• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

4266 ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ದಿನಾಂಕ ಮುಂದೂಡಿದ ಪೊಲೀಸ್ ಇಲಾಖೆ

|

ಬೆಂಗಳೂರು, ಮೇ 15: ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ ಖಾಲಿಯಿರುವ 4266 ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಆಹ್ವಾನ ನೀಡಲಾಗಿತ್ತು. ಇದೀಗ, ಕೊರೊನಾ ಭೀತಿ ಹಿನ್ನಲೆ ಆನ್ ಲೈನ್‌ನಲ್ಲಿ ಅರ್ಜಿ ಸಲ್ಲಿಸುವ ದಿನಾಂಕ ಮೂಂದೂಡಲಾಗಿದೆ.

ಮೇ 18ರ ನಂತರ ಪೊಲೀಸ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ದಿನಾಂಕ ಘೋಷಣೆ ಮಾಡಲಾಗಿತ್ತು. ಜೂನ್ 15ರವರೆಗೂ ಕಾಲಾವಕಾಶ ನೀಡಲಾಗಿತ್ತು. ಆದರೆ, ಕೊರೊನಾ ಭೀತಿ ಹೆಚ್ಚಿದ ಹಿನ್ನೆಲೆ ತಾತ್ಕಲಿಕವಾಗಿ ಮುಂದೂಡಲಾಗಿದೆ ಎಂದು ನೇಮಕಾತಿ ADGP ಅಮ್ರಿತ್ ಪಾಲ್ ರಿಂದ ಆದೇಶಿಸಿದ್ದಾರೆ.

KSCDRC ನೇಮಕಾತಿ: 51 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

ಪೊಲೀಸ್ ಕಾನ್ಸ್ ಟೇಬಲ್ 2565 ಹುದ್ದೆ, 556 ಸಬ್ ಇನ್ಸ್‌ಪೆಕ್ಟರ್ ಹುದ್ದೆ, 2672 KSRP ಕಾನ್ಸ್ ಟೇಬಲ್ ಹುದ್ದೆ, 162 ಸಶಸ್ತ್ರ ಸಬ್ ಇನ್ಸ್‌ಪೆಕ್ಟರ್ ಹುದ್ದೆಗೆ ಅರ್ಜಿ ಆಹ್ವಾನ ಮಾಡಲಾಗಿತ್ತು.

ಮೇ 17ರ ನಂತರವೂ ಲಾಕ್‌ಡೌನ್‌ ಮುಂದುವರಿಯಲಿದ್ದು, ಸಾರಿಗೆ ವ್ಯವಸ್ಥೆ, ಸೈಬರ್ ಕೆಫೆಗಳು ಪೂರ್ಣ ಪ್ರಮಾಣದಲ್ಲಿ ಲಭ್ಯವಿರುವುದಿಲ್ಲ. ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬೇಕಾಗಿರುವ ಕಾರಣ, ಅಭ್ಯರ್ಥಿಗಳು ಹಿತದೃಷ್ಟಿಯಿಂದ ‌ಅರ್ಜಿ ಸಲ್ಲಿಸುವ ದಿನಾಂಕ ಮೂಂದೂಡಿಕೆಯಾಗಿದೆ.

English summary
Karnataka Police 4266 job recruitment temporarily postponed says Police Department.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X