1430 ಹುದ್ದೆಗಳ ನೇಮಕಾತಿಗೆ ಕೆಪಿಎಸ್ ಸಿ ಅರ್ಜಿ ಆಹ್ವಾನ

ಬೆಂಗಳೂರು, ಆಗಸ್ಟ್ 09 : ಕರ್ನಾಟಕದಾದ್ಯಂತ ಖಾಲಿ ಇರುವ ಹಿರಿಯ ವೈದ್ಯಕೀಯ ಅಧಿಕಾರಿ, ಜನರಲ್ ಡ್ಯೂಟಿ ವೈದ್ಯಕೀಯ ಅಧಿಕಾರಿ ಹುದ್ದೆಗಳನ್ನು ಭರ್ತಿ ಮಾಡಲು ಕರ್ನಾಟಕ ಲೋಕಸೇವಾ ಆಯೋಗ ಅರ್ಜಿಗಳನ್ನು ಆಹ್ವಾನಿಸಿದೆ.

1065 ಹಿರಿಯ ವೈದ್ಯಕೀಯ ಅಧಿಕಾರಿ ಹಾಗೂ 365 ಜನರಲ್ ಡ್ಯೂಟಿ ವೈದ್ಯಕೀಯ ಅಧಿಕಾರಿ ಒಟ್ಟು 1430 ಹುದ್ದೆಗಳನ್ನು ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದ್ದು, ಆಸಕ್ತ ಅಭ್ಯರ್ಥಿಗಳು ನಿಗದಿತ ದಿನಾಂಕ ಸೆಪ್ಟೆಂಬರ್ 11, 2017ರೊಳಗೆ ಅರ್ಜೀ ಸಲ್ಲಿಸಲು ಕೋರಲಾಗಿದೆ.

KPSC Recruitment 2017 Apply for 1430 Medical Officer Posts

ಹುದ್ದೆ:
1. ಹಿರಿಯ ವೈದ್ಯಕೀಯ ಅಧಿಕಾರಿ
* ವಿದ್ಯಾರ್ಹತೆ: ಹಿರಿಯ ವೈದ್ಯಕೀಯ ಅಧಿಕಾರಿ ಹುದ್ದೆಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ಎಂಬಿಬಿಎಸ್ ಪದವಿ ಪೂರ್ಣಗೊಳಿಸಿರಬೇಕು.
* ವೇತನ ಶ್ರೇಣಿ: 30400 ರಿಂದ 51300 ರು. ತಿಂಗಳಿಗೆ

2. ಜನರಲ್ ಡ್ಯೂಟಿ ವೈದ್ಯಕೀಯ ಅಧಿಕಾರಿ
* ವಿದ್ಯಾರ್ಹತೆ: ಜನರಲ್ ಡ್ಯೂಟಿ ವೈದ್ಯಕೀಯ ಅಧಿಕಾರಿ ಹುದ್ದೆಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಎಂಬಿಬಿಎಸ್ ಪದವಿ ಪೂರ್ಣಗೊಳಿಸಿರಬೇಕು.
ವೇತನ ಶ್ರೇಣಿ: 28100 ರಿಂದ 50100 ರು. ತಿಂಗಳಿಗೆ.

* ವಯೋಮಿತಿ: ಮೇಲೆ ತಿಳಿಸಲಾಗಿರುವ ಎರಡೂ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಸಾಮಾನ್ಯ ಅಭ್ಯರ್ಥಿಗಳಿಗೆ 21ರಿಂದ 42 ವರ್ಷ. ಎಸ್ಸಿ ಮತ್ತು ಎಸ್ಟಿ ಅಭ್ಯರ್ಥಿಗಳಿಗೆ 21 ರಿಂದ 47 ವರ್ಷ. 2A/2B/3A/3B ಅಭ್ಯರ್ಥಿಗಳಿಗೆ 21ರಿಂದ 45 ವರ್ಷ ನಿಗದಿ ಪಡಿಸಲಾಗಿದೆ.

ಇನ್ನು ಈ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯಬೇಕಿದ್ದಲ್ಲಿ ಇಲ್ಲಿ ಕ್ಲಿಕ್ಕಿಸಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+