Indian Railway Recruitment 2023: 7000ಕ್ಕೂ ಅಧಿಕ ಖಾಲಿ ಹುದ್ದೆಗಳ ನೇಮಕಾತಿ, ಕೂಡಲೇ ಅರ್ಜಿ ಹಾಕಿ, ವಿವರ ತಿಳಿಯಿರಿ

ಬೆಂಗಳೂರು, ಜುಲೈ 12: ಭಾರತೀಯ ರೈಲ್ವೆ ವ್ಯಾಪ್ತಿಯಲ್ಲಿ ಖಾಲಿ ಇರುವ ಸಾವಿರಾರು ಟ್ರಾವೆಲಿಂಗ್ ಟಿಕೆಟ್ ಎಕ್ಸಾಮಿನರ್ (TTE) ಉದ್ಯೋಗಗಳಿಗೆ ಅರ್ಹರು ಕೂಡಲೇ ಅರ್ಜಿ ಸಲ್ಲಿಸಬೇಕು. ಕೇಂದ್ರ ಸರ್ಕಾರಿ ವ್ಯಾಪ್ತಿಯ ಹುದ್ದೆಗಳಿಗೆ ಸೇರಬಯಸುವವರಿಗೆ ಇದೊಂದು ಸುವರ್ಣ ಅವಕಾಶವಾಗಿದೆ.

ಭಾರತೀಯ ರೈಲ್ವೇ ಇಲಾಖೆಯು ತನ್ನಲ್ಲಿ ಖಾಲಿ ಇರುವ ಸುಮಾರು 7000ಕ್ಕೂ ಅಧಿಕ ಟ್ರಾವೆಲಿಂಗ್ ಟಿಕೆಟ್ ಎಕ್ಸಾಮಿನರ್ (ಟಿಟಿಇ) ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ಪ್ರಾರಂಭಿಸಿದೆ. ಈ ಸಂಬಂಧ ಅರ್ಹ ಅಭ್ಯರ್ಥಿಗಳಿಂದ RRB- ರೈಲ್ವೆ ನೇಮಕಾತಿ ಮಂಡಳಿ ಅರ್ಜಿ ಆಹ್ವಾನಿಸಿದೆ. ದೇಶದ ಯಾವ ಭಾಗದಲ್ಲಾದರೂ ನಿಮಗೆ ಪೋಸ್ಟಿಂಗ್ ಸಿಗಲಿದೆ.

Indian Railway Recruitment 2023

ರೈಲ್ವೆ ಟಿಟಿಇ 2023 ಅಧಿಸೂಚನೆಯನ್ನು ಪೂರ್ಣವಾಗಿ ಓದಿಕೊಳ್ಳಿ. ಅರ್ಹತೆಯ ಆಧಾರದಲ್ಲಿ ನೀವು ಯಾವುದೇ RRB ಅಧಿಕೃತ ಪೋರ್ಟಲ್ ವೆಬ್‌ಸೈಟ್‌ನಿಂದ ಆನ್‌ಲೈನ್ ಮೂಲಕ ನೋಂದಣಿ ನೋಂದಣಿ ಮಾಡಿಕೊಳ್ಳಬೇಕು. ಇಲ್ಲವೇ ರೈಲ್ವೇ ಮುಖ್ಯ ವೆಬ್‌ಸೈಟ್ www.rrb.gov.in ಗೆ ಭೇಟಿ ನೀಡಿ ಆನ್‌ಲೈನ್‌ ಮೂಲಕವೇ ಅರ್ಜಿ ಸಲ್ಲಿಸಬಹುದು.

ರೈಲ್ವೆ ನೇಮಕಾತಿ ಮಂಡಳಿಯು ಗ್ರೂಪ್ C (TTE) ಹುದ್ದೆಗಳ ಅಡಿ ನೇಮಕಾತಿ ಮಾಡಿಕೊಳ್ಳಲಿದೆ. ರೈಲ್ವೆ ಇಲಾಖೆಯಲ್ಲಿನ ಇಷ್ಟು ಪ್ರಮಾಣದ ಖಾಲಿ ಹುದ್ದೆಗಳ ಭರ್ತಿ ಮಾಡಲು ರೈಲ್ವೇ ನೇಮಕಾತಿ ಮಂಡಳಿಯು ಲಿಖಿತ ಪರೀಕ್ಷೆಗಳು ಅಥವಾ ಸಂದರ್ಶನ ನಡೆಯಸುವ ಜವಾಬ್ದಾರಿ ಹೊಂದಿದೆ.

