ಅಂಚೆ ಇಲಾಖೆ ನೇಮಕಾತಿ: ಅರ್ಜಿ ಸಲ್ಲಿಸಲು ಅವಧಿ ವಿಸ್ತರಣೆ

Posted By:
Subscribe to Oneindia Kannada

ಬೆಂಗಳೂರು, ಮೇ 09 : ಅಂಚೆ ಇಲಾಖೆ (ಕರ್ನಾಟಕ ವೃತ್ತ) 1048 ಗ್ರಾಮೀಣ ಡಾಕ್ ಸೇವಕರ ಹುದ್ದೆಗಳಿಗೆ ಆಹ್ವಾನಿಸಿದ್ದ ಅರ್ಜಿ ಸಲ್ಲಿಸುವ ಅವಧಿಯನ್ನು ಮೇ 23 ರವರೆಗೆ ವಿಸ್ತರಿಸಿದೆ. ಈ ಹಿಂದೆ ಹೊರಡಿಸಿದ್ದ ಅಧಿಸೂಚನೆಯ ಪ್ರಕಾರ ಮೇ 08 , ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿತ್ತು.

ಆದರೆ, ನೂತನ ಅಧಿಸೂಚನೆಯಂತೆ ಹದಿನೈದು ದಿನಗಳ ಕಾಲಾವಕಾಶವನ್ನು ಹೆಚ್ಚಿಗೆ ನೀಡಲಾಗಿದೆ. ದೇಶಾದ್ಯಂತ ಸಾವಿರಾರು ಹುದ್ದೆಗಳನ್ನು ನೇಮಕ ಮಾಡಿಕೊಳ್ಳುತ್ತಿದ್ದು ಕರ್ನಾಟಕದಲ್ಲಿ 1048 ಹುದ್ದೆಗಳಿಗೆ ಎಸ್ ಎಸ್ ಎಲ್ ಸಿ ಪಾಸ್ ಆದವರು ಅರ್ಜಿ ಸಲ್ಲಿಸಬಹುದಾಗಿದೆ.

Indian post office recruitment notification 2017 1048 post of Gramin Dak Sevak Karnataka

ವಯೋಮಿತಿ: 18 ರಿಂದ 40. ಎಸ್ ಸಿ ಮತ್ತು ಎಸ್ ಟಿ ಅಭ್ಯರ್ಥಿಗಳಿಗೆ 5, ಓಬಿಸಿಗೆ 3, ಅಂಗವಿಕಲ ಅಭ್ಯರ್ಥಿಗಳಿಗೆ 10 ವರ್ಷ ವಯೋಮಿತಿ ಸಡಿಲಿಕೆ ನೀಡಲಾಗಿದೆ.

ವಿದ್ಯಾರ್ಹತೆ: ಗ್ರಾಮೀಣ ಡಾಕ್ ಸೇವಕ ಹುದ್ದೆಗಳಿಗೆ ಅರ್ಜಿ ಅಲ್ಲಿಸುವ ಅಭ್ಯರ್ಥಿಗಳು ಎಸ್ ಎಸ್ ಎಲ್ ಸಿ ಬೋರ್ಡ್ ನಡೆಸುವ ಪರೀಕ್ಷೆಯಲ್ಲಿ ಉತ್ತೀರ್ಣರಾಗಿಬೇಕು. ಕಂಪ್ಯೂಟರ್ ಜ್ಞಾನ ಹೊಂದಿರುವವರು ಅಭ್ಯರ್ಥಿಗಳು ಕಂಪ್ಯೂಟರ್ ಸರ್ಟಿಫಿಕೆಟ್ ಲಗತ್ತಿಸಬೇಕು.

ಆಯ್ಕೆ ವಿಧಾನ: ಎಸ್ ಎಸ್ ಎಲ್ ಸಿ ಅಂಕಗಳ ಆಧಾರದ ಮೇಲೆ ಗ್ರಾಮೀಣ ಡಾಕ್ ಸೇವಕ ಹುದ್ದೆಗಳಿಗೆ ಆಯ್ಕೆ ಮಾಡಲಾಗುತ್ತದೆ.

ಅರ್ಜಿ ಶುಲ್ಕ: ಸಾಮಾನ್ಯ ಅಭ್ಯರ್ಥಿಗಳಿಗೆ 100 ರು ಅರ್ಜಿ ಶುಲ್ಕವನ್ನು ನಿಗದಿ ಮಾಡಲಾಗಿದೆ, ಹಾಗೂ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಮಹಿಳಾ ಅಭ್ಯರ್ಥಿಗಳಿಗೆ ಯಾವುದೇ ಶುಲ್ಕವಿರುವುದಿಲ್ಲ.

ಜಿಲ್ಲಾವಾರು ಹುದ್ದೆಗಳು: ಬೆಂಗಳೂರು ಈಶಾನ್ಯ 19, ಬೆಂಗಳೂರು ದಕ್ಷಿಣ 20, ಬೆಂಗಳೂರು ಪಶ್ಚಿಮ 07, ಬೆಂಗಳೂರು ಗ್ರಾಮೀಣ 10, ಚಾಮರಾಜನಗರ 41, ಬಾಗಲಕೋಟ್ 28, ಬೆಳಗಾವಿ 40, ಬಳ್ಳಾರಿ 48, ಬೀದರ್ 65, ವಿಜಯಪುರ 31, ಚಿಕ್ಕೋಡಿ 38, ದಾರವಾಡ 24, ಗದಗ 52, ಗೋಕಾಕ್ 15, ಕಲಬುರಗಿ 52, ಹಾವೇರಿ 24, ಕಾರವಾರ 28, ರಾಯಚೂರು 42, ಶಿರಸಿ 23, ಚಿಕ್ಕಬಳ್ಳಾಪುರ 30, ಚಿತ್ರದುರ್ಗಾ 58, ಹಾಸನ 58, ಕೊಡಗು 19, ಕೋಲಾರ 50, ಮಂಡ್ಯ 29, ಮಂಗಳೂರು 07, ಮೈಸೂರು 29, ನಂಜನಗೂಡು 15, ಪುತ್ತೂರು 21, ಶಿವಮೊಗ್ಗ 30, ತುಮಕೂರು 66, ಉಡುಪಿ 18.

ಇನ್ನು ಹೆಚ್ಚಿನ ತಿಳಿಯಬೇಕಿದ್ದರೆ ಇಲ್ಲಿ ಕ್ಲಿಕ್ಕಿಸಿ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Indian post office recruitment notification has been issued for 1048 post of Gramin Dak Sevak all over Karnataka, out of which 240 posts are reserved for OBC candidates, 150 SC, 19 ST, 579 posts general candidates. Candidates to apply online before 08th May 2017.
Please Wait while comments are loading...