ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರೌಢಶಾಲೆಗಳ ಅತಿಥಿ ಶಿಕ್ಷಕರಿಗೆ ವೇತನ ಬಿಡುಗಡೆ ಮಾಡಿದ ಸರ್ಕಾರ

|
Google Oneindia Kannada News

ಬೆಂಗಳೂರು, ನವೆಂಬರ್ 18; ಕರ್ನಾಟಕ ಸರ್ಕಾರ ಹೊಸದಾಗಿ ರಚನೆಯಾದ ತಾಲ್ಲೂಕು ಪಂಚಾಯಿತಿಗಳ ವ್ಯಾಪ್ತಿಯ ಸರ್ಕಾರಿ ಪ್ರೌಢಶಾಲೆಗಳಲ್ಲಿ ಕಾರ್ಯ ನಿರ್ವಹಣೆ ಮಾಡುವ ಅತಿಥಿ ಶಿಕ್ಷಕರಿಗೆ ವೇತನ ಬಿಡುಗಡೆ ಮಾಡಿದೆ.

ಸರ್ಕಾರಿ ಪ್ರೌಢಶಾಲೆಗಳಲ್ಲಿ ತೆರವಾಗಿರುವ ಬೋಧಕ ಸಿಬ್ಬಂದಿ ಹುದ್ದೆಗಳಿಗೆ ಎದುರಾಗಿ ಅತಿಥಿ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿರುವರ ಸಂಭಾವನೆಗಾಗಿ ಅನುದಾನ ಬಿಡುಗಡೆಗೊಳಿಸಿ ಆದೇಶ ಹೊರಡಿಸಲಾಗಿದೆ.

ಚಿತ್ರದುರ್ಗದ ಶಿಕ್ಷಕ ಉಮೇಶ್‌ಗೆ ರಾಷ್ಟ್ರಮಟ್ಟದ ಪ್ರಶಸ್ತಿ ಚಿತ್ರದುರ್ಗದ ಶಿಕ್ಷಕ ಉಮೇಶ್‌ಗೆ ರಾಷ್ಟ್ರಮಟ್ಟದ ಪ್ರಶಸ್ತಿ

ರಾಜ್ಯದ ಹೊಸದಾಗಿ ರಚನೆಯಾದ ತಾಲ್ಲೂಕು ಪಂಚಾಯಿತಿಗಳ ವ್ಯಾಪ್ತಿಯ ಶಿಕ್ಷಣ ಇಲಾಖೆಯಲ್ಲಿ 2022-23ನೇ ಸಾಲಿನಲ್ಲಿ ಸರ್ಕಾರಿ ಪ್ರೌಢಶಾಲೆಗಳಲ್ಲಿ ತೆರವಾಗಿರುವ ಶಿಕ್ಷಕರ ಹುದ್ದೆಗಳಿಗೆದುರಾಗಿ ಅತಿಥಿ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಶಿಕ್ಷಕರ ಸಂಭಾವನೆಗಾಗಿ ರೂ. 245.85 ಲಕ್ಷಗಳನ್ನು ಬಿಡುಗಡೆ ಮಾಡಲಾಗಿದೆ.

ಶೇ 14ರಷ್ಟು ಉದ್ಯೋಗ ಕಡಿತ ಘೋಷಿಸಿದ ಡಿಜಿಟಲ್ ಪೇಮೆಂಟ್ ಕಂಪನಿಶೇ 14ರಷ್ಟು ಉದ್ಯೋಗ ಕಡಿತ ಘೋಷಿಸಿದ ಡಿಜಿಟಲ್ ಪೇಮೆಂಟ್ ಕಂಪನಿ

Karnataka Govt Released Fund For Salary Of High School Guest Teacher

ಸರ್ಕಾರಿ ಪ್ರೌಢಶಾಲೆಗಳಲ್ಲಿ ಅತಿಥಿ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಶಿಕ್ಷಕರ ಸಂಭಾವನೆಗಾಗಿ ಅಗತ್ಯವಿರುವ ರೂ. 245.85 ಲಕ್ಷಗಳನ್ನು ಲಭ್ಯವಿರುವ ಅನುದಾನದಿಂದ ಬಿಡುಗಡೆಗೊಳಿಸಲು ನಿರ್ಣಯ ಅಂಗೀಕರಿಸಿ ಆದೇಶ ಹೊರಡಿಸಲಾಗಿದೆ.

ವಿಶೇಷ ರಿಸರ್ವ್ ಸಬ್‌ಇನ್ಸ್‌ಪೆಕ್ಟರ್ ನೇಮಕಾತಿ ಪರೀಕ್ಷೆ ದಿನಾಂಕ ಪ್ರಕಟ ವಿಶೇಷ ರಿಸರ್ವ್ ಸಬ್‌ಇನ್ಸ್‌ಪೆಕ್ಟರ್ ನೇಮಕಾತಿ ಪರೀಕ್ಷೆ ದಿನಾಂಕ ಪ್ರಕಟ

ದಿನಾಂಕ 15ನೇ ನವೆಂಬರ್ 2022ರ ಪ್ರಸ್ತಾವನೆಯಲ್ಲಿ ವಿವರಿಸಿರುವಂತೆ ಈ ಆದೇಶಕ್ಕೆ ಲಗತ್ತಿಸಿರುವ ಅನುಬಂಧ-1ರಲ್ಲಿ ಕಾಲ೦ 1ರ ಹೊಸ ತಾಲ್ಲೂಕು ಪಂಚಾಯತಿಗಳ ವ್ಯಾಪ್ತಿಯ ಶಿಕ್ಷಣ ಇಲಾಖೆಯಲ್ಲಿ 2022-23ರಲ್ಲಿ ಸರ್ಕಾರಿ ಪ್ರೌಢಶಾಲೆಗಳಲ್ಲಿ ಅತಿಥಿ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಶಿಕ್ಷಕರಿಗೆ ಕಾಲಂ 5ರಲ್ಲಿ ತೋರಿಸಿದಂತೆ ಅನುದಾನ ಬಿಡುಗಡೆ ಮಾಡಲಾಗಿದೆ.

