ಇಂಡಿಯನ್ ಆಯಿಲ್ ಕಾರ್ಪೊರೇಷನ್ ಸಂಸ್ಥೆಯಲ್ಲಿ ಉದ್ಯೋಗ ಅವಕಾಶ

ಬೆಂಗಳೂರು, ಮೇ 8: ಇಂಡಿಯನ್ ಆಯಿಲ್ ಕಾರ್ಪೊರೇಷನ್ ಸಂಸ್ಥೆ 2022ನೇ ಸಾಲಿನ ನೇಮಕಾತಿ ಮುಂದುವರೆಸಿದೆ. ಈ ಕುರಿತಂತೆ ತನ್ನ ಅಧಿಕೃತ ವೆಬ್ ತಾಣದಲ್ಲಿ ಅಧಿಸೂಚನೆ ಪ್ರಕಟಣೆ ಹೊರಡಿಸಿದೆ. 100 ಕ್ಕೂ ಅಧಿಕ ನಾನ್ ಎಕ್ಸಿಕ್ಯೂಟಿವ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಈ ಹುದ್ದೆಗಳಿಗೆ ಅರ್ಜಿ ಹಾಕಬಯಸುವ ಅರ್ಹ, ಆಸಕ್ತ ಅಭ್ಯರ್ಥಿಗಳು ಫೆಬ್ರವರಿ 18, 2022ರೊಳಗೆ ಸೂಕ್ತ ಅರ್ಜಿ ನಮೂನೆಯೊಂದಿಗೆ ಸಲ್ಲಿಸಬಹುದು.

ಸಂಸ್ಥೆ ಹೆಸರು: ಇಂಡಿಯನ್ ಆಯಿಲ್ ಕಾರ್ಪೊರೇಷನ್
ಒಟ್ಟು ಹುದ್ದೆ: 100+
ಹುದ್ದೆ ಹೆಸರು: Non- Executive
ಉದ್ಯೋಗ ಸ್ಥಳ: ಭಾರತದೆಲ್ಲೆಡೆ
ಅರ್ಜಿ ಸಲ್ಲಿಸಲು ಕೊನೆ ದಿನಾಂಕ: ಮೇ 21, 2022

ಹುದ್ದೆ ವಿವರ:
ಜ್ಯೂನಿಯರ್ ತಾಂತ್ರಿಕ ಸಹಾಯಕ -IV(ಮೆಕ್ಯಾನಿಕಲ್): 01
ಜ್ಯೂನಿಯರ್ ತಾಂತ್ರಿಕ ಸಹಾಯಕ -IV( ಇನ್ಸ್ಟ್ರೂಮೆಂಟೆಷನ್): 01
ಜ್ಯೂನಿಯರ್ ಕ್ವಾಲಿಟಿ ಕಂಟ್ರೋಲ್ ಅನಾಲಿಸ್ಟ್: 04
ಸಂಬಳ ನಿರೀಕ್ಷೆ: 25000 - 105000/- ರು

ವಿದ್ಯಾರ್ಹತೆ:

ಆಯಿಲ್ ಇಂಡಿಯಾ ನೇಮಕಾತಿ ನೋಟಿಫಿಕೇಷನ್‌ನಂತೆ ನಿಯಮಾನುಸಾರ ಮೀಸಲಾತಿ ಅಭ್ಯರ್ಥಿಗಳಿಗೆ ವಿನಾಯತಿ ಸಿಗಲಿದೆ.

ಜ್ಯೂನಿಯರ್ ತಾಂತ್ರಿಕ ಸಹಾಯಕ -IV(ಮೆಕ್ಯಾನಿಕಲ್): ಸರ್ಕಾರದಿಂದ ಮಾನ್ಯತೆ ಪಡೆದ ವಿದ್ಯಾಸಂಸ್ಥೆಯಿಂದ 10 ಹಾಗೂ 12ನೇ ತರಗತಿ ಪಾಸ್. ಡಿಪ್ಲೋಮಾ ಶೇ 45ರಷ್ಟು ಅಂಕ ಗಳಿಕೆ ಹಾಗೂ ಸಂಬಂಧಪಟ್ಟ ಟ್ರೇಡ್ ಅನುಭವ.

