ಭಾರತೀಯ ಸೇನಾ ನೇಮಕಾತಿ 2022: 10, 12ನೇ ತರಗತಿ ಪಾಸಾದವರು ಅರ್ಜಿ ಹಾಕಿ
ನವದೆಹಲಿ, ಫೆಬ್ರವರಿ 5: 10 ಮತ್ತು 12ನೇ ತರಗತಿಗಳಲ್ಲಿ ಉತ್ತೀರ್ಣರಾಗಿರುವ ಯುವ ಅಭ್ಯರ್ಥಿಗಳು ಈಗ ಭಾರತೀಯ ಸೇನೆಯ ಉತ್ತರ ಕಮಾಂಡ್‌ನಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಸೇನೆಯ ಉತ್ತರ ಕಮಾಂಡ್‌ನ 71 ಉಪ ಪ್ರದೇಶದ ಆರ್ಮಿ ಸಪ್ಲೈ ಕಾರ್ಪ್ಸ್ ಘಟಕದಲ್ಲಿ ಮೆಸೆಂಜರ್, ಸಫಾಯಿವಾಲಾ, ಕುಕ್, ಲೋವರ್ ಡಿವಿಷನ್ ಕ್ಲರ್ಕ್ ಮತ್ತು ಇತರ ಪೋಸ್ಟ್‌ಗಳ ಒಟ್ಟು 11 ಹುದ್ದೆಗಳಿಗೆ ಅರ್ಜಿ ಹಾಕಬಹುದಾಗಿದೆ.
ಗ್ರೂಪ್ ಸಿ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ದಿನಾಂಕವು ಜನವರಿ 22ರಂದು ಪ್ರಾರಂಭವಾಗಿದ್ದು ಮತ್ತು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಫೆಬ್ರವರಿ 12 ಕೊನೆಯ ದಿನವಾಗಿದೆ. ಗಮನಾರ್ಹ ಅಮಶವೆಂದರೆ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆಯು ಆಫ್‌ಲೈನ್‌ನಲ್ಲಿ ನಡೆಯುತ್ತದೆ.
ಹುದ್ದೆಗಳ ವಿವರಗಳು:
* ಮೆಸೆಂಜರ್ - 5 ಹುದ್ದೆಗಳು
* ಸಫಾಯ್‌ವಾಲಾ - 2 ಹುದ್ದೆಗಳು
* ಅಡುಗೆ - 1 ಹುದ್ದೆಗಳು
* ಲೋವರ್ ಡಿವಿಷನ್ ಕ್ಲರ್ಕ್ - 3 ಹುದ್ದೆಗಳು

ಮೆಸೆಂಜರ್, ಸಫಾಯಿವಾಲಾ ಮತ್ತು ಕುಕ್ ಹುದ್ದೆಗೆ ವಯಸ್ಸಿನ ಮಿತಿಯನ್ನು ಸಾಮಾನ್ಯ ವರ್ಗಕ್ಕೆ 18 ರಿಂದ 25 ವರ್ಷಗಳ ನಡುವೆ ನಿಗದಿಪಡಿಸಲಾಗಿದೆ. ಇನ್ನು ಗರಿಷ್ಠ ವಯಸ್ಸಿನ ಮಿತಿಯನ್ನು ಒಬಿಸಿಗೆ 28 ವರ್ಷಗಳು ಮತ್ತು ಎಸ್ಸಿ, ಎಸ್ಟಿಗೆ 30 ವರ್ಷಗಳಿಗೆ ನಿಗದಿಪಡಿಸಿದೆ.
ಕ್ಲರ್ಕ್ ಹುದ್ದೆಗೆ ಸಾಮಾನ್ಯ ವರ್ಗಕ್ಕೆ 18 ರಿಂದ 27 ವರ್ಷಗಳು ಮತ್ತು ಒಬಿಸಿಗೆ 30 ವರ್ಷಗಳು, ಎಸ್‌ಸಿ, ಎಸ್‌ಟಿಗೆ 32 ವರ್ಷ ವಯಸ್ಸಿನ ಮಿತಿಯನ್ನು ನಿಗದಿಪಡಿಸಲಾಗಿದೆ.
ಸಂಬಳ ವಿವರ
* ಮೆಸೆಂಜರ್ ಹುದ್ದೆ - ಹಂತ-1 18,000- 56,900 ರೂ.
* ಸಫಾಯ್‌ವಾಲಾ ಹುದ್ದೆ- ಹಂತ-1 18,000- 56,900 ರೂ.
* ಅಡುಗೆ ಹುದ್ದೆ - ಹಂತ-2 19,900- 63,200 ರೂ.
* ಕ್ಲರ್ಕ್ ಹುದ್ದೆ- ಹಂತ-2 19,900 - 63,200 ರೂ.

