Get Updates
Get notified of breaking news, exclusive insights, and must-see stories!

KPSC; ಕೆಪಿಎಸ್‌ಸಿ ನೇಮಕಾತಿ, ವಿವಿಧ ಪರೀಕ್ಷೆಗಳ ವೇಳಾಪಟ್ಟಿ

ಬೆಂಗಳೂರು, ಜುಲೈ 13: ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಆನ್‌ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಕೆ ಮಾಡುವ ಪ್ರಕ್ರಿಯೆ ಮುಕ್ತಾಯಗೊಂಡಿದ್ದು, ಈಗ ಪರೀಕ್ಷೆಗಳ ದಿನಾಂಕಗಳನ್ನು ಪ್ರಕಟಿಸಿದೆ.

ಆಯೋಗದಿಂದ ಅಧಿಸೂಚಿಸಲಾದ ವಿವಿಧ ಹುದ್ದೆಗಳ ನೇಮಕಾತಿ ಸಂಬಂಧ ಪರೀಕ್ಷಾ ವೇಳಾಪಟ್ಟಿ ಎಂದು ಕೆಪಿಎಸ್‌ಸಿಯ ಕಾರ್ಯದರ್ಶಿ ಡಾ. ರಾಕೇಶ್ ಕುಮಾರ್ ಕೆ. ಪ್ರಕಟಣೆ ಮೂಲಕ ಮಾಹಿತಿ ನೀಡಿದ್ದಾರೆ.

KPSC Recruitment Various Exam Schedule Announced

ಯಾವ ಹುದ್ದೆಗೆ ಯಾವಾಗ ಅಧಿಸೂಚನೆ ಹೊರಡಿಸಲಾಗಿತ್ತು?. ಹುದ್ದೆಯ ಪದನಾಮವೇನು?, ನಿಗದಿ ಪಡಿಸಬಹುದಾದದ ಪರಿಷ್ಕೃತ ಪರೀಕ್ಷಾ ದಿನಾಂಕ ಎಂದು ಪ್ರಕಟಣೆಯಲ್ಲಿ ಮಾಹಿತಿ ನೀಡಲಾಗಿದೆ.

ಕೆಪಿಎಸ್‌ಸಿ ನೇಮಕಾತಿಗೆ ಅರ್ಜಿ ಸಲ್ಲಿಕೆ ಮಾಡಿದ ಅಭ್ಯರ್ಥಿಗಳು ಹುದ್ದೆ, ಪರೀಕ್ಷೆ ದಿನಾಂಕಗಳ ಮಾಹಿತಿಯನ್ನು ಪಡೆದು, ಪರೀಕ್ಷೆಗೆ ಸಿದ್ಧತೆಗಳನ್ನು ಮಾಡಿಕೊಳ್ಳಬಹುದು. ಹುದ್ದೆ, ಪರೀಕ್ಷಾ ದಿನಾಂಕಗಳ ಮಾಹಿತಿ ಇಲ್ಲಿದೆ...

ಪರೀಕ್ಷೆಯ ದಿನಾಂಕಗಳ ವಿವರ

* ಪಿಎಸ್‌ಸಿ 1 ಆರ್‌ಟಿಬಿ-1/2023 ದಿನಾಂಕ 13/3/2024. ಕನ್ನಡ ಭಾಷಾ ಪರೀಕ್ಷೆ (ಉಳಿಕೆ ಮೂಲ ವೃಂದ) 14/9/2024. ಶನಿವಾರ ಮಧ್ಯಾಹ್ನ. ಸಾಮಾನ್ಯ ಪತ್ರಿಕೆ-1. (ಉಳಿಕೆ ಮೂಲ ವೃಂದ). 15/9/2024. ಭಾನುವಾರ, ಪೂರ್ವಾಹ್ನ. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಲ್ಲಿನ ಪತ್ರಾಂಕಿತ ವ್ಯವಸ್ಥಾಪಕರು/ ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳು (ಉಳಿಕೆ ಮೂಲ ವೃಂದ). 15/9/2024. ಭಾನುವಾರ, ಅಪರಾಹ್ನ. ನಿರ್ದಿಷ್ಠ ಪತ್ರಿಕೆ.

