ಇಸ್ರೋ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರ ನೇಮಕಾತಿ 2025: ಭರ್ಜರಿ ನೇಮಕಾತಿ, ವೇತನ ರೂ. 1.77 ಲಕ್ಷ
ಬೆಂಗಳೂರು, ಅಕ್ಟೋಬರ್ 18: ಇಸ್ರೋ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರ (ISRO- SDSC Recruitment 2025) ಭರ್ಜರಿ ನೇಮಕಾತಿಗೆ ಮುಂದಾಗಿದೆ. ನಿರುದ್ಯೋಗಿಗಳಿಗೆ ಸಿಹಿ ಸುದ್ದಿ ನೀಡಲಾಗಿದೆ. 2025ನೇ ಸಾಲಿನಲ್ಲಿ ಖಾಲಿ ಹುದ್ದೆಗಳ ಭರ್ತಿಗೆ ಅರ್ಜಿ ಸಲ್ಲಿಸಲಾಗಿದೆ. ಯಾರೆಲ್ಲ ಬಾಹ್ಯಾಕಾಶ ಸಂಸ್ಥೆಯಲ್ಲಿ ಉದ್ಯೋಗ ಮಾಡುವ ಕನಸ ಇಟ್ಟುಕೊಂಡಿದ್ದಿರೋ ಅವರೆಲ್ಲ ಈ ಅವಕಾಶ ಸದುಪಯೊಗ ಮಾಡಿಕೊಳ್ಳಬಹುದಾಗಿದೆ.
ಇಸ್ರೋ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರ (ISRO- SDSC) ದಲ್ಲಿ ತಂತ್ರಜ್ಞ ಮತ್ತು ತಾಂತ್ರಿಕ ಸಹಾಯಕ ಹುದ್ದೆಗಳ ಭರ್ತಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅರ್ಹ ಆಸಕ್ತ ಅಭ್ಯರ್ಥಿಗಳು ಸರ್ಕಾರ ಉದ್ಯೋಗ ಪಡೆಯಲು ಇಚ್ಛಿಸುವವರು ಕೂಡಲೇ ಅರ್ಜಿ ಸಲ್ಲಿಸಬೇಕು.

ನೇಮಕಾತಿ ಇತರ ವಿವರ
ನೇಮಕಾತಿ ಸಂಸ್ಥೆ: ಇಸ್ರೋ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರ (ISRO- SDSC)
ಹುದ್ದೆಯ ಹೆಸರು: ತಂತ್ರಜ್ಞ, ತಾಂತ್ರಿಕ ಸಹಾಯಕ
ಒಟ್ಟು ಹುದ್ದೆಗಳು: 141
ಪೋಸ್ಟಿಂಗ್: ಭಾರತ
ಅರ್ಜಿ ಸಲ್ಲಿಕೆ ವಿಧಾನ: ಆನ್‌ಲೈನ್
ಅರ್ಜಿ ಸಲ್ಲಿಕೆ ಕೊನೆ ದಿನ: ನವೆಂಬರ್ 14
ಶುಲ್ಕ ಪಾವತಿಗೆ ಕಡೆಯ ದಿನ: ನವೆಂಬರ್ 14
ಶೈಕ್ಷಣಿಕ ಅರ್ಹತೆ
ಆಸಕ್ತ ಅಭ್ಯರ್ಥಿಗಳು 10ನೇ ತರಗತಿ, ಐಟಿಐ, ಡಿಪ್ಲೊಮಾ, ಪದವಿ, ಸ್ನಾತಕೋತ್ತರ ಪದವಿ, ಬಿಇ ಅಥವಾ ಬಿ.ಟೆಕ್ ಪೂರ್ಣಗೊಳಿಸಿರಬೇಕು. ಅಂತವರು ಅರ್ಜಿ ಸಲ್ಲಿಸಲು ಅರ್ಹರು ಎಂದು ಇಸ್ರೋ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರ (ISRO- SDSC) ನೇಮಕಾತಿ ಅಧಿಸೂಚನೆ ತಿಳಿಸಿದೆ.
ವಯಸ್ಸಿನ ಮಿತಿ
ಅಭ್ಯರ್ಥಿಗಳ ಕನಿಷ್ಠ 18 ವರ್ಷ ಹಾಗೂ ಗರಿಷ್ಠ 35 ವರ್ಷ ವಯಸ್ಸಿನವರು ಅರ್ಜಿ ಸಲ್ಲಿಸಬಹುದಾಗಿದೆ. ಇನ್ನೂ ವಯೋಮಿತಿ ಸಡಿಲಿಕೆ ನೋಡುವುದಾದರೆ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ 5 ವರ್ಷಗಳು ವಿನಾಯಿತಿ. ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ 3 ವರ್ಷ ಸಡಿಲಿಕೆ ಸಿಗಲಿದೆ.