ಅಗತ್ಯವಿರುವ ಶೈಕ್ಷಣಿಕ ಅರ್ಹತೆ
* ಮೆಸೆಂಜರ್ ಮತ್ತು ಸಫಾಯಿವಾಲಾ - 10ನೇ ತರಗತಿ ತೇರ್ಗಡೆ
* ಅಡುಗೆಯವರು- ಎರಡು ವರ್ಷಗಳ ಅನುಭವದೊಂದಿಗೆ 12ನೇ ತರಗತಿ ಪಾಸ್. ಅಡುಗೆ ವ್ಯಾಪಾರದಲ್ಲಿ ITI ಪ್ರಮಾಣಪತ್ರವನ್ನು ಹೊಂದಿರಬೇಕು.
* ಕ್ಲರ್ಕ್- 12ನೇ ತರಗತಿ ಉತ್ತೀರ್ಣರಾಗಿ ಕಂಪ್ಯೂಟರ್‌ನಲ್ಲಿ ಟೈಪಿಂಗ್ ವೇಗದೊಂದಿಗೆ ಇಂಗ್ಲಿಷ್‌ನಲ್ಲಿ ನಿಮಿಷಕ್ಕೆ ಕನಿಷ್ಠ 35 ಪದಗಳು ಮತ್ತು ಹಿಂದಿಯಲ್ಲಿ ನಿಮಿಷಕ್ಕೆ 30 ಪದಗಳು ಟೈಪಿಸಬೇಕು.
ಅಭ್ಯರ್ಥಿಗಳು ದೈಹಿಕ ಪರೀಕ್ಷೆಯ ನಂತರ ಲಿಖಿತ ಪರೀಕ್ಷೆಯನ್ನು ಎದುರಿಸಬೇಕಾಗುತ್ತದೆ. ಅಭ್ಯರ್ಥಿಗಳು ಈ ಎರಡೂ ಪರೀಕ್ಷೆಗಳಲ್ಲಿ ಉತ್ತೀರ್ಣರಾದ ನಂತರ, ಅಂತಿಮ ಹಂತವು ದಾಖಲೆ ಪರಿಶೀಲನೆಯಾಗಲಿದೆ.
ಅರ್ಜಿ ಸಲ್ಲಿಸಬಹುದು ಹೇಗೆ?
ಅಪ್ಲಿಕೇಶನ್ ಪ್ರಕ್ರಿಯೆಯು ಆಫ್‌ಲೈನ್‌ನಲ್ಲಿ ನಡೆಯುವುದರಿಂದ, ಅಭ್ಯರ್ಥಿಗಳು ಅರ್ಜಿ ನಮೂನೆಯನ್ನು ಸಾಮಾನ್ಯ ಪೋಸ್ಟ್, ನೋಂದಾಯಿತ ಪೋಸ್ಟ್ ಅಥವಾ ಸ್ಪೀಡ್ ಪೋಸ್ಟ್ ಮೂಲಕ ಕಳುಹಿಸಬೇಕಾಗುತ್ತದೆ.
ಅರ್ಜಿ ನಮೂನೆಯನ್ನು ಕಳುಹಿಸಬೇಕಾದ ವಿಳಾಸ:
'ದಿ ಪ್ರಿಸೈಡಿಂಗ್ ಆಫೀಸರ್, 5071 ಆರ್ಮಿ ಸರ್ವೀಸ್ ಕಾರ್ಪ್ಸ್ ಬೆಟಾಲಿಯನ್ (ಮೆಕ್ಯಾನಿಕಲ್ ಟ್ರಾನ್ಸ್‌ಪೋರ್ಟ್)', ಪಿನ್- 905071, ಸಿ/ಒ 56 ಆರ್ಮಿ ಪೋಸ್ಟಲ್ ಆಫೀಸ್ (ಎಪಿಒ).












Click it and Unblock the Notifications