India Post Recruitment: ಕರ್ನಾಟಕದಲ್ಲಿ ಎಷ್ಟು ಹುದ್ದೆಗಳು ಖಾಲಿಯಿವೆ ಹಾಗೂ ಆಯ್ಕೆಯಾದವರಿಗೆ ಮಾಸಿಕ ಸಂಬಳ ಎಷ್ಟು?
India Post Recruitment: ಭಾರತೀಯ ಅಂಚೆ ಇಲಾಖೆಯಲ್ಲಿ 98,083 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಹಾಗಾದರೆ ಕರ್ನಾಟಕದಲ್ಲಿ ಎಷ್ಟು ಹುದ್ದೆಗಳು ಖಾಲಿಯಿವೆ?, ಅರ್ಜಿ ಸಲ್ಲಿಸುವ ವಿಧಾನ ಹಾಗೂ ಆಯ್ಕೆಯಾದವರಿಗೆ ಮಾಸಿಕ ಸ್ಯಾಲರಿ ಎಷ್ಟಿರುತ್ತದೆ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
10ನೇ ತರಗತಿ ಪಾಸಾದವರೂ ಅರ್ಜಿ ಸಲ್ಲಿಸಬಹುದು. ಭಾರತೀಯ ಅಂಚೆ ಇಲಾಖೆ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಿದೆ. ದೇಶಾದ್ಯಂತ 98,083 ಹುದ್ದೆಗಳು ಖಾಲಿ ಇದ್ದು, 10ನೇ ತರಗತಿ ಉತ್ತೀರ್ಣರಾದವರು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಕೆ ಮಾಡಬಹುದಾಗಿದೆ.

ಸದ್ಯ ಅಧಿಕೃತ ಅಧಿಸೂಚನೆ ಇನ್ನೂ ಬಿಡುಗಡೆ ಆಗಿಲ್ಲ. ಅದಾದ ಬಳಿಕವಷ್ಟೇ ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕದ ಬಗ್ಗೆ ಮಾಹಿತಿ ಲಭಿಸಲಿದೆ. ಪರೀಕ್ಷೆ ಮೂಲಕ ಈ ನೇಮಕಾತಿ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ. ಜಿಡಿಎಸ್ (Gramin Dak Sevak), ಪೋಸ್ಟ್‌ಮ್ಯಾನ್, ಎಂಟಿಎಸ್, ಪೋಸ್ಟಲ್ ಅಸಿಸ್ಟಂಟ್, ಮೇಲ್ ಗಾರ್ಡ್, ಸೋರ್ಟಿಂಗ್ ಅಸಿಸ್ಟಂಟ್ ಸೇರಿದಂತೆ ವಿವಿಧ ಹುದ್ದೆಗಳಿವೆ.
ಕರ್ನಾಟಕದಲ್ಲಿ ಒಟ್ಟು 5,731 ಹುದ್ದೆಗಳಿವೆ. ರಾಜ್ಯದಲ್ಲಿ ಎಂಟಿಎಸ್ -1,754, ಪೋಸ್ಟ್‌ಮ್ಯಾನ್ -3,887 ಮತ್ತು ಮೇಲ್ ಗಾರ್ಡ್ -90 ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ನಡೆಯಲಿದೆ.
ಶುಲ್ಕ ಪಾವತಿ ಮಾಹಿತಿ: ಸಾಮಾನ್ಯ/ಒಬಿಸಿ /ಇಡಬ್ಲ್ಯುಎಸ್ ವಿಭಾಗದ ಅಭ್ಯರ್ಥಿಗಳಿ 100 ರೂಪಾಯಿ, ಮಹಿಳಾ/ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ಇಲ್ಲ. ಇನ್ನು 18ರಿಂದ 40 ವರ್ಷದೊಳಗಿನ ಆಸಕ್ತರು ಅರ್ಜಿ ಸಲ್ಲಿಸಬಹುದಾಗುದೆ. ಮೀಸಲಾತಿಗೆ ಅನುಗುಣವಾಗಿ ವಯೋಮಿತಿಯಲ್ಲಿ ಸಡಿಲಿಕೆ ಲಭ್ಯ. ಒಬಿಸಿ-3 ವರ್ಷ, ಎಸ್‌ಸಿ / ಎಸ್‌ಟಿ -5 ವರ್ಷ ಮತ್ತು ಪಿಡಬ್ಲ್ಯುಡಿ ಅಭ್ಯರ್ಥಿಗಳಿಗೆ 10 ವರ್ಷಗಳ ಸಡಿಲಿಕೆ ಇರಲಿದೆ.
ಆಯ್ಕೆ ಪ್ರಕ್ರಿಯೆ: ಲಿಖಿತ ಪರೀಕ್ಷೆಯ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. 3 ಗಂಟೆಗಳ ಈ ಪರೀಕ್ಷೆ 100 ಅಂಕಗಳಿಗೆ ಇರುತ್ತದೆ. ಗಣಿತ, ರೀಸನಿಂಗ್, ಹಿಂದಿ, ಇಂಗ್ಲಿಷ್ ವಿಷಯಗಳ ತಲಾ 25 ಅಂಕಗಳ ಪ್ರಶ್ನೆಗಳಿರುತ್ತವೆ. ಅಭ್ಯರ್ಥಿಗಳು ಸ್ಥಳೀಯ ಭಾಷೆಯ ಮೇಲಿನ ಹಿಡಿತ ಹೊಂದಿರುವುದು ಕಡ್ಡಾಯವಾಗಿದ್ದು, ಜೊತೆಗೆ ಕಂಪ್ಯೂಟರ್ ಜ್ಞಾನ ಮತ್ತು ಕಂಪ್ಯೂಟರ್ ಕಲಿಕೆಯ ಪ್ರಮಾಣ ಪತ್ರ ಹೊಂದಿರಬೇಕಾಗುತ್ತದೆ.












Click it and Unblock the Notifications