ಕೋಲಾರ; ಖಾಸಗಿ ಕಂಪನಿಗಳಲ್ಲಿ 5000 ನೇಮಕಾತಿ
ಕೋಲಾರ, ಅಕ್ಟೋಬರ್ 20 : ಕೋಲಾರ ಜಿಲ್ಲೆಯಲ್ಲಿ ಖಾಸಗಿ ಕಂಪನಿಯಲ್ಲಿ ತಕ್ಷಣ 5000 ನೇಮಕಾತಿ ಮಾಡಲಾಗುತ್ತದೆ. ಆಸಕ್ತ ಅಭ್ಯರ್ಥಿಗಳು ಪೋರ್ಟಲ್‍ನಲ್ಲಿ ಮಾಹಿತಿ ಪಡೆಯಬಹುದಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ನರಸಾಪುರ ಕೈಗಾರಿಕಾ ಪ್ರದೇಶದಲ್ಲಿ ವಿಸ್ಟಾನ್ ಮತ್ತು ಹೋಂಡಾ ಕಂಪನಿಗಳಲ್ಲಿ ತಕ್ಷಣಕ್ಕೆ 5000 ಉದ್ಯೋಗಾವಕಾಶ ಮತ್ತು ಮುಂದಿನ 12 ತಿಂಗಳಲ್ಲಿ 25 ಸಾವಿರ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ.
ಈ ಉದ್ಯೋಗಾವಕಾಶಗಳ ಬಗ್ಗೆ ಕೌಶಲ್ಯಾಭಿವೃದ್ಧಿ ಅಥವಾ ತರಬೇತಿಯ ಹೆಚ್ಚಿನ ಮಾಹಿತಿಗಾಗಿ ಕೌಶಲ್ಯಾಭಿವೃದ್ದಿ ಇಲಾಖೆಯ skillconnect.kaushalkar.com ಪೋರ್ಟಲ್‍ನಲ್ಲಿ ಮಾಹಿತಿ ಪಡೆಯಬಹುದಾಗಿದೆ.

ಐಫೋನ್ ತಯಾರಿಕಾ ಕಂಪನಿ; ತೈಮಾನ್‌ನ ಮೆ.ವಿಸ್ಟ್ರನ್ ಟೆಕ್ನಾಲಜೀಸ್ ಕಂಪನಿಯ ಪ್ರತಿನಿಧಿಗಳು ರಾಜ್ಯದಲ್ಲಿ ಬಂಡವಾಳ ಹೂಡಿಕೆಗೆ ಆಸಕ್ತಿ ತೋರಿದ್ದರು. ಕೋಲಾರ ಜಿಲ್ಲೆಯ ನರಸಾಪುರದಲ್ಲಿ 3 ಸಾವಿರ ಕೋಟಿ ರೂ. ಹೂಡಿಕೆಗೆ ಸರ್ಕಾರ ಒಪ್ಪಿಗೆ ನೀಡಿತ್ತು.
43 ಎಕರೆ ಪ್ರದೇಶದಲ್ಲಿ ಐಫೋನ್ ತಯಾರಿಕಾ ಘಟಕ ಆರಂಭವಾಗಿದೆ. ಆರಂಭದಲ್ಲಿ 10,500 ಉದ್ಯೋಗವನ್ನು ಸ್ಥಳೀಯರಿಗೆ ನೀಡಬೇಕು ಎಂದು ರಾಜ್ಯ ಸರ್ಕಾರ ಸೂಚನೆ ನೀಡಿತ್ತು.
ಹೋಂಡಾ ಕಂಪನಿ ಸಹ ಕೋಲಾರದಲ್ಲಿ 2013ರಲ್ಲಿಯೇ ಘಟಕ ಆರಂಭಿಸಿದೆ. ಕರ್ನಾಟಕದಲ್ಲಿ ಕಂಪನಿ ಆರಂಭಿಸಿರುವ 3ನೇ ಘಟಕವಿದು. 96 ಎಕರೆ ಪ್ರದೇಶದಲ್ಲಿರುವ ಘಟಕಕ್ಕೆ 1350 ಕೋಟಿ ಹೂಡಿಕೆ ಮಾಡಲಾಗಿದೆ.












Click it and Unblock the Notifications