ಜ್ಯೂನಿಯರ್ ತಾಂತ್ರಿಕ ಸಹಾಯಕ -IV( ಇನ್ಸ್ಟ್ರೂಮೆಂಟೆಷನ್): ಸರ್ಕಾರದಿಂದ ಮಾನ್ಯತೆ ಪಡೆದ ವಿದ್ಯಾಸಂಸ್ಥೆಯಿಂದ 10 ಹಾಗೂ 12ನೇ ತರಗತಿ ಪಾಸ್. Instrumentation/ Instrumentation and Electronics ಡಿಪ್ಲೋಮಾ(3 ವರ್ಷ) ಶೇ 45ರಷ್ಟು ಅಂಕ ಗಳಿಕೆ ಹಾಗೂ ಸಂಬಂಧಪಟ್ಟ ಟ್ರೇಡ್ ಅನುಭವ.

ಜ್ಯೂನಿಯರ್ ಕ್ವಾಲಿಟಿ ಕಂಟ್ರೋಲ್ ಅನಾಲಿಸ್ಟ್: ಬಿಎಸ್ ಸಿ ಭೌತಶಾಸ್ತ್ರ, ರಸಾಯನ ಶಾಸ್ತ್ರ/ ಕೈಗಾರಿಕಾ ಕೆಮಿಸ್ಟ್ರಿ ಹಾಗೂ ಗಣಿತ ಶೇ 50ರಷ್ಟು ಅಂಕ ಗಳಿಕೆ, ಒಂದು ವರ್ಷದ ಅನುಭವ.

IOCL Recruitment 2022: Apply for Non-Executive posts

ವಯೋಮಿತಿ: ವಿವಿಧ ಹುದ್ದೆಗಳಿಗೆ ಆಯಿಲ್ ಇಂಡಿಯಾ ನೇಮಕಾತಿ ನೋಟಿಫಿಕೇಷನ್‌ನಲ್ಲಿ ನೀಡಿರುವಂತೆ ಕನಿಷ್ಠ 18 ರಿಂದ ಗರಿಷ್ಠ 26 ವರ್ಷ. ಅರ್ಹ ಅಭ್ಯರ್ಥಿಗಳಿಗೆ ನಿಯಮಾನುಸಾರ ವಯೋಮಿತಿಯಲ್ಲಿ ವಿನಾಯಿತಿ ಸಿಗಲಿದೆ. ಎಸ್ ಸಿ / ಎಸ್ಟಿ ಅಭ್ಯರ್ಥಿಗಳಿಗೆ 5 ವರ್ಷ ಹಾಗೂ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ 3 ವರ್ಷಗಳ ವಿನಾಯಿತಿ ಸಿಗಲಿದೆ.

ಶುಲ್ಕಪಾವತಿ ವಿಧಾನ: ಆನ್ ಲೈನ್ ಮೂಲಕ ಎಸ್ ಬಿ ಐ ಇ-ಕಲೆಕ್ಟ್
ಸಾಮಾನ್ಯ/ ಆರ್ಥಿಕವಾಗಿ ಹಿಂದುಳಿದ ಅಭ್ಯರ್ಥಿ: 150 ರು
ಎಸ್ ಸಿ/ ಎಸ್ಟಿ/ ದಿವ್ಯಾಂಗ ಅಭ್ಯರ್ಥಿ: ಯಾವುದೇ ಶುಲ್ಕವಿಲ್ಲ.

ಪ್ರಮುಖ ದಿನಾಂಕ:
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಆರಂಭ ದಿನಾಂಕ: 21/04/2022
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆ ದಿನಾಂಕ: 12/05/2022
ನೇರವಾಗಿ ಅರ್ಜಿ ಅರ್ಜಿ ಸಲ್ಲಿಸಲು ಕೊನೆ ದಿನಾಂಕ: 21/05/2022
ಪರೀಕ್ಷೆ ದಿನಾಂಕ: 22/05/2022

