KPSC Exam Date: ಎಒ-ಎಒಒ 273 ಹುದ್ದೆಗಳ ನೇಮಕಾತಿ ಅಪ್ಡೇಟ್: ಪರೀಕ್ಷೆ ಯಾವಾಗ? ಹಾಲ್‌ಟಿಕೆಟ್..
ಬೆಂಗಳೂರು, ಮಾರ್ಚ್ 25: ಕರ್ನಾಟಕ ಸಂಬಂಧ ವಿವಿಧ ಸರ್ಕಾರಿ ಹುದ್ದೆಗಳ ಪರೀಕ್ಷಾ ಜವಾಬ್ದಾರಿ ಹೊತ್ತಿರುವ ಕರ್ನಾಟಕ ಲೋಕಸೇವಾ ಆಯೋಗ (KPSC) ಈವರ್ಷ, ಕೃಷಿ ಅಧಿಕಾರಿ (ಎಒ) ಮತ್ತು ಸಹಾಯಕ ಕೃಷಿ ಅಧಿಕಾರಿ (ಎಎಒ) ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಆರಂಭಿಸಿದೆ. ಖಾಲಿ ಹುದ್ದೆಗಳಿಗೆ ಅರ್ಹರಿಂದ ಅರ್ಜಿ ಆಹ್ವಾನಿಸಿತ್ತು. ಈ ನೇಮಕಾತಿ ಪರೀಕ್ಷೆ, ಪ್ರವೇಶ ಪತ್ರ ಬಿಡುಗಡೆ, ಅಂಕಗಳು ಸೇರಿದಂತೆ ಮಹತ್ವದ ಮಾಹಿತಿ ಇಲ್ಲಿದೆ.
ಕೃಷಿ ಅಧಿಕಾರಿಗಳ 42 ಹುದ್ದೆ ಹಾಗೂ ಸಹಾಯಕ ಕೃಷಿ ಅಧಿಕಾರಿಗಳ 231 ಹುದ್ದೆ ಸೇರಿ ಒಟ್ಟು 273 ಖಾಲಿ ಹುದ್ದೆಗಳಿಗೆ ನೇಮಕಾತಿ ನಡೆಸಲಾಗುತ್ತಿದೆ. ಇಕ್ಕೆ ಲಿಖಿತ ಪರೀಕ್ಷೆ ನಡೆಸಲಾಗುತ್ತದೆ. ಕೆಪಿಎಸ್‌ಸಿ ವೆಬ್‌ಸೈಟ್‌ನಲ್ಲಿ ಪರೀಕ್ಷಾ ದಿನಾಂಕವು ಆದಷ್ಟು ಶೀಘ್ರವೇ ಪ್ರಕಟಗೊಳ್ಳಲಿದೆ.

ನೇಮಕಾತಿಗಾಗಿ ಅರ್ಜಿ ಸಲ್ಲಿಸಿದ ಎಎಒ ಅಭ್ಯರ್ಥಿಗಳಿಗೆ ಇದೇ ವೆಬ್‌ಸೈಟ್‌ನಲ್ಲಿ ಪ್ರವೇಶ ಪತ್ರ ಬಿಡುಗಡೆ ಮಾಡಲಾಗುತ್ತದೆ. ಸೂಕ್ತ ಮಾಹಿತಿ ಮೂಲಕ ಲಾಗಿನ್ ಆಗಿ ಪ್ರವೇಶ ಪತ್ರ ಪಡೆಯಬೇಕಿದೆ.
