ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಗ್ನಿಪಥ್ ಯೋಜನೆ; ನೌಕಾಪಡೆಗೆ 3 ಲಕ್ಷಕ್ಕೂ ಹೆಚ್ಚು ಅರ್ಜಿ ಸ್ವೀಕಾರ

|
Google Oneindia Kannada News

ನವದೆಹಲಿ, ಜುಲೈ 24: ಭಾರತೀಯ ನೌಕಾಪಡೆಯು ಅಗ್ನಿಪಥ್ ಸೇನಾ ನೇಮಕಾತಿ ಯೋಜನೆಯಡಿ ಶುಕ್ರವಾರದವರೆಗೆ 3.03 ಲಕ್ಷ ಅರ್ಜಿಗಳನ್ನು ಸ್ವೀಕರಿಸಿದೆ ಎಂದು ರಕ್ಷಣಾ ಸಚಿವಾಲಯ ಶನಿವಾರ ತಿಳಿಸಿದೆ.

ಭಾರತೀಯ ನೌಕಾಪಡೆಯು ಜುಲೈ 2 ರಂದು ಯೋಜನೆಯಡಿ ನೇಮಕಾತಿ ಪ್ರಕ್ರಿಯೆಯನ್ನು ಪ್ರಾರಂಭಿಸಿತ್ತು. "ಭಾರತೀಯ ನೌಕಾಪಡೆಯಲ್ಲಿ ಅಗ್ನಿವೀರರಿಗಾಗಿ ಇದುವರೆಗೆ ಒಟ್ಟು 3,03,328 ಅರ್ಜಿಗಳು ಬಂದಿವೆ. ಜುಲೈ 22 ರವರೆಗೆ 3,03,328 ಅರ್ಜಿಗಳನ್ನು ಸ್ವೀಕರಿಸಲಾಗಿದೆ" ಎಂದು ರಕ್ಷಣಾ ಸಚಿವಾಲಯದ ವಕ್ತಾರರು ಟ್ವೀಟ್ ಮಾಡಿದ್ದಾರೆ.

Court Job: ಪಿಯುಸಿ ಪಾಸಾದವರಿಗೆ ತಿಂಗಳಿಗೆ 27,500 ಸಂಬಳ! Court Job: ಪಿಯುಸಿ ಪಾಸಾದವರಿಗೆ ತಿಂಗಳಿಗೆ 27,500 ಸಂಬಳ!

2800 ನೌಕಾಪಡೆ ಅಗ್ನಿವೀರರ ಹುದ್ದೆಗಳಿಗೆ ಭಾರತೀಯ ನೌಕಾಪಡೆಯಲ್ಲಿ 'ಅಗ್ನಿಪಥ್' ಯೋಜನೆಯಲ್ಲಿ ಅಗ್ನಿವೀರರ ನೇಮಕಕ್ಕೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿತ್ತು. ಅಗ್ನಿಪಥ ಯೋಜನೆಯಡಿಯಲ್ಲಿ, 17.5-21 ವರ್ಷ ವಯಸ್ಸಿನ ಯುವಕರು ನಾಲ್ಕು ವರ್ಷಗಳ ಅವಧಿಗೆ ಸೇರ್ಪಡೆಯಾಗುತ್ತಾರೆ ಮತ್ತು ಅವರಲ್ಲಿ 25 ಪ್ರತಿಶತದಷ್ಟು ನಂತರ ನಿಯಮಿತ ಸೇವೆಗೆ ಸೇರ್ಪಡೆಯಾಗುತ್ತಾರೆ.

Indian Navy Receives 3.03 Lakh Applications Under Agnipath Military Recruitment Scheme

ಹಿರಿಯ ಮಾಧ್ಯಮಿಕ ಅಗ್ನಿವೀರ್ (SSR) ನವೆಂಬರ್ 2022ನೇ ಬ್ಯಾಚ್‌ಗಾಗಿ ನೇಮಕಾತಿ ನಡೆಯುತ್ತಿದೆ. ಒಟ್ಟು 2800 ಹುದ್ದೆಗಳು ಖಾಲಿಯಿದ್ದು ಮಹಿಳೆಯರಿಗೆ 560 ಹುದ್ದೆಗಳನ್ನು ಮೀಸಲಿಡಲಾಗಿದೆ. ಇನ್ನು ಆಯ್ಕೆಯಾದ ಅಗ್ನಿವೀರರಿಗೆ ಪ್ರತಿ ತಿಂಗಳು 30000 ರೂಪಾಯಿ ವೇತನ ದೊರೆಯಲಿದೆ.

