419 ಪೊಲೀಸ್ ಕಾನ್ಸ್‌ ಟೇಬಲ್ ಹುದ್ದೆ ಭರ್ತಿಗೆ ಅರ್ಜಿ ಆಹ್ವಾನ

Posted By: Gururaj
Subscribe to Oneindia Kannada

ಬೆಂಗಳೂರು, ಮಾರ್ಚ್ 05 : ಕರ್ನಾಟಕ ಪೊಲೀಸ್ ಇಲಾಖೆ 419ಪೊಲೀಸ್ ಕಾನ್ಸ್‌ ಟೇಬಲ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಿದೆ. ಅರ್ಜಿ ಸಲ್ಲಿಕೆ ಮಾಡಲು ಮಾರ್ಚ್ 19, 2018 ಕೊನೆಯ ದಿನವಾಗಿದೆ.

ಪೊಲೀಸ್ ಇಲಾಖೆಯ ಅಧಿಕೃತ ವೆಬ್‌ಸೈಟ್‌ನಲ್ಲಿ ನೇಮಕಾತಿ ಅಧಿಸೂಚನೆಯನ್ನು ಪ್ರಕಟಿಸಲಾಗಿದೆ. ಒಟ್ಟು 419 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ನೇಮಕಗೊಂಡವರು ಕರ್ನಾಟಕದಲ್ಲಿ ಕೆಲಸ ಮಾಡಬೇಕಾಗಿದೆ.

ಎಚ್ಎಎಲ್ ನಲ್ಲಿ 14ಕ್ಕೂ ಅಧಿಕ ವಿವಿಧ ಹುದ್ದೆಗಳಿವೆ

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಎಸ್‌ಎಸ್‌ಎಲ್‌ಸಿ, ಸಿಬಿಎಸ್ಇ, ಐಸಿಎಸ್‌ಇ, ಎಸ್‌ಎಸ್‌ಸಿ ರಾಜ್ಯ ಬೋರ್ಡ್ ಅಥವ ತತ್ಸಮಾನ ಕೋರ್ಸ್‌ಗಳ ವಿದ್ಯಾರ್ಹತೆ ನಿಗದಿಪಡಿಸಲಾಗಿದೆ.

police

ಅರ್ಜಿ ಸಲ್ಲಿಸುವ ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 18 ರಿಂದ 25 ವರ್ಷದ ವಯೋಮಿತಿ ನಿಗದಿ ಮಾಡಲಾಗಿದೆ. ಎಸ್‌ಸಿ/ಎಸ್‌ಟಿ/ಪ್ರವರ್ಗ-1ರ ಅಭ್ಯರ್ಥಿಗಳಿಗೆ 18 ರಿಂದ 27 ವರ್ಷ. 2ಎ/2ಬಿ/3ಎ/3ಬಿ ವರ್ಗದ ಅಭ್ಯರ್ಥಿಗಳಿಗೆ 18 ರಿಂದ 30 ವರ್ಷದ ವಯೋಮಿತಿ ನಿಗದಿ ಮಾಡಲಾಗಿದೆ.

ಬಿಇಎಲ್ ನಲ್ಲಿ ಇಂಜಿನಿಯರ್ ಗಳಿಗೆ ಉದ್ಯೋಗಾವಕಾಶ

ಪ್ರಮುಖ ಅಂಶಗಳು

* ಹುದ್ದೆ : ಪೊಲೀಸ್ ಕಾನ್ಸ್‌ ಟೇಬಲ್
* ಒಟ್ಟು ಹುದ್ದೆಗಳು : 419
* ಕೆಲಸದ ಸ್ಥಳ : ಕರ್ನಾಟಕ
* ಕೊನೆ ದಿನಾಂಕ : 19/3/2018

ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Karnataka state police (KSP) issued notification for the recruitment of 419 Police Constable posts. Job seekers should apply from 28th February to 19th March 2018.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