1242 ಸಹಾಯಕ ಪ್ರಾಧ್ಯಾಪಕರ ನೇಮಕಾತಿಗೆ ಜನವರಿ ಕೊನೆ ವಾರದಲ್ಲಿ ಪರೀಕ್ಷೆ

ಬೆಂಗಳೂರು ಡಿ. 20: ರಾಜ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ 1242 ಸಹಾಯಕ ಪ್ರಾಧ್ಯಾಪಕರ ಹುದ್ದೆಗಳ ನೇಮಕಕ್ಕೆ 47,103 ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದಾರೆ. ಅದರಲ್ಲಿ 33,379 ಅಭ್ಯರ್ಥಿಗಳು ಶುಲ್ಕ ಪಾವತಿಸಿ ಸ್ವರ್ಧಾತ್ಮಕ ಪರೀಕ್ಷೆ ಬರೆಯಲು ಅರ್ಹತೆ ಪಡೆದಿದ್ದಾರೆ. ಜನವರಿ ಕೊನೆ ವಾರದಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ನಡೆಸಲು ಕೆಇಎ ತೀರ್ಮಾನಿಸಿದ್ದು, ಅತಿ ಶೀಘ್ರದಲ್ಲಿ ಅಧಿಕೃತ ಆದೇಶ ಹೊರ ಬೀಳಲಿದೆ.

ರಾಜ್ಯದ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ 26 ವಿಷಯಗಳ ಬೋಧನೆಗೆ ಸಂಬಂಧಿಸಿದಂತೆ 1242 ಸಹಾಯಕ ಪ್ರಾಧ್ಯಾಪಕರ ನೇಮಕಕ್ಕೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಅರ್ಜಿ ಆಹ್ವಾನಿಸಿತ್ತು. ಜನವರಿ ಕೊನೆ ವಾರದಲ್ಲಿ ನಡೆಯಲಿರುವ ಸ್ಫರ್ಧಾತ್ಮಕ ಪರೀಕ್ಷೆಯಲ್ಲಿ ಪಡೆಯುವ ಅಂಕಗಳ ಆಧಾರದ ಮೇಲೆ ಸಹಾಯಕ ಪ್ರಾಧ್ಯಾಪಕರ ನೇಮಕಾತಿ ನಡೆಯಲಿದೆ.

ಸಹಾಯಕ ಪ್ರಾಧ್ಯಾಪಕ ಹುದ್ದೆಗಳ ಪೈಕಿ 16 ವಿಷಯಗಳಿಗೆ ಸಂಬಂಧಿಸಿದ 145 ಹುದ್ದೆಗಳು (ಕಲ್ಯಾಣ ಕರ್ನಾಟಕದ 63) 2015ರಲ್ಲಿ ಭರ್ತಿಯಾಗದ ಹುದ್ದೆಗಳಾಗಿವೆ. ಉಳಿದಂತೆ, ಪ್ರಸಕ್ತ ಸಾಲಿಗೆ 25 ವಿಷಯಗಳಿಗೆ 1,097 (ಕಲ್ಯಾಣ ಕರ್ನಾಟಕದ 158) ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. ಒಟ್ಟು ಹುದ್ದೆಗಳಲ್ಲಿ ಶೇ. 5ರಷ್ಟು ಹುದ್ದೆಗಳನ್ನು (60 ಹುದ್ದೆಗಳು) ಇಲಾಖೆಯ ಗ್ರೂಪ್‌ 'ಸಿ' ವೃಂದದಿಂದ ನೇರ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ.

