೊಂದಿದೆ. ಭಾರತದಲ್ಲಿ ಜಪಾನ್ ಭಾಷೆ ಕಲಿಸುವ ತರಬೇತಿ ಕೇಂದ್ರವಾಗಿರುವ ನಾವೀಸ್, ಕಳೆದ 20 ವರ್ಷಗಳಿಂದ ಸುಮಾರು 10ಸಾವಿರಕ್ಕೂ ಹೆಚ್ಚು ಮಂದಿಗೆ ಜಪಾನ್ ಭಾಷೆಯ ತರಬೇತಿ ನೀಡಿದೆ. ನಾವೀಸ್ ಸಂಸ್ಥೆಯಲ್ಲಿ ಜಪಾನ್ ಭಾಷೆ ಕಲಿಸುವ 13 ಬೋಧಕರಿದ್ದು ಎಲ್ಲರೂ ಜಪಾನ್ ಮೂಲದವರಾಗಿದ್ದಾರೆ. ಹಾಗೆಯೇ, ಜಪಾನೀಸ್ ಭಾಷೆಯಲ್ಲಿ ತರಬೇತಿ ಪಡೆದ ಶಿಕ್ಷಕರು ತರಬೇತಿ ನೀಡಿದ್ದಾರೆ ಎಂದು ತಿಳಿಸಿದರು.

ಭಾರತೀಯರಿಗೆ ಉದ್ಯೋಗ ನೀಡುವ ಪುಸ್ತಕ
ಜಪಾನ್ ಭಾಷೆಯನ್ನು ಹೆಚ್ಚು ಹೆಚ್ಚು ಜನರಿಗೆ ಕಲಿಸಬೇಕು ಎನ್ನುವ ಮಹಾತ್ವಾಕಾಂಕ್ಷೆ ಹೊಂದಿರುವ ಸಂಸ್ಥೆ ಫೆಬ್ರುವರಿ 2021ರಲ್ಲಿ ಇಂಗ್ಲಿಷ್- ಜಪಾನೀಸ್ ಪುಸ್ತಕದ ಆವೃತ್ತಿಯನ್ನು ಬಿಡುಗಡೆಗೊಳಿಸಿತ್ತು. ವಿಶೇಷ ಕೌಶಲ ಬಯಸುವ ಉದ್ಯಮದಲ್ಲಿ ತೊಡಗಿರುವವರಿಗಾಗಿ ಇಂಗ್ಲಿಷ್ ಆವೃತ್ತಿಯನ್ನು ಮಾರುಕಟ್ಟೆಗೆ ಪರಿಚಯಿಸಿದ್ದ ಸಂಸ್ಥೆಯು ಭಾರತೀಯರು ಜಪಾನಿಸ್ ಕಲಿಯಲು ಸರಳವಾಗಿ ನೆರವಾಗಲೆಂದಯ ಹಿಂದಿ ಭಾಷೆಯಲ್ಲಿ ಕೃತಿಯ ಆವೃತ್ತಿಯನ್ನು ಪುನಃ ಬೆಂಗಳೂರಿನಲ್ಲಿ ಬಿಡುಗಡೆಗೊಳಿಸಲಾಗಿದೆ.

400ಮಂದಿ ಜಪಾನ್‌ಗೆ ಕಳಿಸುವ ಗುರಿ
ನಾವೀಸ್ ಸಂಸ್ಥೆ 2019 ಮಾರ್ಚ್‌ನಿಂದ ಇದುವರೆಗೆ 69ನರ್ಸ್‌ಗಳನ್ನು ಆರೈಕೆದಾರರಾಗಿ ಜಪಾನ್‌ಗೆ ಕಳುಹಿಸಿಕೊಟ್ಟಿದೆ ನಾವೀಸ್. ಭಾರತದಿಂದ ಶೇ.70ರಷ್ಟು ಆರೈಕೆದಾರರನ್ನು ನಿಯೋಜಿಸಿಕೊಡುವ ಜವಾಬ್ದಾರಿಯನ್ನು ಸಂಸ್ಥೆ ಹೊತ್ತುಕೊಂಡಿದ್ದು, ಈ ವರ್ಷ 400 ಭಾರತೀಯರನ್ನು ಉದ್ಯೋಗಕ್ಕೆ ಜಪಾನ್ ದೇಶಕ್ಕೆ ಕಳುಹಿಸಿಕೊಡುವ ಗುರಿಯನ್ನು ಹೊಂದಿದೆ. ಮುಂದಿನ ದಿನಗಳಲ್ಲಿ ದಕ್ಷಿಣ ಭಾರತದ ಇತರೆ ಬಾಷೆಗಳಲ್ಲೂ ತರ್ಜುಮೆ ಮಾಡಿ ಕೃತಿ ಬಿಡುಗಡೆ ಮಾಡುವುದಾಗಿ ಅವರು ಹೇಳಿದರು.
ಈ ಸಂಧರ್ಭದಲ್ಲಿ ಸಂಸ್ಥೆಯ ಸಿಇಓ ತಕಾಕೊ ಓಶಿಬುಚಿ, ಆಪರೇಷನ್ಸ್ ಮ್ಯಾನೇಜರ್ ರಾಜೇಶ್ವರಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.