ಬೆಂಗಳೂರಿನ ಇಸ್ರೋ ಘಟಕದಲ್ಲಿ ಅಡುಗೆ ಬಲ್ಲವರಿಗೆ ಉದ್ಯೋಗ

Posted By:
Subscribe to Oneindia Kannada

ಬೆಂಗಳೂರು, ಡಿಸೆಂಬರ್ 20: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ)ಯ ಉಪಗ್ರಹ ಕೇಂದ್ರ(ISAC)ದಲ್ಲಿ ಅಡುಗೆ ಮಾಡುವವರಿಗೆ, ಅಡುಗೆ ಸಹಾಯಕರಿಗೆ ಉದ್ಯೋಗವಕಾಶಗಳಿವೆ. ಆಸಕ್ತರು ಅರ್ಜಿ ಸಲ್ಲಿಸಲು ಜನವರಿ 06, 2017ಕೊನೆ ದಿನಾಂಕವಾಗಿದೆ.

ಹುದ್ದೆಯ ಹೆಸರು: ಕೆಟರಿಂಗ್ ಸಹಾಯಕ -ಎ
ಒಟ್ಟು ಹುದ್ದೆಗಳು: 8
ವಯೋಮಿತಿ: 18 ರಿಂದ 25 ವರ್ಷಗಳು (06/01/2017ರಂತೆ)
ಸಂಬಳ ನಿರೀಕ್ಷೆ: 18,000/-

ಹುದ್ದೆಯ ಹೆಸರು: ಅಡುಗೆಯವರು
ಒಟ್ಟು ಹುದ್ದೆಗಳು: 8
ವಯೋಮಿತಿ: 18 ರಿಂದ 35 ವರ್ಷಗಳು (06/01/2017ರಂತೆ)
ಸಂಬಳ ನಿರೀಕ್ಷೆ: 19,900/-

ISRO Recruitment 2017 Apply for Catering Attendant & Cook

ವಿದ್ಯಾರ್ಹತೆ:
ಕೆಟರಿಂಗ್ ಸಹಾಯಕ -ಎ: ಎಸ್ಎಸ್ ಎಲ್ ಸಿ ಉತ್ತೀರ್ಣ
ಅಡುಗೆಯವರು :ಎಸ್ಎಸ್ ಎಲ್ ಸಿ ಉತ್ತೀರ್ಣ ಹಾಗೂ 5 ವರ್ಷಗಳ ಕಾಲ ಹೋಟೆಲ್. ಕ್ಯಾಂಟೀನ್ ನಲ್ಲಿ ಅನುಭವ ಹೊಂದಿರಬೇಕು. ಸರ್ಕಾರದಿಂದ ಮಾನ್ಯತೆ ಪಡೆದಿರುವ ಸಂಸ್ಥೆಯಿಂದ ಪ್ರಮಾಣ ಪತ್ರ ಪಡೆದಿರಬೇಕು.

ಆಯ್ಕೆ ಪ್ರಕ್ರಿಯೆ: ಲಿಖಿತ ಪರೀಕ್ಷೆ ಹಾಗೂ ಕೌಶಲ್ಯ ಪರೀಕ್ಷೆ

ಅರ್ಜಿ ಸಲ್ಲಿಸುವುದು ಹೇಗೆ?: ಇಸ್ರೋ ವೆಬ್ ಸೈಟ್ ನಲ್ಲಿ ಆನ್ ಲೈನ್ ನೋಂದಣಿ ಮಾಡಿಕೊಂಡು ಅರ್ಜಿ ಸಲ್ಲಿಸಬಹುದು.

ಅರ್ಜಿ ಸಲ್ಲಿಸಲು ಕೊನೆ ದಿನಾಂಕ : 06/01/2017.

ಅರ್ಜಿ ಸಲ್ಲಿಸುವ ವಿಧಾನ, ಜಾಹೀರಾತಿನ ವಿವರಣೆ ಪಡೆಯಲು ಇಲ್ಲಿ ಕ್ಲಿಕ್ ಮಾಡಿ (ಒನ್ಇಂಡಿಯಾ ಸುದ್ದಿ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
ISRO Satellite Centre (ISAC), Bengaluru invites online applications from eligible candidates for recruitment of Catering Attendant-A and Cook. The Online registration start from 17th December 2016 and close on 6th January 2017.
Please Wait while comments are loading...