ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೆಎಸ್‌ಆರ್‌ಟಿಸಿಯ ಈ ನೇಮಕಾತಿ ಆದೇಶ ನಕಲಿ, ಎಚ್ಚರ

|
Google Oneindia Kannada News

ಬೆಂಗಳೂರು, ನವೆಂಬರ್ 22; ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್ಆರ್‌ಟಿಸಿ)ಯಲ್ಲಿ ಕೆಲಸ ಖಾಲಿ ಇದೆ ಎಂಬ ನೇಮಕಾತಿ ಜಾಹೀರಾತು ಒಂದು ಹರಿದಾಡುತ್ತಿದೆ. ಇದು ನಕಲಿಯಾಗಿದ್ದು, ಈ ಕುರಿತು ಶಿವಮೊಗ್ಗದ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ಸಹ ದಾಖಲಾಗಿದೆ.

ಕೆಎಸ್‌ಆರ್‌ಟಿಸಿಯಲ್ಲಿ ಡ್ರೈವರ್ ಹುದ್ದೆಗಳು ಖಾಲಿ ಇವೆ ಎಂಬ ಜಾಹೀರಾತು ಇದಾಗಿದೆ. ಮಂಗಳೂರು 250, ಪುತ್ತೂರು 200, ಚಾಮರಾಜನಗರ 100, ರಾಮನಗರದ ವಿಭಾಗದಲ್ಲಿ 100 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ ಎಂದು ಜಾಹೀರಾತು ನೀಡಲಾಗಿದೆ.

ಮಂಗಳೂರು ವಿಮಾನ ನಿಲ್ದಾಣಕ್ಕೆ KSRTC ಬಸ್ : ಸಿಟಿಯಿಂದ ಬಸ್‌ ದರ ಹೀಗಿದೆಮಂಗಳೂರು ವಿಮಾನ ನಿಲ್ದಾಣಕ್ಕೆ KSRTC ಬಸ್ : ಸಿಟಿಯಿಂದ ಬಸ್‌ ದರ ಹೀಗಿದೆ

ಸರ್ಕಾರೇತರ ಸ್ವಯಂ ಸೇವಾ ಸಂಸ್ಥೆಯೊಂದು ಕೆಎಸ್ಆರ್‌ಟಿಸಿ ಹೆಸರು ಬಳಕೆ ಮಾಡಿಕೊಂಡು ಈ ಜಾಹೀರಾತು ನೀಡಿದೆ. ಇದು ನಕಲಿ ಜಾಹೀರಾತು ಆಗಿದ್ದು, ಈ ಕುರಿತು ಶಿವಮೊಗ್ಗ ಕೆಎಸ್ಆರ್‌ಟಿಸಿ ವಿಭಾಗದ ಮುಖ್ಯಸ್ಥ ಮರಿಗೌಡ ದೂರು ಕೊಟ್ಟಿದ್ದಾರೆ.

ಬೆಂಗಳೂರು-ನೀಲಕ್ಕಲ್ ಮಾರ್ಗದಲ್ಲಿ ಕೆಎಸ್‌ಆರ್‌ಟಿಸಿ ಬಸ್; ದರ, ಸಮಯ ಬೆಂಗಳೂರು-ನೀಲಕ್ಕಲ್ ಮಾರ್ಗದಲ್ಲಿ ಕೆಎಸ್‌ಆರ್‌ಟಿಸಿ ಬಸ್; ದರ, ಸಮಯ

KSRTC Driver Post Recruitment Advertisement Fake

ಈ ಕುರಿತು ಮರೀಗೌಡ ಮಾತನಾಡಿದ್ದು, "ಡ್ರೈವರ್‌ಗಳು ಬೇಕಾಗಿದ್ದಾರೆ ಎಂದು ಜಾಹೀರಾತು ನೀಡಲಾಗಿದ್ದು, 650 ಹುದ್ದೆಗಳು ಖಾಲಿ ಇವೆ ಎಂದು ಪತ್ರಿಕಾ ಜಾಹೀರಾತಿನಲ್ಲಿ ತಿಳಿಸಲಾಗಿದೆ. ಆದರೆ ಈ ರೀತಿಯ ಯಾವುದೇ ಜಾಹೀರಾತನ್ನು ನಿಗಮದಿಂದ ಹೊರಡಿಸಿಲ್ಲ" ಎಂದು ಮರೀಗೌಡ ಸ್ಪಷ್ಟಪಡಿಸಿದ್ದಾರೆ.

