Get Updates
Get notified of breaking news, exclusive insights, and must-see stories!

ಕರ್ನಾಟಕ ಕಾರ್ಮಿಕ ಕಲ್ಯಾಣ ಮಂಡಳಿಯ 186 ಖಾಲಿ ಹುದ್ದೆಗಳ ನೇಮಕ, ಅಧಿಸೂಚನೆ-ಪರೀಕ್ಷೆ ಮಾಹಿತಿ ತಿಳಿಯಿರಿ

ಬೆಂಗಳೂರು, ಮಾರ್ಚ್‌ 31: ಕರ್ನಾಟಕ ಕಟ್ಟಡ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಶೀಘ್ರವೇ ನೇಮಕಾತಿಗಾಗಿ ಅಧಿಸೂಚನೆ ಪ್ರಕಟಗೊಳ್ಳಲಿದೆ.

ಕಲ್ಯಾಣ ಅಧಿಕಾರಿ, ಕ್ಷೇತ್ರ ನಿರೀಕ್ಷಕರು, ಪ್ರಥಮ ದರ್ಜೆ ಸಹಾಯಕರು, ಆಪ್ತ ಸಹಾಯಕರು, ದ್ವಿತೀಯ ದರ್ಜೆ ಸಹಾಯಕರು ಒಳಗೊಂಡ ಒಟ್ಟು 186 ಹುದ್ದೆಗಳ ಭರ್ತಿಗೆ ಆರ್ಥಿಕ ಇಲಾಖೆಯು ಅನುಮೋದನೆ ನೀಡಿದೆ. ಈ ಹುದ್ದೆಗಳಿಗೆ ಅರ್ಹರರನ್ನು ನೇಮಕ ಮಾಡಿಕೊಳ್ಳಲು ಈಗಾಗಲೇ ಸಿದ್ಧಪಡಿಸಲಾಗಿರುವ ಅಧಿಸೂಚನೆಯನ್ನು ಶೀಘ್ರದಲ್ಲೇ ಹೊರಡಿಲಾಗುವುದು ಎಂದು ಸರ್ಕಾರ ತಿಳಿಸಿದೆ.

Karnataka Labour welfare department recruitment of 186 posts soon

ಈ ಸಂಬಂಧ ಕರ್ನಾಟಕ ರಾಜ್ಯ ಪರೀಕ್ಷಾ ಪ್ರಾಧಿಕಾರ (KEA) ಪ್ರಕಟಣೆ ಹೊರಡಿಸಿ ಶೀಘ್ರವೇ ಅರ್ಹರಿಂದ ಅರ್ಜಿ ಆಹ್ವಾನಿಸಲಿದೆ. ಆದ್ದರಿಂದ ಈ ಹುದ್ದೆಗಳಲ್ಲಿ ಆಸಕ್ತಿ ಇರುವವರು ಇಂದಿನಿಂದಲೇ ಅದಕ್ಕೆ ತಕ್ಕ ತಯಾರಿ ಮಾಡಿಕೊಳ್ಳುವುದು ಒಳಿತು.

ಖಾಲಿ ಹುದ್ದೆಗಳಿಗೆ ಆಯ್ಕೆಯಾಗಬೇಕಾದರೆ ಸ್ಪರ್ಧಾತ್ಮಕ ಲಿಖಿತ ಪರೀಕ್ಷೆ ಎದುರಿಸಬೇಕು. ಅದಕ್ಕಾಗಿ ಆಸಕ್ತಿ ಅಭ್ಯರ್ಥಿಗಳು ವಿದ್ಯಾಭ್ಯಾಸ ಆರಂಭಿಸಬೇಕಿದೆ. ಸದರಿ ಖಾಲಿ ಹುದ್ದೆಗಳ ನೇಮಕಾತಿ ಸಂಬಂಧದ ಪರೀಕ್ಷೆಗಳನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (ಕೆಇಎ) ಜೂನ್ ಇಲ್ಲವೇ ಜುಲೈ ತಿಂಗಳಲ್ಲಿ ನಡೆಸಲಿವೆ ಎಂದು ತಳಿದು ಬಂದಿದೆ.

