ಕೆಎಸ್‌ಟಿಡಿಸಿ ನೇಮಕಾತಿ; 35 ಹುದ್ದೆಗಳಿಗೆ ಅರ್ಜಿ ಹಾಕಿ
ಬೆಂಗಳೂರು, ಸೆಪ್ಟೆಂಬರ್ 04 : ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ನಿಯಮಿತ 35 ಹುದ್ದೆಗಳ ಭರ್ತಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಆಸಕ್ತರು ಅರ್ಜಿಗಳನ್ನು ಸಲ್ಲಿಸಲು 15/9/2019 ಕೊನೆಯ ದಿನವಾಗಿದೆ.
ಕೆಎಸ್‌ಟಿಡಿಸಿ ಗುತ್ತಿಗೆ ಆಧಾರದ ಮೇಲೆ ವಿವಿಧ ಹುದ್ದೆಗಳನ್ನು ಭರ್ತಿ ಮಾಡುತ್ತಿದೆ. ನಿಗಮವು ಯಾವುದೇ ಕಾರಣವನ್ನು ನೀಡದೆ ಅರ್ಜಿ ಸ್ವೀಕರಿಸಲು, ತಿರಸ್ಕರಿಸುವ ಸಂಪೂರ್ಣ ಅಧಿಕಾರವನ್ನು ಹೊಂದಿರುತ್ತದೆ.
ನಿಗಮ ನಿಗದಿಪಡಿಸಿದ ನಮೂನೆಯಲ್ಲಿ ಮಾತ್ರ ಅರ್ಜಿ ಸಲ್ಲಿಸಬೇಕು.
ಪೂರ್ವ ರೈಲ್ವೆ ನೇಮಕಾತಿ 252 ಹುದ್ದೆ, ದ್ವಿತೀಯ ಪಿಯುಸಿ ವಿದ್ಯಾರ್ಹತೆ
ಯಾವ-ಯಾವ ಹುದ್ದೆಗಳು: ಪ್ರಧಾನ ವ್ಯವಸ್ಥಾಪಕರು (ಹೋಟೆಲ್) 1, ವ್ಯವಸ್ಥಾಪಕರು (ಹಣಕಾಸು) 1, ವ್ಯವಸ್ಥಾಪಕರು (ಹೋಟೆಲ್) 4, ವ್ಯವಸ್ಥಾಪಕರು (ಮಾರುಕಟ್ಟೆ& ಮಾರಾಟ) 1, ಸಾರ್ವಜನಿಕ ಸಂಪರ್ಕಾಧಿಕಾರಿ 1, ಸೌಸ್ ಶೇಫ್ 4 ಹುದ್ದೆಗಳಿವೆ.
ಸಹಾಯಕ ವ್ಯವಸ್ಥಾಪಕರು (ಹಣಕಾಸು) 4, ಸಹಾಯಕ ವ್ಯವಸ್ಥಾಪಕರು (ಹೋಟೆಲ್) 4, ಸಹಾಯಕ ವ್ಯವಸ್ಥಾಪಕರು (ಏರ್‌ಪೋರ್ಟ್ ಟ್ಯಾಕ್ಸಿ) 1, ದ್ವಿತೀಯ ದರ್ಜೆ ಸಹಾಯಕರು 5, ಪ್ರವಾಸಿ ಮಾರ್ಗದರ್ಶಿ 5, ಡಾಟಾ ಎಂಟ್ರಿ ಆಪರೇಟರ್ 4 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ.
ಅಂಚೆ ಮೂಲಕ ಅರ್ಜಿ ಹಾಕಿ: ಅರ್ಹ ಅಭ್ಯರ್ಥಿಗಳು ನಿಗದಿತ ನಮೂನೆಯಲ್ಲಿ ತಮ್ಮ ಸ್ವವಿವರವನ್ನು ಭರ್ತಿ ಮಾಡಿ, ವಿದ್ಯಾರ್ಹತೆ ಮತ್ತು ಸೇವಾ ಅನುಭವ ದಾಖಲೆಗಳು ಮತ್ತು ಇತ್ತೀಚಿನ ಭಾವಚಿತ್ರದೊಂದಿಗೆ 15/9/2019ರೊಳಗೆ ಅರ್ಜಿಗಳನ್ನು ಸಲ್ಲಿಸಬೇಕಾಗಿದೆ.
ಅಭ್ಯರ್ಥಿಗಳು ಮುಚ್ಚಿದ ಲಕೋಟೆಯಲ್ಲಿ ಸ್ಪೀಡ್ ಪೋಸ್ಟ್/ ರಿಜಿಸ್ಟರ್/ ಕೋರಿಯರ್/ನೇರವಾಗಿ ಬಂದು ಅರ್ಜಿ ಸಲ್ಲಿಸಬೇಕು. ಲಕೋಟೆ ಮೇಲೆ ಹುದ್ದೆಯ ಪದನಾಮ ನಮೂದಿಸಬೇಕು. ಇಲ್ಲವಾದಲ್ಲಿ ಅರ್ಜಿ ತಿರಸ್ಕಾರ ಮಾಡಲಾಗುತ್ತದೆ.
ಕೆಪಿಎಸ್ಸಿ ನೇಮಕಾತಿ; 1 ಸಾವಿರಕ್ಕೂ ಅಧಿಕ ಹುದ್ದೆಗಳ ಭರ್ತಿ
ಅರ್ಜಿ ಸಲ್ಲಿಸಲು ವಿಳಾಸ: ವ್ಯವಸ್ಥಾಪಕರು (ಆಡಳಿತ), ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ನಿ., ಕಾರ್ಯ ನಿರ್ವಾಹಕ ಕಚೇರಿ, ನೆಲ ಮಹಡಿ, ಯಶವಂತಪುರ ಟಿಟಿಎಂಸಿ, ಬಿಎಂಟಿಸಿ ಬಸ್ ನಿಲ್ದಾಣ, ಯಶವಂತಪುರ ವೃತ್ತ, ಬೆಂಗಳೂರು 560022.
ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