ಅರ್ಜಿ ಸಲ್ಲಿಸುವ ವಿಧಾನ:
* ಇಂಡಿಯನ್ ಆಯಿಲ್ ಅಧಿಸೂಚನೆ ಓದಿಕೊಂಡು, ಅರ್ಹತೆಯುಳ್ಳ ಅಭ್ಯರ್ಥಿಗಳು ಅಧಿಕೃತ ವೆಬ್ ತಾಣದಲ್ಲಿ ನೇಮಕಾತಿ ಲಿಂಕ್ ಕ್ಲಿಕ್ ಮಾಡಿ. (https://plapps.indianoil.in/)
* ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸುವ ಮುನ್ನ ಅಪ್ರೆಂಟಿಸ್ ಶಿಪ್ ಇಂಡಿಯಾ ವೆನ್ ತಾಣದಲ್ಲಿ ಲಾಗಿನ್ ಆಗಿ.
* ಅರ್ಜಿ ಸಲ್ಲಿಸುವ ಮುನ್ನ ಇಮೇಲ್ ಐಡಿ ಹಾಗೂ ಮೊಬೈಲ್ ನಂಬರ್ ನೀಡಿ.
* ಅಭ್ಯರ್ಥಿಗಳು ತಮ್ಮ ಹುದ್ದೆ ಹಾಗೂ ಸಂಬಂಧಪಟ್ಟ ರಾಜ್ಯ ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ.
* ವಯೋಮಿತಿ, ವಿದ್ಯಾರ್ಹತೆ, ಅನುಭವ, ವಯೋಮಿತಿ ವಿನಾಯಿತಿ ಮುಂತಾದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಒದಗಿಸತಕ್ಕದ್ದು.
* ತಾಂತ್ರಿಕ/ ತಾಂತ್ರಿಕೇತರ ಹುದ್ದೆ ಅರ್ಜಿ ನಮೂನೆಯನ್ನು ಕ್ಲಿಕ್ ಮಾಡಿ ಅರ್ಜಿಯನ್ನು ಭರ್ತಿ ಮಾಡಿ ಅಗತ್ಯ ಪ್ರಮಾಣ ಪತ್ರಗಳನ್ನು ಲಗತ್ತಿಸಿ.
* ಅರ್ಜಿ ಶುಲ್ಕವನ್ನು ಆನ್ ಲೈನ್ ಮೂಲಕ ಪಾವತಿಸಬಹುದು. ಆನ್ ಲೈನ್ ಮೂಲಕವೇ ಪೇಮೆಂಟ್ ಮಾಡಬಹುದು. ಡೆಬಿಟ್ ಕಾರ್ಡ್/ ರುಪೇ ಕಾರ್ಡ್/ ವೀಸಾ ಕಾರ್ಡ್/ ಮಾಸ್ಟರ್ ಕಾರ್ಡ್/ ಮಾಸ್ಟ್ರೋ ಅಲ್ಲದೆ ಕ್ರೆಡಿಟ್ ಕಾರ್ಡ್, ಇಂಟರ್ನೆಟ್ ಬ್ಯಾಂಕಿಂಗ್, ಐಎಂಪಿಎಸ್, ಕ್ಯಾಶ್ ಕಾರ್ಡ್/ ಮೊಬೈಲ್ ವ್ಯಾಲೆಟ್/ಯುಪಿಐ ಮೂಲಕ ಹಣ ಪಾವತಿಸಬಹುದು.
* ಅರ್ಜಿ ಸಲ್ಲಿಸಿದ್ದಕ್ಕೆ ಹಾಗೂ ಶುಲ್ಕ ಪಾವತಿಗೆ ಇ ರಸೀತಿ ಪಡೆದುಕೊಳ್ಳಿ.

ಹೆಚ್ಚಿನ ಮಾಹಿತಿ ಪಡೆಯಲು ಇಂಡಿಯನ್ ಆಯಿಲ್ ಸಂಸ್ಥೆ ಹೊರಡಿಸಿರುವ ಅಧಿಕೃತ ನೋಟಿಫಿಕೇಷನ್ ಓದಿ
ಅರ್ಜಿ ಸಲ್ಲಿಸುವ ವಿಳಾಸ:
Sr. Employee Relations Manager,
HR Department,
Bongaigaon Refinery,
Indian Oil Corporation Limited,
PO Dhaligaon, Dist. Chirang - 783385

ಅರ್ಜಿ ಸಲ್ಲಿಸುವ ವಿಧಾನ ಹಾಗೂ ಇನ್ನಿತರ ಮಾಹಿತಿಗಾಗಿ ಆಯಿಲ್ ಇಂಡಿಯಾ ಅಧಿಕೃತ ವೆಬ್ ತಾಣದ ಕ್ಲಿಕ್ ಮಾಡಿ (www.iocl.com)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+