ಡಿಸೆಂಬರ್‌ ವೇಳೆಗೆ ಬರೋಬ್ಬರಿ ಶೇಕಡಾ 57ರಷ್ಟು ನೇಮಕಾತಿ ಹೆಚ್ಚಳ

ನವದೆಹಲಿ, ನವೆಂಬರ್‌ 1: ಉದ್ಯೋಗದಾತರು ಅಕ್ಟೋಬರ್- ಡಿಸೆಂಬರ್ ತ್ರೈಮಾಸಿಕದಲ್ಲಿ ಶೇಕಡಾ 57 ರಷ್ಟು ಹೊಸ ಉದ್ಯೋಗಿಗಳನ್ನು ನೇಮಿಸಿಕೊಳ್ಳಲು ಬಯಸುವುದರೊಂದಿಗೆ ಉತ್ಪಾದನಾ ವಲಯದಲ್ಲಿ ನೇಮಕಾತಿ ಚಟುವಟಿಕೆಗಳು ಹೆಚ್ಚಲಿವೆ ಎಂದು ನೇಮಕಾತಿ ಸಂಸ್ಥೆ ಟೀಮ್‌ಲೀಸ್ ಸರ್ವೀಸರ್ಸ್‌ ಬಿಡುಗಡೆ ಮಾಡಿದ ವರದಿ ತಿಳಿಸಿದೆ.

ಸೇವಾ ಉದ್ಯಮದೊಂದಿಗೆ ಸಂಯೋಜಿಸಿ ನೋಡಿದಾಗ ನೇಮಕಾತಿ ಗುರಿಗಳು ಜುಲೈ- ಸೆಪ್ಟೆಂಬರ್‌ನಲ್ಲಿ 61% ರಿಂದ ಮೂರನೇ ತ್ರೈಮಾಸಿಕದಲ್ಲಿ 65% ಕ್ಕೆ ಏರಿದೆ ಮತ್ತು ಮುಂದಿನ ಕೆಲವು ತ್ರೈಮಾಸಿಕಗಳಲ್ಲಿ 70% ಅನ್ನು ದಾಟುವ ನಿರೀಕ್ಷೆಯಿದೆ. ಟೀಮ್‌ಲೀಸ್ ಸರ್ವಿಸಸ್ ಉದ್ಯೋಗ ಔಟ್‌ಲುಕ್ ವರದಿ, ಮೆಟ್ರೋ ಮತ್ತು ಒಂದನೇ ಶ್ರೇಣಿ ನಗರಗಳು (91%) ಶ್ರೇಣಿ- 2 ನಗರಗಳು (69%), ಶ್ರೇಣಿ- 3 (39%) ಮತ್ತು ಗ್ರಾಮೀಣ ಸ್ಥಳಗಳು (21%) ಉದ್ಯೋಗದ ಹೆಚ್ಚಳದ ಉದ್ದೇಶವನ್ನು ಸೂಚಿಸಿವೆ.

ಕೋವಿಡ್ -19 ಸಾಂಕ್ರಾಮಿಕದ ಎರಡು ವರ್ಷಗಳ ನಂತರ ಉತ್ಪಾದನಾ ಸಂಸ್ಥೆಗಳು ನೇಮಕಾತಿ ಹೆಚ್ಚಳ ಮಾಡಲು ನೋಡುತ್ತಿವೆ. ಅವರು ಯುವ ಉದ್ಯೋಗಿಗಳೊಂದಿಗೆ ಮುಂಚೂಣಿಯಲ್ಲಿ ಕಂಪೆನಿಯ ನಡೆಸಲು ಮುಂದಾಗಿದ್ದಾರೆ. ದೊಡ್ಡ ಉತ್ಪಾದನಾ ಸಂಸ್ಥೆಗಳು, ಪ್ರಮಾಣ ಮತ್ತು ತಾಂತ್ರಿಕ ಸಾಮರ್ಥ್ಯದೊಂದಿಗೆ ನೇಮಕಾತಿ ಚಟುವಟಿಕೆಯನ್ನು ಮುನ್ನಡೆಸುತ್ತವೆ. ಈ ಮೂಲಕ ತಮ್ಮ ಉತ್ಪಾದನಾ ಸಾಮರ್ಥ್ಯವನ್ನು ಉತ್ತಮಗೊಳಿಸಿವೆ. ಸಣ್ಣ ಪ್ರಮಾಣದ ಕೈಗಾರಿಕೆಗಳು 41% ಮತ್ತು ಮಧ್ಯಮ ಗಾತ್ರದ ವ್ಯವಹಾರ ಕಂಪೆನಿಗಳು 39% ಹೊಸ ನೇಮಕಾತಿ ಮಾಡಿಕೊಳ್ಳಲಿವೆ.

Increase in recruitment by 57 percent by December

ಕಿರಿಯ ಮಟ್ಟದ ಪ್ರತಿಭೆಗಳು (57%) ಉತ್ತಮ ಬೇಡಿಕೆಯನ್ನು ಹೊಂದಿದ್ದು, ಫ್ರೆಶರ್‌ ಪ್ರತಿಭೆ (51%), ಮಧ್ಯಮ ಮಟ್ಟದ (29%) ಮತ್ತು ಹಿರಿಯ ಮಟ್ಟದ (21%) ಉದ್ಯೋಗಿಗಳನ್ನು ನೇಮಕವಾಗಲಿದೆ ಎಂದು ವರದಿ ಹೇಳಿದೆ.

ಉದ್ಯೋಗ ದೃಷ್ಟಿಕೋನದಿಂದ, ಉತ್ಪಾದನಾ ಕಂಪನಿಗಳು ಕಾರ್ಯಾಚರಣೆಗಳ ಮೇಲೆ ಹೆಚ್ಚು ಗಮನಹರಿಸುತ್ತಿವೆ. ಹೆಚ್ಚಿನ ನೇಮಕಾತಿ ಹೊಂದಲು ಯೋಜಿಸಲಾದ ಉದ್ಯೋಗಗಳಲ್ಲಿ ಸೇಲ್ಸ್‌ (95%), ಮಾರ್ಕೆಟಿಂಗ್ (79%), ಮಾಹಿತಿ ಮತ್ತು ತಂತ್ರಜ್ಞಾನ (77%), ಎಂಜಿನಿಯರಿಂಗ್ ಮತ್ತು ನೀಲಿ- ಕಾಲರ್ (67%) ಸೇರಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+