ಕೆಪಿಎಸ್‌ಸಿ ಗ್ರೂಪ್ 'ಸಿ' ನೇಮಕಾತಿ ಅಧಿಸೂಚನೆ ವಿವರ

Posted By:
Subscribe to Oneindia Kannada

ಬೆಂಗಳೂರು, ಮಾರ್ಚ್ 04 : ಕರ್ನಾಟಕ ಲೋಕಸೇವಾ ಆಯೋಗ ಗ್ರೂಪ್ 'ಸಿ' ವೃಂದದ ತಾಂತ್ರಿಕೇತರ ಹುದ್ದೆಗಳನ್ನು ಭರ್ತಿ ಮಾಡಲು ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಏಪ್ರಿಲ್ 4, 2016. [162 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದ KPSC]

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಕನಿಷ್ಠ ವಯೋಮಿತಿ 18 ವರ್ಷಗಳು. ಸಾಮಾನ್ಯ ವರ್ಗದವರಿಗೆ 35, 2ಎ/2ಬಿ/3ಎ/3ಬಿ ಅಭ್ಯರ್ಥಿಗಳಿಗೆ 38 ವರ್ಷ. ಎಸ್‌ಸಿ/ಎಸ್‌ಟಿ/ಪ್ರವರ್ಗ 1ರ ಅಭ್ಯರ್ಥಿಗಳಿಗೆ 40 ವರ್ಷಗಳ ಗರಿಷ್ಠ ವಯೋಮಿತಿ ನಿಗದಿಪಡಿಸಲಾಗಿದೆ.[ಅರ್ಜಿ ಸಲ್ಲಿಸಲು ವಿಳಾಸ]

kpsc

ಮಾರ್ಚ್ 3ರಿಂದ ಏಪ್ರಿಲ್ 1ರ ರಾತ್ರಿ 11.45ರ ತನಕ ಅರ್ಜಿಗಳನ್ನು ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಅರ್ಜಿ ಶುಲ್ಕಗಳನ್ನು ಪಾವತಿ ಮಾಡಲು ಕೊನೆಯ ದಿನಾಂಕ ಏಪ್ರಿಲ್ 4, 2016. ಅರ್ಜಿ ಶುಲ್ಕವನ್ನು ಇ-ಪಾವತಿ ಅಂಚೆ ಕಚೇರಿಗಳಲ್ಲಿ ಕಚೇರಿ ಸಮಯದಲ್ಲಿ ಪಾವತಿ ಮಾಡಬಹುದಾಗಿದೆ. [ಕೊಡಗು ನ್ಯಾಯಾಲಯದಲ್ಲಿ ಕೆಲಸ ಖಾಲಿ ಇದೆ]

ಅರ್ಜಿ ಶುಲ್ಕ : ಸಾಮಾನ್ಯ ಅರ್ಹತೆ, ಪ್ರವರ್ಗ 2ಎ, 2ಬಿ, 3ಎ, 3ಬಿಗೆ ಸೇರಿದ ಅಭ್ಯರ್ಥಿಗಳಿಗೆ 300 ರೂ., ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ/ಪ್ರವರ್ಗ -1/ಅಂಗವಿಕಲ ಮತ್ತು ಮಾಜಿ ಸೈನಿಕ ಅಭ್ಯರ್ಥಿಗಳಿಗೆ 25 ರೂ.

ಹುದ್ದೆಗಳ ವಿವರಗಳು : ಸಾರ್ವಜನಿಕ ಗ್ರಂಥಾಲಯ ಇಲಾಖೆಯಲ್ಲಿ ಗ್ರಂಥಪಾಲಕರು 2 ಹುದ್ದೆಗಳು. ವಾಣಿಜ್ಯ ತೆರಿಗೆ ಇಲಾಖೆಯಲ್ಲಿ ವಾಣಿಜ್ಯ ಪರಿವೀಕ್ಷಕರು 307 ಹುದ್ದೆ, ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆಯ ಅಂಧ ಮಕ್ಕಳ ಶಾಲೆಯಲ್ಲಿ ಪದವೀಧರ ಸಹಾಯಕರು/ ಶಿಕ್ಷಕರು 10 ಹುದ್ದೆ.

ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆಯ ಕಿವುಡು ಮಕ್ಕಳ ಶಾಲೆಯಲ್ಲಿ ಪದವೀಧರ ಸಹಾಯಕರು/ ಶಿಕ್ಷಕರು 13 ಹುದ್ದೆ. ಉದ್ಯೋಗ ಮತ್ತು ತರಬೇತಿ ಇಲಾಖೆಯಲ್ಲಿ ಸಹಾಯಕ ಉದ್ಯೋಗಾಧಿಕಾರಿ 20 ಹುದ್ದೆಗಳು.