ಈ ಅನುದಾನವನ್ನು ಪ್ರಸ್ತಾವಿತ ಉದ್ದೇಶಕ್ಕಾಗಿ ಆದ್ಯತೆಯ ಮೇಲೆ ವೆಚ್ಚ ಮಾಡತಕ್ಕದ್ದು, ಯಾವುದೇ ಹಂತದಲ್ಲಿ ಅಂದರೆ ತಾಲ್ಲೂಕು ಪಂಚಾಯತಿ ಅಥವಾ ಅನುಷ್ಠಾನಾಧಿಕಾರಿಗಳ ಹಂತದಲ್ಲಿ ವಿಳಂಬವಾದಲ್ಲಿ ಮತ್ತೊಮ್ಮೆ ಅನುದಾನವನ್ನು ಒದಗಿಸುವುದಿಲ್ಲವೆಂದು ಮತ್ತು ವಿಳಂಬಕ್ಕೆ ಕಾರಣರಾದ ಅಧಿಕಾರಿಗಳ ವಿರುದ್ಧ ನಿಯಮಾನುಸಾರ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.

ಯಾವ ಜಿಲ್ಲೆಯ ಯಾವ ತಾಲೂಕಿಗೆ ಎಷ್ಟು ಅನುದಾನ ಬಿಡುಗಡೆ?; ಉಡುಪಿಯ ಬ್ರಹ್ಮಾವರ 11 ಶಿಕ್ಷಕರಿಗೆ 8.40 ಲಕ್ಷ, ಉಡುಪಿ ಬೈಂದೂರು 18 ಶಿಕ್ಷಕರಿಗೆ 13.74 ಲಕ್ಷ. ವಿಜಯಪುರ ಚಡಚಣದಲ್ಲಿ 22 ಶಿಕ್ಷಕರಿಗೆ 16.80 ಲಕ್ಷ. ವಿಜಯನಗರದ ಕೊಟ್ಟೂರಿನಲ್ಲಿ 7 ಶಿಕ್ಷಕರಿಗೆ 5.35 ಲಕ್ಷ ಅನುದಾನ ಬಿಡುಗಡೆ ಮಾಡಲಾಗಿದೆ.

ಚಾಮರಾಜನಗರದ ಹನೂರು 20 ಶಿಕ್ಷಕರಿಗೆ 15.27 ಲಕ್ಷ. ದಕ್ಷಿಣ ಕನ್ನಡದ ಮೂಡಬಿದಿರೆ 10 ಶಿಕ್ಷಕರಿಗೆ 7.64. ದಕ್ಷಿಣ ಕನ್ನಡ ಕಡಬ 13 ಶಿಕ್ಷಕರಿಗೆ 9.93 ಲಕ್ಷ. ಬೆಳಗಾವಿಯ ಕಿತ್ತೂರು 17 ಶಿಕ್ಷಕರಿಗೆ 12.98 ಲಕ್ಷ ಬಿಡುಗಡೆ ಮಾಡಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಉತ್ತರ ಕನ್ನಡದ ದಾಂಡೇಲಿಯ 3 ಶಿಕ್ಷಕರಿಗೆ 2.29 ಲಕ್ಷ. ಬಾಗಲಕೋಟೆಯ ಗುಳೇದಗುಡ್ಡದ 6 ಶಿಕ್ಷಕರಿಗೆ 4.58 ಲಕ್ಷ. ಬಾಗಲಕೋಟೆಯ ಇಳಕಲ್‌ನ 8 ಶಿಕ್ಷಕರಿಗೆ 6.11 ಲಕ್ಷ. ಬಾಗಲಕೋಟೆಯ ರಬಕವಿ ಬನಹಟ್ಟಿ 50 ಶಿಕ್ಷಕರಿಗೆ 38.18 ಲಕ್ಷ ನೀಡಲಾಗಿದೆ.

ಯಾದಗಿರಿಯ ವಡೆಗೇರಾದ 10 ಶಿಕ್ಷಕರಿಗೆ 7.64 ಲಕ್ಷ. ಯಾದಗಿರಿಯ ಹುಣಸಗಲ್‌ನ 31 ಶಿಕ್ಷಕರಿಗೆ 23.67 ಲಕ್ಷ. ಯಾದಗಿರಿಯ ಗುರುಮಿಠ್ಕಲ್ 33 ಶಿಕ್ಷಕರಿಗೆ 25.20 ಲಕ್ಷ. ರಾಯಚೂರಿನ ಮಸ್ಕಿಯ 28 ಶಿಕ್ಷಕರಿಗೆ 21.38 ಲಕ್ಷ. ವಿಜನಯನಗರದ ಕಂಪ್ಲಿಯ 16 ಶಿಕ್ಷಕರಿಗೆ 12.22 ಲಕ್ಷ ಮತ್ತು ಬಳ್ಳಾರಿಯ ಕುರುಗೋಡು 19 ಶಿಕ್ಷಕರಿಗೆ 14.51 ಲಕ್ಷ ಬಿಡುಗಡೆ.

English summary
Karnataka government released fund for the salary of the government high school guest teacher. 245.85 lakh released.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X