ನೇಮಕಾತಿ ಪೂರ್ಣ ಮಾಹಿತಿ
ನೇಮಕಾತಿ ಸಂಸ್ಥೆ: ಕರ್ನಾಟಕ ಲೋಕಸೇವಾ ಆಯೋಗ (KPSC)
ಪರೀಕ್ಷೆ: ಕೃಷಿ ಅಧಿಕಾರಿ (AO), ಸಹಾಯಕ ಕೃಷಿ ಅಧಿಕಾರಿ (AAO)
ಒಟ್ಟು ಖಾಲಿ ಹುದ್ದೆಗಳು: 273
ಹುದ್ದೆಗಳು: ಕೃಷಿ ಅಧಿಕಾರಿ, ಸಹಾಯಕ ಕೃಷಿ ಅಧಿಕಾರಿ
ವೃಂದ ನೇಮಕಾತಿ: ಬಿ (ಎಒ) ಮತ್ತು ಗ್ರೂಪ್ ಸಿ (ಎಎಒ)
ಪರೀಕ್ಷೆ ಯಾವಾಗ: ಶೀಘ್ರವೇ ದಿನಾಂಕ ಬಿಡುಗಡೆ
ಅಧಿಕೃತ ವೆಬ್‌ಸೈಟ್: kpsc.kar.nic.in
ಹೇಗಿರುತ್ತೆ ಆಯ್ಕೆ ಪ್ರಕ್ರಿಯೆ
ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಕೆಪಿಎಸ್‌ಸಿ ಮೊದಲು ಲಿಖಿತ ಪರೀಕ್ಷೆ ನಡೆಸುತ್ತದೆ. ಇದು ಮೊದಲ ಹಂತವಾಗಿದೆ. ಇದು ಸಾಮಾನ್ಯ ಮತ್ತು ಕೃಷಿ ಸಂಬಂಧಿ ಪತ್ರಿಕೆ ಸೇರಿ ಎರಡು ಪ್ರಶ್ನೆ ಪತ್ರಿಕೆ ಒಳಗೊಂಡಿರುತ್ತದೆ. ಅಭ್ಯರ್ಥಿಗಳು ತಮ್ಮ ವ್ಯಾಸಂಗದಲ್ಲಿ ಕನ್ನಡ ಅಧ್ಯಯನ ಮಾಡದ ಅಭ್ಯರ್ಥಿಗಳು ಕಡ್ಡಾಯ ಕನ್ನಡ ಭಾಷಾ ಪರೀಕ್ಷೆ ಉತ್ತೀರ್ಣ ಆಗಿರಬೇಕು ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ಪರೀಕ್ಷೆಯಲ್ಲಿ ಉತ್ತೀರ್ಣವಾದವರಿಗೆ ದಾಖಲೆ ಪರಿಶೀಲನೆ ಇರುತ್ತದೆ. ನಂತರ ಅವರನ್ನು ಸ್ಪರ್ಧಾತ್ಮಕ ಪರೀಕ್ಷೆಯ ಮರಿಟ್ ಆಧಾರದಲ್ಲಿ ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಕೆಎಎಸ್ ಪರೀಕ್ಷಾ ಗೊಂದಲ್ಲಿದ್ದ ಕೆಪಿಎಸ್‌ಸಿ ಇದೀಗ ಎಒ, ಎಎಒ ನೇಮಕಾತಿಗಾಗಿ ಪರೀಕ್ಷೆಗಳ ದಿನಾಂಕ ಪ್ರಕಟಿಸಲು ಸಿದ್ಧತೆ ಮಾಡಿಕೊಂಡಿದೆ ಎಂದು ಮೂಲಗಳು ತಿಳಿಸಿವೆ.
ಪ್ರಶ್ನೆ ಪತ್ರಿಕೆ: ಲಿಖಿತ ಪರೀಕ್ಷೆ ಮಾಹಿತಿ
* ಪತ್ರಿಕೆ 1: ಜನರಲ್ ನಾಲೆಡ್ಜ್ ಸಂಬಂಧಿ ಪತ್ರಿಕೆ- 300 ಅಂಕಗಳು ಇದ್ದು, ಇದನ್ನು ಎದುರಿಸಲು ಕೇವಲ 90 ನಿಮಿಷ ಸಮಯ ಇರುತ್ತದೆ.
* ಪತ್ರಿಕೆ 2: ಕೃಷಿ ಆಧಾರಿತ ಪತ್ರಿಕೆ- 300 ಅಂಕಗಳು ಇದ್ದು, 120 ನಿಮಿಷಗಳು.
