ಮಂಡ್ಯದಲ್ಲಿ ಸೆಪ್ಟೆಂಬರ್ 7ರಂದು ಉದ್ಯೋಗ ಮೇಳ
ಮಂಡ್ಯ, ಸೆಪ್ಟೆಂಬರ್ 05 : ಮಂಡ್ಯ ಜಿಲ್ಲಾಡಳಿತ ಸೆಪ್ಟೆಂಬರ್ 7ರಂದು ಉದ್ಯೋಗ ಮೇಳವನ್ನು ಆಯೋಜನೆ ಮಾಡಿದೆ. ಯುವಕ/ಯುವತಿಯರು ಮೇಳದ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಪ್ರಕಟಣೆಯಲ್ಲಿ ಮನವಿ ಮಾಡಲಾಗಿದೆ.
ಜಿಲ್ಲಾಡಳಿತದಿಂದ ನಗರದ ಸರ್ಕಾರಿ ಮಹಾವಿದ್ಯಾಲಯ (ಸ್ವಾಯತ್ತ) ಇಲ್ಲಿ ಉದ್ಯೋಗ ಮೇಳವನ್ನು ಆಯೋಜನೆ ಮಾಡಿದೆ. ಹಲವಾರು ಕಂಪನಿಗಳು ಮೇಳದಲ್ಲಿ ಪಾಲ್ಗೊಳ್ಳಲಿದ್ದು, ವಿವಿಧ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲಿವೆ.
ಉದ್ಯೋಗ ಮೇಳದಲ್ಲಿ ಶಾಹಿ ಗ್ರೂಪ್ಸ್, ಅಕ್ವೇರಲ್ ಪ್ರೈ.ಲಿ, ಗಿರೀಶ್ ಎಕ್ಸ್‌ಪೋರ್ಟ್, ಚೋಳ ಪೀಪಲ್ ಅಂಡ್ ಮಾರ್ಕೆಟಿಂಗ್ ಸರ್ವಿಸಸ್, ಇಕ್ವಿಟಾಸ್ ಸ್ಮಾಲ್ ಪೈನಾನ್ಸ್, ಹೆಚ್.ಡಿ.ಬಿ. ಫೈನಾನ್ಸ್, ಲೈಟ್ನಿಂಗ್, ವಿಧಾತ್ರಿ ಮೋಟರ್ಸ್ ಅರಸ್, ಟಾಟಾ ಮೋಟರ್ಸ್, ಅಪೋಲೊಹೋಮ್ ಹೆಲ್ತ್‌ಕೇರ್ ಲಿಮಿಟೆಡ್, ಉಬರ್, ವುಡ್ ಲ್ಯಾಂಡ್, ಎಸ್. ಬಿ. ಐ ಲೈಫ್ ಇನ್‍ಶೂರೆನ್ಸ್, ಯುರೇಖಾಫೋಬ್ಸ್, ನವಭಾರತ್‍ಫರ್ಟಿಲೈಸರ್ಸ್ ಸೇರಿದಂತೆ 50ಕ್ಕೂ ಅಧಿಕ ಕಂಪನಿಗಳು ಪಾಲ್ಗೊಳ್ಳಲಿವೆ.

ಆಸಕ್ತ ಅಭ್ಯರ್ಥಿಗಳು ತಮ್ಮ ಎಲ್ಲಾ ಮೂಲ ಪ್ರಮಾಣ ಪತ್ರಗಳು, ಸ್ವ ವಿವರ, 2 ಭಾವ ಚಿತ್ರಗಳು ಹಾಗೂ ವಿದ್ಯಾರ್ಹತೆಯ ಪ್ರಮಾಣ ಪತ್ರಗಳ ಜೆರಾಕ್ಸ್ ಮತ್ತು ಆಧಾರ್ ಕಾರ್ಡ್ ಪ್ರತಿಯನ್ನು ತೆಗೆದುಕೊಂಡು ಸ್ವಂತ ಖರ್ಚಿನಲ್ಲಿ ಮೇಳದಲ್ಲಿ ಪಾಲ್ಗೊಳ್ಳಬಹುದಾಗಿದೆ.
ಉದ್ಯೋಗ ಮೇಳದಲ್ಲಿ ಪಾಲ್ಗೊಳ್ಳಲು ಕನಿಷ್ಠ ವಿದ್ಯಾರ್ಹತೆ ಎಸ್‍ಎಸ್‍ಎಲ್‍ಸಿ, ಪಿಯುಸಿ, ಐಟಿಐ, ಡಿಪ್ಲೋಮಾ, ಪದವಿ, ಬಿಎಸ್ಸಿ (ನರ್ಸಿಂಗ್), ಬಿಇ. ಚಾಲಕರ ಹುದ್ದೆಗಳಿಗೆ ನೇಮಕಾತಿ ಬಯಸುವವರು ಡ್ರೈವಿಂಗ್ ಲೈಸೆನ್ಸ್ ಹೊಂದಿರಬೇಕು.
ಹೆಚ್ಚಿನ ವಿವರಗಳಿಗೆ ದೂರವಾಣಿ ಸಂಖ್ಯೆ 08232-220126, 8762506803.












Click it and Unblock the Notifications