ಸರ್ಕಾರಿ ಉದ್ಯೋಗ ಹುಡುಕುತ್ತಿರುವವರಿಗೆ ಸಿಹಿ ಸುದ್ದಿ
ಬೆಂಗಳೂರು, ಮಾರ್ಚ್ 31; ಕರ್ನಾಟಕ ಸರ್ಕಾರ ಸರ್ಕಾರಿ ಉದ್ಯೋಗ ಹುಡುಕುತ್ತಿರುವ ಅಭ್ಯರ್ಥಿಗಳಿಗೆ ಸಿಹಿಸುದ್ದಿಯನ್ನು ನೀಡಿದೆ. 2021-22ನೇ ಸಾಲಿನಲ್ಲಿ ನೇಮಕಾತಿ ಆದೇಶ ನೀಡಲು ಆರ್ಥಿಕ ಇಲಾಖೆ ಸಹಮತಿ ಪಡೆಯಲು ಇಲಾಖೆಗಳಿಗೆ ತಿಳಿಸಲಾಗಿದೆ.
ಕೋವಿಡ್ ಪರಿಸ್ಥಿತಿಯ ಕಾರಣ ಆರ್ಥಿಕ ಸ್ಥಿತಿಯನ್ನು ಸುಸ್ಥಿತಿಗೆ ತರುವ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರ 6/7/2020ರಂದು ಆದೇಶ ವೊಂದನ್ನು ಹೊರಡಿಸಿತ್ತು.
2020-21ನೇ ಸಾಲಿನ ಆರ್ಥಿಕ ವರ್ಷದಲ್ಲಿ ಎಲ್ಲಾ ನೇರ ನೇಮಕಾತಿ ಹುದ್ದೆಗಳನ್ನು ಭರ್ತಿ ಮಾಡುವುದನ್ನು ತಡೆಹಿಡಿಯಲಾಗಿತ್ತು. ಇದರಿಂದಾಗಿ ವಿವಿಧ ಇಲಾಖೆಗಳ ನೇಮಕಾತಿ ಸ್ಥಗಿತವಾಗಿತ್ತು.

ಆಡಳಿತ ಇಲಾಖೆಗಳು ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳುವ ಸಂಬಂಧ ದಿನಾಂಕ 6/7/2020ರ ಸುತ್ತೋಲೆಯಂತೆ ವಿನಾಯಿತಿಯನ್ನು ಕೋರಿ ಪ್ರಸ್ತಾವನೆಗಳನ್ನು ಸಲ್ಲಿಸಿದ್ದವು.
ಅಂತಹ ಪ್ರಸ್ತಾವನೆಗಳ ಪೈಕಿ ಕೆಲವು ಪ್ರಸ್ತಾವನೆಗಳಿಗೆ ಮುಂದಿನ ಆರ್ಥಿಕ ವರ್ಷ ಅಂದರೆ 2021-22ನೇ ಸಾಲಿನಲ್ಲಿ ದಿನಾಂಕ 1/4/2021ರ ನಂತರ ನೇಮಕಾತಿ ಆದೇಶ ನೀಡಲು ಸಹಮತಿ ನೀಡಲಾಗಿದೆ ಎಂದು ತಿಳಿಸಲಾಗಿತ್ತು.
ಈ ರೀತಿ ತಿಳಿಸಲಾದ ಪ್ರಸ್ತಾವನೆಗಳನ್ನು ದಿನಾಂಕ 1/4/2021ರ ನಂತರ ಆರ್ಥಿಕ ಇಲಾಖೆಯ ಪುನರ್ ಪರಿಶೀಲನೆಗೆ ಸಲ್ಲಿಸುವಂತೆ ಆಡಳಿತ ಇಲಾಖೆಗಳಿಗೆ ತಿಳಿಸಲಾಗಿದೆ.
ಅಂದರೆ 2021-22ನೇ ಸಾಲಿನಲ್ಲಿ ಆರ್ಥಿಕ ಇಲಾಖೆಯ ಸಹಮತಿ ಪಡೆದೇ ನೇಮಕಾತಿ ಆದೇಶ ನೀಡಲು ಆಡಳಿತ ಇಲಾಖೆಗಳಿಗೆ ತಿಳಿಸಲಾಗಿದೆ ಎಂದು ಆದೇಶ ಹೊರಡಿಸಲಾಗಿದೆ.












Click it and Unblock the Notifications