KPSC Recruitment: ಸರ್ಕಾರಿ ಉದ್ಯೋಗಾಕಾಂಕ್ಷಿಗಳಿಗೆ ಭರ್ಜರಿ ಅವಕಾಶ, ನೇಮಕಾತಿ ವಿವರ
ಬೆಂಗಳೂರು, ಡಿಸೆಂಬರ್ 04: ಕರ್ನಾಟಕ ರಾಜ್ಯ ಸರ್ಕಾರಿ ಉದ್ಯೋಗ ಹುಡುಕುತ್ತಿರುವ ಉದ್ಯೋಗಾಕಾಂಕ್ಷಿಗಳಿಗೆ ಕರ್ನಾಟಕ ಲೋಕಸೇವಾ ಆಯೋಗ (KPSC) ಗುಡ್ ನ್ಯೂಸ್ ನೀಡಿದೆ. 'ಭೂಮಾಪನ ಕಂದಾಯ ವ್ಯವಸ್ಥೆ ಮತ್ತು ಭೂ ದಾಖಲೆಗಳ ಇಲಾಖೆ' ಯಲ್ಲಿ ಖಾಲಿ ಇರುವ ನೂರಾರು ಹುದ್ದೆಗಳ ಭರ್ತಿಗೆ ಅರ್ಹರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆಸಕ್ತರು ಕೂಡಲೇ ಅರ್ಜಿ ಸಲ್ಲಿಸಬೇಕಿದೆ.
ಭೂಮಾಪನ ಕಂದಾಯ ವ್ಯವಸ್ಥೆ ಮತ್ತು ಭೂ ದಾಖಲೆಗಳ ಇಲಾಖೆಯಲ್ಲಿ 264 ಲ್ಯಾಂಡ್ ಸರ್ವೇಯರ್ (ಭೂಮಾಪಕರು) ಹುದ್ದೆಗಳು ಖಾಲಿ ಇವೆ. ಇವುಗಳಿಗೆ ಕರ್ನಾಟಕ ಲೋಕಸೇವಾ ಆಯೋಗ (KPSC) ಅರ್ಜಿ ಆಹ್ವಾನಿಸಿದೆ. ಆಸಕ್ತ ಅಭ್ಯರ್ಥಿಗಳು ಇದೇ ಡಿಸೆಂಬರ್ 8ರೊಳಗೆ ಅರ್ಜಿ ಸಲ್ಲಿಸಬೇಕು ಎಂದು ತಿಳಿಸಿದೆ.

ಅರ್ಜಿ ಸಲ್ಲಿಕೆಗೂ ಮೊದಲು ಕೆಪಿಎಸ್‌ಸಿ ನೇಮಕಾತಿ (KPSC Recruitment 2024) ಮಾಸಿಕ ವೇತನ, ಅರ್ಜಿ ಸಲ್ಲಿಕೆ, ನೇಮಕಾತಿ, ವಿದ್ಯಾರ್ಹತೆ ವಿವರ ತಿಳಿದು ಅರ್ಜಿ ಸಲ್ಲಿಸಬೇಕಿದೆ.
ನೇಮಕಾತಿ ಪೂರ್ಣ ಮಾಹಿತಿ
ನೇಮಕಾತಿ ಸಂಸ್ಥೆ: ಭೂಮಾಪನ ಕಂದಾಯ ವ್ಯವಸ್ಥೆ ಮತ್ತು ಭೂ ದಾಖಲೆಗಳ ಇಲಾಖೆ
ಹುದ್ದೆ ಹೆಸರು: ಲ್ಯಾಂಡ್ ಸರ್ವೇಯರ್ (RPC) ಹುದ್ದೆ
ಹುದ್ದೆ ಇತರ ಮಾಹಿತಿ: ಗ್ರೂಪ್ ಸಿ ಉಳಿಕೆ ಮೂಲ ವೃಂದ
ಒಟ್ಟು ಹುದ್ದೆಗಳು: 264
ಅರ್ಜಿ ಸಲ್ಲಿಕೆ ಕೊನೆ ದಿನಾಂಕ: ಡಿಸೆಂಬರ್ 08
ಮಾಸಿಕ ವೇತನ: ಗರಿಷ್ಠ 46,650 ರೂಪಾಯಿ
ಶೈಕ್ಷಣಿಕ ಅರ್ಹತೆ
ಗ್ರೂಪ್ ಸಿ ಉಳಿಕೆ ಮೂಲ ವೃಂದದ ಹುದ್ದೆಗಳಿಗೆ ಅರ್ಜಿ ಕರೆಯಲಾಗಿದ್ದು, ಈ ಕೆಳಗಿನ ನಾಲ್ಕರಲ್ಲಿ ಒಂದು ಅರ್ಹತೆ ಇರುವವರು ಸಹ ಅರ್ಜಿ ಸಲ್ಲಿಸಬಹುದಾಗಿದೆ.
