
ಮಡಿಕೇರಿಯಲ್ಲಿ ಅಕ್ಟೋಬರ್ 21ರಂದು ಉದ್ಯೋಗ ಮೇಳ
ಮಡಿಕೇರಿ, ಅಕ್ಟೋಬರ್ 18; ಕೊಡಗು ಜಿಲ್ಲಾ ಉದ್ಯೋಗ ವಿನಿಯಮ ಕಚೇರಿ ವತಿಯಿಂದ ಅಕ್ಟೋಬರ್ 21ರಂದು ಉದ್ಯೋಗ ಮೇಳ ಆಯೋಜನೆ ಮಾಡಲಾಗಿದೆ. ವಿದ್ಯಾರ್ಹತೆಯ ಮೂಲ ದಾಖಲಾತಿಗಳು, ರೆಸ್ಯೂಮ್‌ನೊಂದಿಗೆ ಮೇಳದಲ್ಲಿ ಪಾಲ್ಗೊಳ್ಳಬಹುದಾಗಿದೆ.
ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ ಬೆಳಗ್ಗೆ 10.30 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಉದ್ಯೋಗ ಮೇಳ ನಡೆಯಲಿದೆ. ಎಸ್‍ಎಸ್‍ಎಲ್‍ಸಿ, ಪಿಯುಸಿ, ಐಟಿಐ, ಡಿಪ್ಲೊಮಾ, ಯಾವುದೇ ಪದವಿ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳು ಭಾಗವಹಿಸಬಹುದಾಗಿದೆ.
ಗ್ರಾಮ ಲೆಕ್ಕಿಗರ ನೇಮಕಾತಿ; ಸ್ಪರ್ಧಾತ್ಮಕ ಪರೀಕ್ಷೆ ಹೇಗಿರಲಿದೆ?
ಉದ್ಯೋಗ ಮೇಳದಲ್ಲಿ ಮೆಡ್‍ಪ್ಲಸ್, ಮಂಗಳೂರು, ರಾಣಿ ಮದ್ರಾಸ್ ಪ್ರೈ.ಲಿ., ಮೈಸೂರು, ಜಸ್ಟ್ ಡಯಲ್, ಬೆಂಗಳೂರು, ಈಕ್ವಲೈಜರ್ ಆರ್‍ಎಂಸಿ ಪ್ರೈ.ಲಿ., ಮೈಸೂರು, ಸ್ನೈದರ್ ಎಲೆಕ್ಟ್ರಿಕ್ಟ್ ಇಂಡಿಯಾ ಪ್ರೈ.ಲಿ. ಮೈಸೂರು ಇವರು ಖಾಲಿ ಇರುವ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲಿದ್ದಾರೆ.
KPSC ನೇಮಕಾತಿ; ಜಲ ಸಂಪನ್ಮೂಲ ಇಲಾಖೆ 169 ಇಂಜಿನಿಯರ್ ಹುದ್ದೆಗಳು
ಉದ್ಯೋಗ ಮೇಳದಲ್ಲಿ ಭಾಗವಹಿಸುವ ಅಭ್ಯರ್ಥಿಗಳು ವಿದ್ಯಾರ್ಹತೆಯ ಮೂಲ ದಾಖಲಾತಿಗಳು ಹಾಗೂ ಸ್ವ-ವಿವರಗಳ ಪ್ರತಿಗಳೊಂದಿಗೆ ಆಗಮಿಸಬೇಕು ಎಂದು ಮನವಿ ಮಾಡಲಾಗಿದೆ.
ಬೆಸ್ಕಾಂ ಅಪ್ರೆಂಟಿಸ್ ನೇಮಕಾತಿ: 400 ಹುದ್ದೆಗಳಿಗೆ ಅರ್ಜಿ ಹಾಕಿ
ಆಸಕ್ತ, ಅರ್ಹ ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ 08272-225851ಗೆ ಕರೆ ಮಾಡಬಹುದಾಗಿದೆ.
ಅರ್ಜಿ ಆಹ್ವಾನ; ಗ್ರಾಮೀಣ ಮತ್ತು ಸಣ್ಣ ಉದ್ಯಮ ವಿಭಾಗ, ಜಿಲ್ಲಾ ಪಂಚಾಯತ್ ಧಾರವಾಡ 2022-23 ನೇ ಸಾಲಿಗೆ ಜಿಲ್ಲಾ ವಲಯ ಯೋಜನೆಯಡಿ ಗ್ರಾಮೀಣ ಭಾಗದ ವೃತ್ತಿಪರ ಕುಶಲಕರ್ಮಿಗಳಿಗೆ ಉಚಿತ ಸುಧಾರಿತ ಉಪಕರಣಗಳ ಪೂರೈಕೆಗಾಗಿ ಪರಿಶಿಷ್ಟ ವರ್ಗದ ಫಲಾನುಭವಿಗಳಿಗೆ ಹೊಲಿಗೆ ಯಂತ್ರ ಮತ್ತು ಬಡಿಗತನ ಹಾಗೂ ದೋಭಿ ವೃತ್ತಿ ಮಾಡುವ ಕುಶಲಕರ್ಮಿಗಳಿಗೆ ಉಪಕರಣ ಪೂರೈಕೆಗಾಗಿ ತಾಲೂಕಾವಾರು ಅರ್ಜಿಗಳನ್ನು ಕರೆದಿದೆ.
ಅರ್ಹ ಮತ್ತು ಆಸಕ್ತ ಕುಶಲಕರ್ಮಿಗಳು ತಮ್ಮ ಅರ್ಜಿಗಳನ್ನು ಉಪ ನಿರ್ದೇಶಕರು (ಗ್ರಾಕೈ), ಜಿಲ್ಲಾ ಪಂಚಾಯತ್ ಕೈಗಾರಿಕಾ ವಿಭಾಗ, ಡಿ.ಐ.ಸಿ. ಬಿಲ್ಡಿಂಗ್, ರಾಯಾಪೂರ, ಧಾರವಾಡ-580009 ಇವರಿಂದ ನವೆಂಬರ್ 5 ರೊಳಗಾಗಿ ಪಡೆದು, ಭರ್ತಿ ಮಾಡಿ ನವೆಂಬರ್ 15ರೊಳಗೆ ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗಾಗಿ ಹುಬ್ಬಳ್ಳಿ (ಗ್ರಾಮೀಣ), ನವಲಗುಂದ, ಅಣ್ಣಿಗೇರಿ ಹಾಗೂ ಕುಂದಗೋಳ ತಾಲೂಕುಗಳಿಗೆ ಸಂಬಂಧಿಸಿದ ಗ್ರಾಮೀಣ ಭಾಗದ ಅರ್ಹ ಕುಶಲಕರ್ಮಿಗಳು ಕೈಗಾರಿಕಾ ವಿಸ್ತರಣಾಧಿಕಾರಿ, ಹುಬ್ಬಳ್ಳಿ (ಮೊಬೈಲ್ ನಂ. 9902412428) ಹಾಗೂ ಅಳ್ನಾವರ, ಧಾರವಾಡ ಹಾಗೂ ಕಲಘಟಗಿ ತಾಲೂಕುಗಳಿಗೆ ಸಂಬಂಧಿಸಿದ ಗ್ರಾಮೀಣ ಭಾಗದ ಅರ್ಹ ಕುಶಲಕರ್ಮಿಗಳು ಕೈಗಾರಿಕಾ ವಿಸ್ತರಣಾಧಿಕಾರಿ, ಧಾರವಾಡ (ಮೊಬೈಲ್ ನಂ. 9886251096) ಇವರನ್ನು ಸಂಪರ್ಕಿಸಬಹುದು.