ಪೌರಾಡಳಿತ ಇಲಾಖೆಯಲ್ಲಿನ ನಗರ ಸ್ಥಳೀಯ ಸಂಸ್ಥೆಗಳ ಅಕೌಂಟೆಂಟ್ 39 ಹುದ್ದೆಗಳು. ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯಲ್ಲಿ 1 ಗಣತಿದಾರರ ಹುದ್ದೆ. ಕರ್ನಾಟಕ ರಾಜ್ಯ ಲೆಕ್ಕಪರಿಶೋಧನೆ ಮತ್ತು ಲೆಕ್ಕ ಪತ್ರ ಇಲಾಖೆಯಲ್ಲಿ 445 ಲೆಕ್ಕ ಸಹಾಯಕರ ಹುದ್ದೆ.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ ಮಹಿಳಾ ಮೇಲ್ವಿಚಾರಕಿ (ಮಹಿಳೆ) 86 ಹುದ್ದೆಗಳು. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಲ್ಲಿ ನಿಲಯ ಮೇಲ್ವಿಚಾರಕರು (ಪುರುಷ) 175 ಹುದ್ದೆ. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಲ್ಲಿ ನಿಲಯ ಮೇಲ್ವಿಚಾರಕರು (ಮಹಿಳೆ) 56 ಹುದ್ದೆ. [ಕನ್ನಡದಲ್ಲಿ ನೇಮಕಾತಿ ಆದೇಶ ಓದಿ]

ಪೌರಾಡಳಿತ ಇಲಾಖೆಯಲ್ಲಿನ ಮಹಾನಗರ ಪಾಲಿಕೆಗಳಲ್ಲಿ ಪ್ರಥಮ ದರ್ಜೆ ಕಂದಾಯ ನಿರೀಕ್ಷಕರು 58 ಹುದ್ದೆ. ಪೌರಾಡಳಿತ ಇಲಾಖೆಯಲ್ಲಿನ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಪ್ರಥಮ ದರ್ಜೆ ಕಂದಾಯ ನಿರೀಕ್ಷಕರು 23 ಹುದ್ದೆ. ಕೃಷಿ ಮಾರಾಟ ಇಲಾಖೆಯಲ್ಲಿ ಮಾರುಕಟ್ಟೆ ಮೇಲ್ವಿಚಾರಕರು 5 ಹುದ್ದೆ.

phone number

ಪೌರಾಡಳಿತ ಇಲಾಖೆಯಲ್ಲಿನ ಮಹಾನಗರ ಪಾಲಿಕೆಗಳಲ್ಲಿನ ತೋಟಗಾರಿಕಾ ನಿರೀಕ್ಷಕರು 24 ಹುದ್ದೆ. ಸಹಕಾರ ಸಂಘಗಳ ಲೆಕ್ಕಪರಿಶೋಧನೆ ಇಲಾಖೆಯಲ್ಲಿ ಲೆಕ್ಕ ಪರಿಶೋಧಕರು 50 ಹುದ್ದೆ. ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆಯಲ್ಲಿ 1 ಹುದ್ದೆ ಮ್ಯೂಜಿಕ್ ಟೀಚರ್ ಗ್ರೇಡ್ 2. ಪೌರಾಡಳಿತ ಇಲಾಖೆಯಲ್ಲಿನ ಮಹಾನಗರ ಪಾಲಿಕೆಗಳಲ್ಲಿನ ತೋಟಗಾರಿಕಾ ಸಹಾಯಕರು 21 ಹುದ್ದೆ.

ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆಯ ಕಿವುಡು ಮಕ್ಕಳ ಶಾಲೆಯಲ್ಲಿ ಪದವಿ ಪೂರ್ವ ಸಹಾಯಕರು 9 ಹುದ್ದೆ. ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆಯ ಅಂಧ ಮಕ್ಕಳ ಶಾಲೆಯಲ್ಲಿ ಪದವಿಪೂರ್ವ ಸಹಾಯಕರು 13 ಹುದ್ದೆ. ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆಯ ಅಂಧ ಮಕ್ಕಳ ಶಾಲೆಯಲ್ಲಿ 3 ಚಲನವಲನ ಬೋಧಕರು ಗ್ರೇಡ್ - 2 ಹುದ್ದೆ.

ಪೌರಾಡಳಿತ ಇಲಾಖೆಯಲ್ಲಿನ ಮಹಾನಗರ ಪಾಲಿಕೆಗಳಲ್ಲಿ ಕರವಸೂಲಿಗಾರರು 286 ಹುದ್ದೆ. ಪೌರಾಡಳಿತ ಇಲಾಖೆಯಲ್ಲಿನ ಸ್ಥಳೀಯ ಸಂಸ್ಥೆಗಳಲ್ಲಿ ಕರವಸೂಲಿಗಾರರು 43 ಹುದ್ದೆಗಳು. ವಿಕಲಚೇತನರ ಹಾಗೂ ಹಿರಿಯ ನಾಗರೀಕ ಸಬಲೀಕರಣ ಇಲಾಖೆ ಮ್ಯೂಜಿಕ್ ಟೀಚರ್ ಗ್ರೇಡ್ 3 ಒಂದು ಹುದ್ದೆ. ಕರ್ನಾಟಕ ರಾಜ್ಯ ಲೆಕ್ಕಪರಿಶೋಧನೆ ಮತ್ತು ಲೆಕ್ಕ ಪತ್ರ ಇಲಾಖೆಯಲ್ಲಿ 234 ಕಿರಿಯ ಲೆಕ್ಕ ಸಹಾಯಕರ ಹುದ್ದೆ.

Englishನಲ್ಲಿ ಓದಿ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The Karnataka Public Service Commission (KPSC) has invited online applications for Group 'C' non technical post. April 1, 2016 last date for submit application.
Please Wait while comments are loading...