* ಭಾರತದಲ್ಲಿ ಕಾನೂನು ರೀತ್ಯಾ ಸ್ಥಾಪಿತವಾದ ಯಾವುದೇ ವಿಶ್ವವಿದ್ಯಾಲಯದಲಿ., ಬಿ.ಇ.ಸಿವಿಲ್/ ಅಥವಾ ಬಿ.ಟೆಕ್ ಸಿವಿಲ್ಅಥವಾ ಸಿವಿಲ್ ಇಂಜಿನಿಯರಿಂಗ್ ಡಿಪ್ಲೊಮಾದಲ್ಲಿ ಪದವಿ ಪಡೆದಿರಬೇಕು. ಅಥವಾ..
* ಪದವಿ ಪೂರ್ವ ಶಿಕ್ಷಣ (ಪಿ.ಯು.ಸಿ) ಅಥವಾ ಕೇಂದ್ರ ಪ್ರೌಢ ಶಿಕ್ಷಣ ಮಂಡಳಿ ಜರುಗಿಸುವ 12ನೇ ತರಗತಿ (ಸಿ.ಬಿ.ಎಸ್.ಇ. ಅಥವಾ ಐ.ಸಿ.ಎಸ್.ಇ) ಇವುಗಳಲ್ಲಿ ವಿಜ್ಞಾನ ವಿಷಯವನ್ನು ಪಡೆದು ಗಣಿತ ವಿಷಯದಲ್ಲಿ ಶೇಕಡ 60ಕ್ಕಿಂತ ಕಡಿಮೆ ಇಲ್ಲದಂತೆ ಅಂಕಗಳನ್ನು ಪಡೆದು ಉತ್ತೀರ್ಣರಾಗಿರಬೇಕು.
* ಕರ್ನಾಟಕ ರಾಜ್ಯ ಸರ್ಕಾರದ ವೃತ್ತಿ ಶಿಕ್ಷಣ ಇಲಾಖೆ ನಡೆಸುವ "ಲ್ಯಾಂಡ್ ಅಂಡ್ ಸಿಟಿ ಸರ್ವೆ'ಯ ಪದವಿ ಪೂರ್ವ ಡಿಪ್ಲೊಮಾದಲ್ಲಿ ಉತ್ತೀರ್ಣರಾಗಿರಬೇಕು.
* ಕರ್ನಾಟಕ ಸರ್ಕಾರದ ಉದ್ಯೋಗ ಹಾಗೂ ತರಬೇತಿ ಇಲಾಖೆ ನಡೆಸುವ "ಐ.ಟಿ.ಐ. ಇನ್ ಸರ್ವೆ ಟ್ರೇಡ್ " ನಲ್ಲಿ ಉತ್ತೀರ್ಣರಾಗಿರಬೇಕು ಎಂದು ಕೆಪಿಎಸ್‌ಸಿ ತಿಳಿಸಿದೆ.
ಮಾಸಿಕ ವೇತನ
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳನ್ನು ಕೆಪಿಎಸ್‌ಸಿ ಆಯ್ಕೆ ಮಾಡಿದ ಬಳಿಕ ಕರ್ನಾಟಕದಲ್ಲಿ ಪೋಸ್ಟಿಂಗ್ ನೀಡಲಿದೆ. ಮಾಸಿಕವಾಗಿ 23,500 ರೂಪಾಯಿಯಿಂದ 46,650 ರೂಪಾಯಿ ನೀಡಲಿದೆ ಎಂದು ಅಧಿಸೂಚನೆ ತಿಳಿಸಿದೆ.
ಬೇಕಾದ ದಾಖಲೆಗಳು
* SSLC ಅಂಕಪಟ್ಟಿ/ಪಿಯುಸಿ ಅಂಕಪಟ್ಟಿ
* ಆಧಾರ್ ಕಾರ್ಡ್
* ಜಾತಿ ಆದಾಯ ಪ್ರಮಾಣ ಪತ್ರ
* ಫೋಟೋ, ಇಮೇಲ್ ಐಡಿ, ಮೊಬೈಲ್ ಸಂಖ್ಯೆ ಸೇರಿದಂತೆ ಅಗತ್ಯ ದಾಖಲಾತಿ ಸಮೇತ ಅರ್ಜಿ ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗೆ ಕೆಪಿಎಸ್‌ಸಿ ವೆಬ್‌ಸೈಟ್‌ಗೆ ಭೇಟಿ ನೀಡಬೇಕು. ಕೊನೆಯ ದಿನಾಂಕದವರೆಗೆ ಕಾಯದೇ ಕೂಡಲೇ ಅರ್ಜಿ ಸಲ್ಲಿಸಬೇಕು..












Click it and Unblock the Notifications