* ಪಿಎಸ್‌ಸಿ-1 ಆರ್‌ಟಿಬಿ-2/2023. ದಿನಾಂಕ 13/3/2024. ಕನ್ನಡ ಭಾಷಾ ಪರೀಕ್ಷೆ (ಹೈ. ಕ.) 19/10/2024. ಶನಿವಾರ ಮಧ್ಯಾಹ್ನ. ಸಾಮಾನ್ಯ ಪತ್ರಿಕೆ-1. (ಹೈ. ಕ.). 20/10/2024. ಭಾನುವಾರ, ಪೂರ್ವಾಹ್ನ. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಲ್ಲಿನ ಪತ್ರಾಂಕಿತ ವ್ಯವಸ್ಥಾಪಕರು/ ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳು (ಹೈ. ಕ. ವೃಂದ). ನಿರ್ದಿಷ್ಠ ಪತ್ರಿಕೆ.

* ಇ (2) 598/ 2023-24 ಪಿಎಸ್‌ಸಿ ದಿನಾಂಕ 15/3/2024. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿನ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ 97 ಹುದ್ದೆಗಳು (ಹೈ. ಕ.). 16/11/2024. ಶನಿವಾರ, ಮಧ್ಯಾಹ್ನ. ಕನ್ನಡ ಭಾಷಾ ಪರೀಕ್ಷೆ. 17/11/2024ರ ಭಾನುವಾರ (ಸ್ಮರ್ಧಾತ್ಮಕ ಪರೀಕ್ಷೆ).

* ಇ (2) 597/ 2023-24 ಪಿಎಸ್‌ಸಿ ದಿನಾಂಕ 15/3/2024. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿನ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ 150 ಹುದ್ದೆಗಳು (ಉಳಿಕೆ ಮೂಲ ವೃಂದ). 7/12/2024. ಶನಿವಾರ, ಮಧ್ಯಾಹ್ನ. ಕನ್ನಡ ಭಾಷಾ ಪರೀಕ್ಷೆ. 8/12/2024ರ ಭಾನುವಾರ (ಸ್ಮರ್ಧಾತ್ಮಕ ಪರೀಕ್ಷೆ).

ಕೃಷಿ ಇಲಾಖೆ ನೇಮಕಾತಿಗೆ ಪ್ರಸ್ತಾವನೆ: ಕೃಷಿ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಸರ್ಕಾರ ಕ್ರಮ ಕೈಗೊಂಡಿದೆ. ಮೊದಲ ಹಂತದಲ್ಲಿ 961 ವಿವಿಧ ವೃಂದದ ಹುದ್ದೆಗಳಿಗೆ ಈಗಾಗಲೇ ಆರ್ಥಿಕ ಇಲಾಖೆ ಅನುಮೋದನೆ ನೀಡಿದೆ. ಕೆಪಿಎಸ್‌ಸಿಗೆ ಈ ಹುದ್ದೆಗಳ ಭರ್ತಿಗೆ ಪ್ರಸ್ತಾವನೆ ಸಲ್ಲಿಕೆ ಮಾಡಲಾಗಿದೆ.

ಕಲ್ಯಾಣ ಕರ್ನಾಟಕ ಭಾಗದಲ್ಲಿ 34 ಕೃಷಿ ಅಧಿಕಾರಿ, 223 ಸಹಾಯಕ ಕೃಷಿ ಅಧಿಕಾರಿ, 17 ದ್ವಿತೀಯ ದರ್ಜೆ ಸಹಾಯಕ, 17 ಬೆರಳಚ್ಚುಗಾರ ಮತ್ತು ಉಳಿಕೆ ವೃಂದದಲ್ಲಿ 84 ಕೃಷಿ ಅಧಿಕಾರಿ, 586 ಸಹಾಯಕ ಕೃಷಿ ಅಧಿಕಾರಿಗಳು ಸೇರಿದಂತೆ 961 ಹುದ್ದೆಗಳ ನೇಮಕಾತಿ ನಡೆಯಲಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+