ಆನ್‌ಲೈನ್ ಮೂಲಕ ಅರ್ಜಿ ನಮೂನೆಯನ್ನು ಶೀಘ್ರದಲ್ಲೇ ಪಡೆದುಕೊಳ್ಳಬೇಕು. ಈ ಲಭ್ಯತೆಯು ಮುಂದಿನ 30 ದಿನಗಳವರೆಗೆ ಸಿಗಲಿದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ.

ಹುದ್ದೆಗಳ ಪೂರ್ಣ ವಿವರ

ಹುದ್ದೆ ಹೆಸರು - ಟ್ರಾವೆಲಿಂಗ್ ಟಿಕೆಟ್ ಎಕ್ಸಾಮಿನರ್ (TTE)

ಒಟ್ಟು ಹುದ್ದೆ ಸಂಖ್ಯೆ -7784

ಶೈಕ್ಷಣಿಕ ಅರ್ಹತೆ 12 ನೇ ತೇರ್ಗಡೆ

ಮಾಸಿಕ ವೇತನ - 5200-20,200 ರೂಪಾಯಿ.

ಅರ್ಜಿ ಸಲ್ಲಿಕೆ ಕೊನೆ ದಿನ - 30 ದಿನ

Indian Railway Recruitment 2023

ಶೈಕ್ಷಣಿಕ ಅರ್ಹತೆ

ಗ್ರೂಪ್ C ಪೋಸ್ಟ್‌ಗಳ ಖಾಲಿ ಹುದ್ದೆಗೆ ಈ ಖಾಲಿ ಹುದ್ದೆಗೆ ಅಭ್ಯರ್ಥಿಗಳು 10 ನೇ ತರಗತಿ (SSLC/ SSC/ ಮೆಟ್ರಿಕ್ಯುಲೇಷನ್) ಉತ್ತೀರ್ಣರಾಗಿರಬೇಕು. ಅಲ್ಲದೇ ORP ಹುದ್ದೆಗೆ 12ನೇ ತರಗತಿ ಪಾಸಾಗಿದೆ ಅಥವಾ ಡಿಪ್ಲೊಮಾ ಮುಗಿಸಿರಬೇಕು.

ವಯೋಮಿತಿ

ಅರ್ಜಿ ಸಲ್ಲಿಸಲು ಇಚ್ಛಿಸುವ ಆಸಕ್ತ ಅಭ್ಯರ್ಥಿಗಳ ಕನಿಷ್ಠ ವಯಸ್ಸಿನ ಮಿತಿ ಅರ್ಹತೆ 2023ರ ಜನವರಿ 1ಕ್ಕೆ 18 ವರ್ಷದಿಂದ 30 ವರ್ಷಗಳ ನಡುವೆ ಇರಬೇಕು ಎಂದು ನಿರ್ಬಂಧ ಇದೆ. ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಮಾಸಿಕ ವೇತನ ರೂ. 5200ನಿಂದ 20,200 ರೂಪಾಯಿ ನಿಗದಿ ಮಾಡಲಾಗಿದೆ.

ಆಯ್ಕೆ ಪ್ರಕ್ರಿಯೆ

ಮೊದಲು ಅಭ್ಯರ್ಥಿಗಳಿಗೆ ಕಂಪ್ಯೂಟರ್ ಆಧಾರಿತ ಲಿಖಿತ ಪರೀಕ್ಷೆ (CBE) ನಡೆಯಲಿದೆ, ತದನಂತರ ದಾಖಲೆ ಪರಿಶೀಲನೆ ನಡೆಯಲಿದ್ದು, ವೈದ್ಯಕೀಯ ಫಿಟ್ನೆಸ್ ಪರೀಕ್ಷೆ ಸಹ ಮಾಡಿಸಬೇಕು ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ಅರ್ಜಿಯನ್ನು ಮುಂದಿನ 30 ದಿನಗಳ ಒಳಗಾಗಿ ಸಲ್ಲಿಸಬೇಕು. ಅರ್ಜಿ ಸಲ್ಲಿಕೆಯ ದಿನಾಂಕ ವಿಸ್ತರಣೆ ಮಾಡಲಾಗುವುದು ಎಂದಿರುವ ರೈಲ್ವೆ ಇಲಾಖೆ ನಿರ್ದಿಷ್ಟ ದಿನಾಂಕವನ್ನು ತಿಳಿಸಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+