ಆಗಸ್ಟ್ 27ರಂದು ಬೆಂಗಳೂರಿನಲ್ಲಿ ಉದ್ಯೋಗ ಮೇಳ

Posted By:
Subscribe to Oneindia Kannada

ಬೆಂಗಳೂರು, ಆಗಸ್ಟ್ 22 : ಬೆಂಗಳೂರಿನ ರೇವಾ ಯೂನಿರ್ವಸಿಟಿಯಲ್ಲಿ ಆ.27ರಂದು ಉದ್ಯೋಗ ಮೇಳ ಆಯೋಜಿಸಲಾಗಿದೆ. 50ಕ್ಕೂ ಅಧಿಕ ಕಂಪನಿಗಳು ಈ ಮೇಳದಲ್ಲಿ ಪಾಲ್ಗೊಳ್ಳಲಿವೆ.

ಬಾಗಲೂರು ಮುಖ್ಯರಸ್ತೆಯಲ್ಲಿರುವ ರೇವಾ ಯೂನಿರ್ವಸಿಟಿಯಲ್ಲಿ ಆಗಸ್ಟ್ 27ರ ಶನಿವಾರ ಬೆಳಗ್ಗೆ 10 ರಿಂದ ಸಂಜೆ 4 ಗಂಟೆಯ ತನಕ ಉದ್ಯೋಗ ಮೇಳ ನಡೆಯಲಿದೆ. ಬಾಗಲೂರು ಕ್ರಾಸ್ ಮತ್ತು ನಾಗವಾರ ರಿಂಗ್ ರಸ್ತೆಯಿಂದ ಯೂನಿರ್ವಸಿಟಿಗೆ ಬಸ್ ಸೌಲಭ್ಯವನ್ನು ಕಲ್ಪಿಸಲಾಗಿದೆ.

job

ಯಾವುದೇ ಪದವಿ, ಪಿಯುಸಿ, ಡಿಪ್ಲೊಮಾ, ಐಟಿಐ, ಎಸ್ಎಸ್‌ಎಲ್‌ಸಿ (ಪಾಸ್/ಫೇಲ್) ಆದ ಅಭ್ಯರ್ಥಿಗಳು ಉದ್ಯೋಗ ಮೇಳದಲ್ಲಿ ಪಾಲ್ಗೊಳ್ಳಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 080-23626678.

ಪಾಲ್ಗೊಳ್ಳುವ ಕಂಪನಿಗಳು : ವೋಲ್ವೋ, ಐಟಿಸಿ, ವಿಪ್ರೋ ಇಂಜಿನಿಯರಿಂಗ್, ಆದಿತ್ಯ ಬಿರ್ಲಾ, ಟಾಟಾ ಮೋಟಾರ್ಸ್, ಎಲ್‌ಜಿ ಎಲೆಕ್ಟ್ರಾನಿಕ್ಸ್, ಆಕ್ಸಿಸ್ ಬ್ಯಾಂಕ್, ಟಿವಿಎಸ್ ಸೇರಿದಂತೆ 50ಕ್ಕೂ ಹೆಚ್ಚು ಕಂಪನಿಗಳು ಉದ್ಯೋಗ ಮೇಳದಲ್ಲಿ ಪಾಲ್ಗೊಳ್ಳಲಿವೆ.

ಉದ್ಯೋಗವಕಾಶಗಳು

* ಕರ್ನಾಟಕ ರಾಜ್ಯದ ಪೊಲೀಸ್ ಇಲಾಖೆಯಲ್ಲಿ ವಿಶೇಷ ರಿಸರ್ವ ಪೊಲೀಸ್ ಕಾನ್ಸ್‌ಟೇಬಲ್ (ಪುರುಷ ಮತ್ತು ಮಹಿಳಾ) ಕೆಎಸ್ಆರ್‌ಪಿ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಆಗಸ್ಟ್ 31, 2016 ಕೊನೆಯ ದಿನಾಂಕವಾಗಿದೆ. [ವಿವರಗಳು ಇಲ್ಲಿವೆ]

* ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ ವಿವಿಧ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳುತ್ತಿದೆ. ವಿಶೇಷವಾಗಿ ಹೈದರಾಬಾದ್-ಕರ್ನಾಟಕ ಭಾಗದ ಅಭ್ಯರ್ಥಿಗಳಿಗೆ ಅವಕಾಶ ನೀಡುತ್ತಿದೆ. ಸೆಪ್ಟೆಂಬರ್ 9ರಂದು ಸಂದರ್ಶನ ನಡೆಯುತ್ತಿದೆ.[ವಿವರಗಳು]

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
On August 27, 2016 job fair organized at REVA University, Bengaluru. More than 50 major companies will participate in a job fair.
Please Wait while comments are loading...