ಶಿವಮೊಗ್ಗದ ಖಾಸಗಿ ಬಸ್ ಮಾಲೀಕರಿಗೆ ಪೊಲೀಸರಿಂದ ಖಡಕ್ ಸೂಚನೆ: ತಪ್ಪಿದರೆ ಕ್ರಮದ ಎಚ್ಚರಿಕೆ ಶಿವಮೊಗ್ಗದ ಖಾಸಗಿ ಬಸ್ ಮಾಲೀಕರಿಗೆ ಪೊಲೀಸರಿಂದ ಖಡಕ್ ಸೂಚನೆ: ತಪ್ಪಿದರೆ ಕ್ರಮದ ಎಚ್ಚರಿಕೆ

KSRTC Driver Post Recruitment Advertisement Fake

ಜಾಹೀರಾತಿನಲ್ಲಿ ಡ್ರೈವರ್‌ ಹುದ್ದೆಗೆ 7ನೇ ತರಗತಿ ವಿದ್ಯಾಭ್ಯಾಸ ನಿಗದಿ ಮಾಡಲಾಗಿದೆ ಎಂಬ ಮಾಹಿತಿ ಇದೆ. ಆದರೆ ನಿಗಮದ ನೇಮಕಾತಿ ನಿಯಮದ ಪ್ರಕಾರ 10ನೇ ತರಗತಿ ಓದಿರಬೇಕು. ಬೆಂಗಳೂರಿನ ಕೇಂದ್ರ ಕಚೇರಿಯಿಂದ ಯಾವುದೇ ಈ ರೀತಿಯ ಪ್ರಕಟಣೆ ನೀಡಿಲ್ಲ ಎಂದು ತಿಳಿಸಲಾಗಿದೆ.

ಜಾಹೀರಾತಿನಲ್ಲಿ ಏನಿದೆ?; ಕೆಎಸ್ಆರ್‌ಟಿಸಿ (ಹೆಚ್‌ಪಿವಿ) ಖಾಯಂ ನೌಕರಿ. ಮಂಗಳೂರು, ಪುತ್ತೂರು, ಚಾಮರಾಜನಗರ, ರಾಮನಗರ ವಿಭಾಗದಲ್ಲಿ ಕೆಲಸ ಖಾಲಿ ಇದೆ. ಅರ್ಜಿ ಸಲ್ಲಿಸುವವರು 7ನೇ ತರಗತಿ ಪಾಸಾಗಿರಬೇಕು. 2 ವರ್ಷದ ಅನುಭವ ಹೊಂದಿರಬೇಕು ಎಂದು ಜಾಹೀರಾತಿನಲ್ಲಿ ಮಾಹಿತಿ ನೀಡಲಾಗಿದೆ.

ಅಭ್ಯರ್ಥಿಗಳ ವೇತನ 28,990 ಆಗಿದ್ದು, 22,840 ಕೈಗೆ ಸಿಗಲಿದೆ. ವಾರದ ರಜೆ, ಯೂನಿಫಾರ್ಮ್, ಇಪಿಎಫ್ ಸೌಲಭ್ಯ ಲಭ್ಯವಿರುತ್ತದೆ ಎಂದು ತಿಳಿಸಲಾಗಿತ್ತು. ಬಯೋಡೇಟಾದೊಂದಿಗೆ ಅರ್ಜಿ ಶುಲ್ಕ 1000 ಡಿಡಿಯನ್ನು ಸಲ್ಲಿಸಬೇಕು ಎಂದು ತಿಳಿಸಲಾಗಿತ್ತು.

English summary
Advertisement printed in news paper about Karnataka State Road Transport Corporation (KSRTC) diver post is fake. Police complaint field in Shivamogga police.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X