KEA Recruitment 2021 : Exam on last week of January for the 1242 assistant professors post

ವಿಷಯವಾರು ನೇಮಕಾತಿ ವಿವರ:

ಅರ್ಥಶಾಸ್ತ್ರ, ಕನ್ನಡ, ಇತಿಹಾಸ, ಮತ್ತು ವಾಣಿಜ್ಯ ವಿಷಯಗಳಲ್ಲಿ 100ಕ್ಕೂ ಹೆಚ್ಚು ಹುದ್ದೆಗಳಿಗೆ ನೇಮಕಾತಿ ನಡೆಯಲಿದ್ದು, ಕನ್ನಡ ವಿಷಯದ 107 ಹುದ್ದೆಗಳಿಗೆ ಅತೀ ಹೆಚ್ಚು 9,928 ಅರ್ಜಿಗಳು ಸಲ್ಲಿಕೆ ಆಗಿವೆ. ಆ ಪೈಕಿ 7,148 ಮಂದಿ ಮಾತ್ರ ಶುಲ್ಕ ಪಾವತಿಸಿದ್ದಾರೆ. ವಾಣಿಜ್ಯ ವಿಷಯದಲ್ಲಿ ಅತೀ ಹೆಚ್ಚು 198 ಹುದ್ದೆಗಳಿದ್ದು ಅರ್ಜಿ ಸಲ್ಲಿಸಿದ್ದ 6,801 ಅಭ್ಯರ್ಥಿಗಳ ಪೈಕಿ 5,015 ಅಭ್ಯರ್ಥಿಗಳು ಶುಲ್ಕ ಪಾವತಿಸಿದ್ದಾರೆ.

ಫ್ಯಾಷನ್ ಟೆಕ್ನಾಲಜಿ, ಮೈಕ್ರೋ ಬಯಾಲಜಿ, ಭೂಗೋಳ ವಿಜ್ಞಾನ, ಭೂಗರ್ಭ ವಿಜ್ಞಾನ, ಸಾಮಾಜಿಕ ಕಾರ್ಯ, ಶಿಕ್ಷಣ, ಉರ್ದು ವಿಷಯಗಳಲ್ಲಿ 10 ಕ್ಕೂ ಕಡಿಮೆ ಹುದ್ದೆಗಳಿವೆ. ಕೇವಲ 2 ಹುದ್ದೆಗಳಿರುವ ಶಿಕ್ಷಣ ವಿಷಯಕ್ಕೆ 583 ಮಂದಿ ಅರ್ಜಿ ಸಲ್ಲಿಸಿದ್ದಾರೆ. ಈ ಪೈಕಿ 461 ಮಂದಿ ಶುಲ್ಕ ಪಾವತಿಸಿದ್ದಾರೆ. 3 ಹುದ್ದೆಗಳಿರುವ ಫ್ಯಾಷನ್‌ ಟೆಕ್ನಾಲಜಿ ವಿಷಯಕ್ಕೆ 21 ಮಂದಿ ಅರ್ಜಿ ಸಲ್ಲಿಸಿದ್ದು, 14 ಅಭ್ಯರ್ಥಿಗಳು ಶುಲ್ಕ ಪಾವತಿಸಿದ್ದಾರೆ.

KEA Recruitment 2021 : Exam on last week of January for the 1242 assistant professors post

ಸಹಾಯಕ ಪ್ರಾಧ್ಯಾಪಕ ಹುದ್ದೆಗಳ ನೇಮಕಾತಿಗೆ ಅಕ್ಟೋಬರ್ 7 ರಿಂದ ನವೆಂಬರ್ 6ರ ವರೆಗೆ ಅರ್ಜಿ ಸಲ್ಲಿಸಲು ಮೊದಲು ಅವಕಾಶ ನೀಡಿತ್ತು. ಕೆ- ಸೆಟ್‌ ಫಲಿತಾಂಶ ನ. 2ರಂದು ಪ್ರಕಟವಾಗಿದ್ದರಿಂದ ಅರ್ಜಿ ಸಲ್ಲಿಸುವ ದಿನಾಂಕವನ್ನು ಮುಂದೂಡಲಾಗಿತ್ತು. ಕಂಪ್ಯೂಟರ್‌ ವಿಜ್ಞಾನ, ರಾಜ್ಯಶಾಸ್ತ್ರ, ರಸಾಯನವಿಜ್ಞಾನ, ಎಲೆಕ್ಟ್ರಾನಿಕ್ಸ್‌, ಸಸ್ಯವಿಜ್ಞಾನ, ಪ್ರಾಣಿವಿಜ್ಞಾನ, ಅರ್ಥಶಾಸ್ತ್ರ ಮತ್ತು ಭೌತವಿಜ್ಞಾನ ವಿಷಯಗಳ ಹುದ್ದೆಗಳಿಗೆ ತತ್ಸಮಾನ ವಿಷಯಗಳ ವಿದ್ಯಾರ್ಹತೆ ನಿಗದಿಪಡಿಸಿದ್ದರಿಂದ ಮತ್ತೆ ಕೊನೆಯ ದಿನವನ್ನು ಡಿಸೆಂಬರ್ 6 ಕ್ಕೆ ಮತ್ತೊಮ್ಮೆ ವಿಸ್ತರಿಸಿತ್ತು.