ಅರ್ಜಿ ಶುಲ್ಕ ವಿವರ
ವಿಜ್ಞಾನಿ/ಇಂಜಿನಿಯರ್, ತಾಂತ್ರಿಕ ಸಹಾಯಕ, ವೈಜ್ಞಾನಿಕ ಸಹಾಯಕ, ಗ್ರಂಥಾಲಯ ಸಹಾಯಕ, ನರ್ಸ್ ಹುದ್ದೆಗಳಿಗೆ ಎಲ್ಲಾ ಅಭ್ಯರ್ಥಿಗಳಿಗೆ: 750 ರೂಪಾಯಿ, ರೇಡಿಯೋಗ್ರಾಫರ್-ಎ, ಟೆಕ್ನಿಷಿಯನ್-ಬಿ, ಡ್ರಾಫ್ಟ್ಸ್‌ಮನ್-ಬಿ, ಕುಕ್, ಫೈರ್‌ಮೆನ್-ಎ, ಲೈಟ್ ವೆಹಿಕಲ್ ಡ್ರೈವರ್-ಎ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಎಲ್ಲ ಅಭ್ಯರ್ಥಿಗಳಿಗೆ 500 ರೂಪಾಯಿ ಇದೆ. ಈ ಶುಲ್ಕವನ್ನು ಆನ್‌ಲೈನ್ ಮೂಲಕ ಪಾವತಿಸಬೇಕು
ಆಯ್ಕೆ ಹೇಗೆ? ಮಾಸಿಕ ವೇತನ 1,77,500 ರೂ.
ಅರ್ಜಿ ಸಲ್ಲಿಸಿದ ಅರ್ಹ ಅಭ್ಯರ್ಥಿಗಳಿಗೆ ಮೊದಲು ಲಿಖಿತ ಪರೀಕ್ಷೆ ನಡೆಸಲಾಗುತ್ತದೆ. ಬಳಿಕ ಕೌಶಲ್ಯ ಪರೀಕ್ಷೆ, ನಂತರ ಸಂದರ್ಶನ ಮೂಲಕ ಆಯ್ಕೆ ಮಾಡಲಾಗುತ್ತದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ಕನಿಷ್ಠ 19,900 ರೂಪಾಯಿಯಿಂದ 1,77,500 ರೂ. ವರೆಗೆ ವೇತನ ನೀಡಲಾಗುತ್ತದೆ.
ಅರ್ಜಿ ಹೇಗೆ ಸಲ್ಲಿಸಬೇಕು?
ಅಭ್ಯರ್ಥಿಗಳು ಮೊದಲು ಅಧಿಕೃತ ವೆಬ್‌ಸೈಟ್ http://shar.gov.in/ ಗೆ ಭೇಟಿ ನೀಡಬೇಕು. ಅಲ್ಲಿ ISRO SDSC SHAR ವಿಭಾಗ ಆಯ್ಕೆ ಮಾಡಿ. ತಂತ್ರಜ್ಞ ಮತ್ತು ತಾಂತ್ರಿಕ ಸಹಾಯಕ ಹುದ್ದೆಯ ಅಧಿಸೂಚನೆ ಪರಿಶೀಲಿಸಬೇಕು. ಆನ್‌ಲೈನ್ ಅರ್ಜಿ ಲಿಂಕ್ ತೆರೆದು, ಅಗತ್ಯ ವಿವರ ಹಾಕಿ, ಬಳಿಕ ಸಬ್ಮಿಟ್ ಕೊಟ್ಟು, ಅದೇ ದಿನ ಅರ್ಜಿ ಶುಲ್ಕ ಪಾವತಿಸಬೇಕು. ಅರ್ಜಿ ಸಲ್ಲಿಕೆಯ ಪ್ರಿಂಟ್ ತೆಗೆದಿಟ್ಟುಕೊಳ್ಳಿ.












Click it and Unblock the Notifications