ಪರೀಕ್ಷಾ ವಿಧಾನ ಹಾಗೂ ಅರ್ಜಿ ಶುಲ್ಕ, ಹುದ್ದೆವಾರು ವಿದ್ಯಾರ್ಹತೆ, ಶೈಕ್ಷಣಿಕ ಅರ್ಹತೆ ಸೇರಿದಂತೆ ಮುಂತಾದ ಮಾನದಂಡಗಳು ಹಾಗೂ ಪೂರ್ಣ ಮಾಹಿತಿ ಅಧಿಸೂಚನೆ ಪ್ರಕಟಗೊಂಡ ನಂತರವೇ ತಿಳಿಯಲಿದೆ. ಅದಕ್ಕು ಮೊದಲು ಹುದ್ದೆಗಳ ಮಾಹಿತಿ ಇಲ್ಲಿ ತಿಳಿಯೋಣ.

Karnataka Labour welfare department recruitment of 186 posts soon

ಖಾಲಿ ಹುದ್ದೆಗಳ ಮಾಹಿತಿ

ದ್ವಿತೀಯ ದರ್ಜೆ ಸಹಾಯಕರು- 100.

ಪ್ರಥಮ ದರ್ಜೆ ಸಹಾಯಕರು- 12

ಕ್ಷೇತ್ರ ನಿರೀಕ್ಷಕರು - 60

ಕಲ್ಯಾಣ ಅಧಿಕಾರಿಗಳು- 12

ಆಪ್ತ ಸಹಾಯಕರು 02

ಒಟ್ಟು ಖಾಲಿ ಹುದ್ದೆಗಳು- 186

ಕಟ್ಟಡ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿನ 186 ಖಾಲಿ ಹುದ್ದೆಗಳಿಗೆ ಕುರಿತಾದ ಅಧಿಸೂಚನೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಅಧಿಕೃತ ವೆಬ್‌ಸೈಟ್‌ನಲ್ಲಿ ಮುಂದಿನ 15ರಂದು ಬಿಡುಗಡೆಗೊಳಿಸಲಿದೆ. ಆಸಕ್ತರು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಏಪ್ರಿಲ್ 17 ರಿಂದ ಮೇ 17 ರವರೆಗೆ ಅವಕಾಶ ಸಿಗಲಿದೆ. ಶುಲ್ಕ ಸಹಿತ ಅರ್ಜಿಯನ್ನು ಮೇ 20ರೊಳಗೆ ಪಾವಿಸಬೇಕು ಅವಕಾಶ ಕಲ್ಪಿಸಾಗುತ್ತದೆ ಎಂದು ಪ್ರಾಧಿಕಾರದ ಮೂಲಗಳು ತಿಳಿಸಿವೆ.

ಅರ್ಹ ಆಸಕ್ತ ಅಭ್ಯರ್ಥಿಗಳು ತಮ್ಮ ಶೈಕ್ಷಣಿಕ ದಾಖಲೆಗಳಾದ ಎಸ್‌ಎಸ್‌ಎಲ್‌ಸಿ ಅಂಕಪಟ್ಟಿ ಸೇರಿದಂತೆ ಇತರ ದಾಖೆಲೆಗಳು, ವೈಯಕ್ತಿಕ ದಾಖಲೆ ಪತ್ರಗಳು, ಇ- ಮೇಲ್ ವಿಳಾಸ ಹಾಗೂ ಮೊಬೈಲ್ ನಂಬರ್, ಹುದ್ದೆಗಳಿಗೆ ತಕ್ಕುದಾದ ಸೂಕ್ತ ವಿದ್ಯಾರ್ಹತೆ ದಾಖಲೆಗಳು, ಜಾತಿ ಪ್ರಮಾಣ ಪತ್ರ, ಆಧಾರ್ ಕಾರ್ಡ್ ಹಾಗೂ ಇತರ ದಾಖಲೆಗಳು ಅರ್ಜಿ ಸಲ್ಲಿಕೆಗೆ ಬೇಕಾಗಬಹುದು ಎಂದು ಹೇಳಲಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+