ಸಮಾಜ ಕಲ್ಯಾಣ ಇಲಾಖೆಯಿಂದ ಉಚಿತ ತರಬೇತಿ ಸಮಾಜ ಕಲ್ಯಾಣ ಇಲಾಖೆಯಿಂದ ಉಚಿತ ತರಬೇತಿ

ಅರ್ಜಿ ಸಲ್ಲಿಕೆ ಪ್ರಕ್ರಿಯೆ ಮುಕ್ತಾಯ; ಜುಲೈ 15, 2022 ರಿಂದ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿತ್ತು ಜುಲೈ 22, 2022ರಂದು ಅರ್ಜಿ ಸಲ್ಲಿಕೆ ಕೊನೆಯಾಗಿದೆ. ಅಕ್ಟೋಬರ್ ತಿಂಗಳಲ್ಲಿ ಲಿಖಿತ ಪರೀಕ್ಷೆ ನಡೆಯಲಿದೆ. ಆಯ್ಕೆಯು ಶಾರ್ಟ್‌ಲಿಸ್ಟಿಂಗ್, ಲಿಖಿತ ಪರೀಕ್ಷೆ, ಅರ್ಹತಾ ದೈಹಿಕ ಸಾಮರ್ಥ್ಯ ಪರೀಕ್ಷೆ (PFT) ಮತ್ತು ವೈದ್ಯಕೀಯ ಪರೀಕ್ಷೆಗಳಲ್ಲಿ ಫಿಟ್‌ನೆಸ್‌ ಪ್ರಕ್ರಿಯೆ ಮೂಲಕ ನಡೆಯುತ್ತಿದೆ.

Indian Navy Receives 3.03 Lakh Applications Under Agnipath Military Recruitment Scheme

ಈ ಯೋಜನೆಯನ್ನು ಜೂನ್ 14 ರಂದು ಜಾರಿ ಮಾಡಲಾಯಿತು, ಅದರ ನಂತರ ಸುಮಾರು ಒಂದು ವಾರದವರೆಗೆ ಹಲವಾರು ರಾಜ್ಯಗಳಲ್ಲಿ ಯೋಜನೆ ವಿರುದ್ಧ ಹಿಂಸಾತ್ಮಕ ಪ್ರತಿಭಟನೆಗಳು ನಡೆದವು ಮತ್ತು ಹಲವಾರು ವಿರೋಧ ಪಕ್ಷಗಳು ಇದನ್ನು ಹಿಂತೆಗೆದುಕೊಳ್ಳುವಂತೆ ಒತ್ತಾಯಿಸಿದವು.

ಸರ್ಕಾರವು ಜೂನ್ 16 ರಂದು ಯೋಜನೆಯಡಿಯಲ್ಲಿ ನೇಮಕಾತಿಗಾಗಿ ಗರಿಷ್ಠ ವಯಸ್ಸಿನ ಮಿತಿಯನ್ನು 2022ನೇ ವರ್ಷಕ್ಕೆ 21 ರಿಂದ 23 ವರ್ಷಗಳಿಗೆ ಹೆಚ್ಚಿಸಿತು ಮತ್ತು ನಂತರ ಕೇಂದ್ರ ಅರೆಸೈನಿಕ ಪಡೆಗಳು ಮತ್ತು ರಕ್ಷಣಾ ಸಾರ್ವಜನಿಕ ವಲಯದ ಉದ್ಯಮಗಳಲ್ಲಿ ಅವಧಿ ಮುಗಿಸಿದ ಅಗ್ನಿವೀರರಿಗೆ ಆದ್ಯತೆ ನೀಡುವುದಾಗಿ ಘೋಷಿಸಿತು.

Recommended Video

35 ಎಸೆತ,3 ಫೋರ್,5 ಸಿಕ್ಸರ್: ಅಕ್ಷರ್ ಪಟೇಲ್ ಸ್ಫೋಟಕ ಆಟ ಹೇಗಿತ್ತು ನೋಡಿ | *Cricket | OneIndia Kanndaa

English summary
The Indian Navy has received 3.03 lakh applications under the Agnipath military recruitment scheme. Defence Ministry spokesperson informed A total of 3,03,328 applications received so far for Agniveer in the Indian Navy.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X