* ಒಟ್ಟು 600 ಅಂಕಗಳ ಪರೀಕ್ಷೆ ಇದಾಗಿದ್ದು, ವಸ್ತುನಿಷ್ಠ ಮಾದರಿ ಪ್ರಶ್ನೆ ಒಳಗೊಂಡಿರುತ್ತದೆ.
* ನಾಲ್ಕು ತಪ್ಪು ಉತ್ತರಗಳಿಗೆ ಒಂದು ಋಣಾತ್ಮಕ ಅಂಕ ಇರುತ್ತದೆ ಎಂದು ಕೆಪಿಎಸ್‌ಸಿ ತಿಳಿಸಿದೆ.
ಅಭ್ಯರ್ಥಿಗಳು ಪ್ರಚಲಿತ ವಿದ್ಯಮಾನಗಳು, ಸಾಮಾನ್ಯ ಜ್ಞಾನ, ರಾಜ್ಯದ ವ್ಯವಹಾರ, ಕೃಷಿ, ಬೆಳೆ ಉತ್ಪಾದನೆ, ಮಣ್ಣು ವಿಜ್ಞಾನ, ತೋಟಗಾರಿಕೆ ಮತ್ತು ಕೃಷಿ ಅರ್ಥಶಾಸ್ತ್ರದ ವಿಷಯಗಳ ಮೇಲೆ ಗಮನ ಹರಿಸಬೇಕು. ಕನಿಷ್ಠ 35 ಅಂಕಗಳನ್ನು ಪಡೆಯಬೇಕಿದೆ.
ಪ್ರವೇಶ ಪತ್ರ ಡೌನ್‌ಲೋಡ್ ಹೇಗೆ?
ಅರ್ಜಿ ಸಲ್ಲಿಸಿ ಪರೀಕ್ಷೆ ದಿನಾಂಕಗಳಿಗೆ ಕಾಯುತ್ತಿರುವ ಅಭ್ಯರ್ಥಿಗಳಿಗೆ ಶೀಘ್ರವೇ ಸಿಹಿ ಸುದ್ದಿ ಸಿಗಲಿದೆ. ದಿನಾಂಕ ಪ್ರಟಕವಾಗುತ್ತಿದ್ದಂತೆ ಪ್ರವೇಶ ಪತ್ರದ ಬಿಡುಗಡೆ, ಡೌನ್‌ಲೋಡ್ ಮಾಹಿತಿ ಸಿಗುತ್ತದೆ. ಹಾಲ್‌ಟಿಕೆಟ್ ಡೌನ್ ಲೋಡ್ ಹೇಗೆ?
* ಮೊದಲು ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ kpsc.kar.nic.in ಗೆ ಭೇಟಿ ನೀಡಬೇಕು.
* ತೆರೆಯುವ ಮುಖಪುಟದಲ್ಲಿ 'ಹಾಲ್ ಟಿಕೆಟ್' ವಿಭಾಗವನ್ನು ಆಯ್ಕೆ ಮಾಡಿಕೊಳ್ಳಬೇಕು.
* ನಂತರ 'ಕೆಪಿಎಸ್‌ಸಿ ಎಒ ಮತ್ತು ಎಎಒ ಹಾಲ್ ಟಿಕೆಟ್ 2025' ಲಿಂಕ್ ಮೇಲೆ ಕ್ಲಿಕ್ ಮಾಡಬೇಕು.
* ಬಳಿಕ ನಿಮ್ಮ ನೋಂದಣಿ ಸಂಖ್ಯೆ ಹಾಗೂ ಪಾರ್ಸ್ವರ್ಡ್ (ಜನ್ಮ ದಿನಾಂಕ) ಹಾಕಿ ಸಬ್ಮಿಟ್ ಕೊಡಬೇಕು.
* ನಂತರ ಕಾಣುವ ಹಾಲ್‌ಟಿಕೆಟ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳಬೇಕು.












Click it and Unblock the Notifications