KEA Recruitment 2021 : Exam on last week of January for the 1242 assistant professors post

ಕಡ್ಡಾಯ ಭಾಷಾ ವಿಷಯ ಪರೀಕ್ಷೆ: ಅಭ್ಯರ್ಥಿಗಳು ಕನ್ನಡ ಮತ್ತು ಇಂಗ್ಲಿಷ್‌ ವಿಷಯದಲ್ಲಿ ತಲಾ 100 ಅಂಕಗಳಿಗೆ ನಡೆಯಲಿರುವ ಪರೀಕ್ಷೆಯಲ್ಲಿ ತೇರ್ಗಡೆಯಾಗುವುದು ಕಡ್ಡಾಯ. ಈ ವಿಷಯಗಳಲ್ಲಿ ವಿವರಣಾತ್ಮಕ ಉತ್ತರ ಬರೆಯಬೇಕು. ಉಳಿದಂತೆ 50 ಅಂಕಗಳ ಸಾಮಾನ್ಯ ಜ್ಞಾನ ಮತ್ತು ಐಚ್ಚಿಕ ವಿಷಯದಲ್ಲಿ 250 ಅಂಕಗಳ ಬಹು ಆಯ್ಕೆಯ ಪರೀಕ್ಷೆ ನಡೆಯಲಿದೆ. ಬಹು ಆಯ್ಕೆಯ ಪರೀಕ್ಷೆಯಲ್ಲಿ ತಪ್ಪು ಉತ್ತರಕ್ಕೆ ಅಂಕ ಕಡಿತ (ಒಂದು ಅಂಕಕ್ಕೆ 0.25 ಅಂಕ) ಆಗಲಿದೆ. ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಪ್ರತೀ ವಿಷಯದಲ್ಲಿ ಕನಿಷ್ಠ 30, ಎರಡೂ ಸೇರಿ 70 ಅಂಕ ಪಡೆಯಲೇಬೇಕು. ಅದರಲ್ಲಿ ಅನುತ್ತೀರ್ಣರಾಗಿ, ಬಹು ಆಯ್ಕೆಯ ಪರೀಕ್ಷೆಯಲ್ಲಿ (ಐಚ್ಛಿಕ ಮತ್ತು ಸಾಮಾನ್ಯ ಜ್ಞಾನ) ಹೆಚ್ಚು ಅಂಕ ಗಳಿಸಿದ್ದರೂ ಹುದ್ದೆಗಳ ನೇಮಕಾತಿಗೆ ಅನರ್ಹರಾಗುತ್ತಾರೆ.

Recommended Video

      ಒಬ್ಬ ವ್ಯಕ್ತಿಗೆ ಡೆಲ್ಟಾ ಮತ್ತು ಒಮಿಕ್ರಾನ್ ಸೋಂಕು ಒಟ್ಟಿಗೆ ತಗುಲಿದ್ರೆ ಏನಾಗುತ್ತೆ? | Oneindia Kannada

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+