IIMB Recruitment 2024: ಬೆಂಗಳೂರಿನಲ್ಲಿ ಬಂಪರ್ ಉದ್ಯೋಗ, ಲಕ್ಷ-ಲಕ್ಷ ಪ್ಯಾಕೇಜ್, ಈಗಲೇ ಅರ್ಜಿ ಸಲ್ಲಿಸಿ
ಬೆಂಗಳೂರು, ಜನವರಿ 15: ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ (IIMB) ತನ್ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ಆರಂಭಿಸಿದೆ. ಈ ಸಂಬಂಧ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಬೆಂಗಳೂರಿನಲ್ಲಿ ಉದ್ಯೋಗ ಹುಡುತ್ತಿರುವ ನಿರುದ್ಯೋಗಿ ಅಭ್ಯರ್ಥಿಗಳಿಗೆ ಇದೊಂದು ಉತ್ತಮ ಅವಕಾಶವಗಿದೆ.
ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ (IIMB) ವಿವಿಧ ಅನೇಕ ಕನ್ಸಲ್ಟೆಂಟ್- COO ಹುದ್ದೆಗಳು ಖಾಲಿ ಇವೆ. ಆಸಕ್ತರು ಅರ್ಹ ಅಭ್ಯರ್ಥಿಗಳು ಈ ಕೂಡಲೇ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ವಿಶೇಷವೇನೆಂದರೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಬೆಂಗಳೂರಿನಲ್ಲಿ ಉದ್ಯೋಗ ಸಿಲಿದೆ. ಇದೇ ತಿಂಗಳ ಜನವರಿ 20 ಅರ್ಜಿ ಸಲ್ಲಿಕೆಗೆ ಕಡೆಯ ದಿನವಾಗಿದೆ.

ಅರ್ಜಿ ಸಲ್ಲಿಕೆಗು ಮೊದಲು ನೀವು ಹುದ್ದೆಗೆ ಬೇಕಾದ ಶೈಕ್ಷಣಿಕ ಅರ್ಹತೆ, ವೇತನ ಸೇರಿದಂತೆ ನೇಮಕಾತಿಯ ಎಲ್ಲ ಸಂಪೂಣ್ ಮಾಹಿತಿ ತಿಳಿದುಕೊಳ್ಳಿ. ಇಲ್ಲವೇ ಅಧಿಕೃತ ವೆಬ್‌ಸೈಟ್‌ನಲ್ಲಿ (https://www.iimb.ac.in/job-opportunities) ಅಧಿಸೂಚನೆ ನೋಡಿಕೊಂಡು ಕೊನೆ ದಿನವರೆಗೆ ಕಾಯದೇ ಅರ್ಜಿ ಸಲ್ಲಿಸುಂತೆ ಸಂಸ್ಥೆ ತಿಳಿಸಿದೆ.
ನೇಮಕಾತಿ ಪೂರ್ಣ ಮಾಹಿತಿ
ಸಂಸ್ಥೆ ಹೆಸರು: ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ (IIMB)
ಹುದ್ದೆ ಹೆಸರು: ಕನ್ಸಲ್ಟೆಂಟ್ ಹುದ್ದೆ (ಸಿಒಒ)
ಮಾಸಿಕ ವೇತನ: ವಾರ್ಷಿಕ ಪ್ಯಾಕೇಜ್ 25 ಲಕ್ಷ ರೂಪಾಯಿ
ಪೋಸ್ಟಿಂಗ್ ಎಲ್ಲಿ: ಬೆಂಗಳೂರು
ಅರ್ಜಿ ಸಲ್ಲಿಕೆ ಕೊನೆ ದಿನ: ಜನವರಿ 20
ಶೈಕ್ಷಣಿಕ ಅರ್ಹತೆ
ಅರ್ಜಿ ಸಲ್ಲಿಸಬೇಕಾದ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಇಲ್ಲವ ಮಂಡಳಿಯಿಂದ ಪಬ್ಲಿಕ್ ಪಾಲಿಸಿ ಮತ್ತು ಮ್ಯಾನೇಜ್ಮೆಂಟ್/ ಎಕನಾಮಿಕ್ಸ್/ ಅಡ್ಮಿನಿಸ್ಟ್ರೇಶನ್ನಲ್ಲಿ ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿರುವುದನ್ನು ಕಡ್ಡಾಯಗೊಳಿಸಲಾಗಿದೆ ಎಂದು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಬೆಂಗಳೂರು ನೇಮಕಾತಿ ಅಧಿಸೂಚನೆ ತಿಳಿಸಿದೆ.

ವಯಸ್ಸಿನ ಮಿತಿ ವಿವರ
ಅರ್ಜಿ ಸಲ್ಲಿಸಲಿರುವ ಆಸಕ್ತ ಅಭ್ಯರ್ಥಿಗಳ ವಯಸ್ಸು ಗರಿಷ್ಠ 55 ವರ್ಷ ಮೀರಿರಬಾರದು ಎಂದು ಸೂಚಿಸಲಾಗಿದೆ. ಆಯ್ಕೆ ಆಗುವವರಿಗೆ ಬೆಂಗಳೂರಿನಲ್ಲೇ ಪೋಸ್ಟಿಂಗ್ ನೀಡಲಾಗುವುದು ಎಂದು ಐಐಎಂಬಿ ತಿಳಿಸಿದೆ.
ಆಯ್ಕೆ ಪ್ರಕ್ರಿಯೆ ಹೇಗಿರುತ್ತದೆ?
ಸಂಸ್ಥೆಯು ಮೊದಲು ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆ ನಡೆಸುತ್ತದೆ. ಅಲ್ಲಿ ಆಯ್ಕೆ ಆಗುವವರಿಗೆ ನಂತರದ ಹಂತದಲ್ಲಿ ಸಂದರ್ಶನ ನಡೆಸುತ್ತದೆ. ಅದಾದ ಬಳಿಕ ವಾರ್ಷಿಕವಾಗಿ ಅವರಿಗೆ, ವಾರ್ಷಿಕ ಪ್ಯಾಕೇಜ್ 25 ಲಕ್ಷ ರೂ. ವೇತನ ಸಹಿತ ಬೆಂಗಳೂರಿನಲ್ಲಿ ಪೋಸ್ಟಿಂಗ್ ನೀಡಲಿದೆ.
ಅರ್ಜಿ ಶುಲ್ಕ
ಅಭ್ಯರ್ಥಿಗಳು ಯಾವುದೇ ಅರ್ಜಿ ಶುಲ್ಕ ಪಾವತಿಸುವಂತಿಲ್ಲ ಎಂದು ಸಂಸ್ಥೆ ತಿಳಿಸಿದೆ. ಉಚಿತವಾಗಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಆಸಕ್ತು ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬೇಕು.
ನೆನಪಿಡಬೇಕಾದ ದಿನಾಂಕ
ಅರ್ಜಿ ಸಲ್ಲಿಕೆ ಆರಂಭ ದಿನ: ಜನವರಿ 09
ಅರ್ಜಿ ಸಲ್ಲಿಕೆ ಕೊನೆ ದಿನ: ಜನವರಿ 20












Click it and Unblock the Notifications