ಐಡಿಬಿಐ ಬ್ಯಾಂಕಿನಲ್ಲಿ ವಿಶೇಷ ಅಧಿಕಾರಿ ಹುದ್ದೆಗಳಿವೆ, ಅರ್ಜಿ ಹಾಕಿ

Posted By:
Subscribe to Oneindia Kannada

ಬೆಂಗಳೂರು, ಫೆಬ್ರವರಿ 03: ಐಡಿಬಿಐ ಬ್ಯಾಂಕ್ ವಿಶೇಷ ಅಧಿಕಾರಿಗಳ ಹುದ್ದೆಗಳಿಗೆ ನೇಮಕಾತಿ ಆರಂಭಿಸಿದೆ. ಮ್ಯಾನೇಜರ್, ಸಹಾಯಕ ಮ್ಯಾನೇಜರ್, ಡೆಪ್ಯುಟಿ ಮ್ಯಾನೇಜರ್ ಸೇರಿದಂತೆ 111 ಹುದ್ದೆಗಳಿವೆ. ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದ್ದು, ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ನವೆಂಬರ್ 30 ಫೆಬ್ರವರಿ 20 ಕೊನೆ ದಿನವಾಗಿದೆ.

ಒಟ್ಟು ಹುದ್ದೆಗಳು: 111
ಹುದ್ದೆ:
* ಡೆಪ್ಯುಟಿ ಪ್ರಧಾನ ಮ್ಯಾನೇಜರ್ (ಗ್ರೇಡ್ ಡಿ) : 13
* ಸಹಾಯಕ ಪ್ರಧಾನ ಮ್ಯಾನೇಜರ್ (ಗ್ರೇಡ್ ಸಿ) : 17
* ಮ್ಯಾನೇಜರ್ (ಗ್ರೇಡ್ ಬಿ) : 81
ಸ್ಥಳ: ಭಾರತದಾದ್ಯಂತ
ವಿದ್ಯಾರ್ಹತೆ: ಮಾನ್ಯತೆ ಪಡೆದ ವಿವಿಯಲ್ಲ ಪದವಿಯನ್ನು ಪ್ರಥಮ ದರ್ಜೆಯಲ್ಲಿ ಪಡೆದಿರಬೇಕು. ಬಿಎಸ್ ಸಿ ಆಗ್ರಿ ಅಥವಾ ವೆಟರ್ನರಿ ಸೈನ್ಸ್, ಎಂಟೆಕ್, ಎಂಬಿಎ, ಎಂಎಸ್ಸಿ ಮಾಡಿರುವವರು ಅರ್ಜಿಹಾಕಬಹುದು.

IDBI Bank Recruitment 2017 Apply Online (111 Vacancies)


ವಯೋಮಿತಿ: ಹುದ್ದೆ 1: 18 ರಿಂದ 40/45 ವಯಸ್ಸಿನೊಳಗಿರಬೇಕು,
ಹುದ್ದೆ 2: ಗರಿಷ್ಠ 36 ವರ್ಷ
ಹುದ್ದೆ 3 : ಗರಿಷ್ಠ 32 ವರ್ಷ (01/10/2016 ರಂತೆ)
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ವರ್ಗ, ಹಿಂದುಳಿದ ವರ್ಗದವರಿಗೆ ವಿನಾಯತಿ ಇರುತ್ತದೆ.
ಅರ್ಜಿ ಶುಲ್ಕ: ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ 150 ರು. ಉಳಿದವರಿಗೆ 700 ರುಗಳನ್ನು ನಿಗದಿ ಮಾಡಲಾಗಿದ್ದು. ಶುಲ್ಕವನ್ನು ನೆಟ್ ಬ್ಯಾಂಕಿಂಗ್, ಡೆಬಿಟ್ ಕಾರ್ಡ್, ಕ್ರಡಿಟ್ ಕಾರ್ಡ್ ಮೂಲಕ ತುಂಬಹುದು.
ಆಯ್ಕೆ ವಿದಾನ: ಆನ್ ಲೈನ್ ಪರೀಕ್ಷೆ, ಸಮೂಹ ಚರ್ಚ, ವೈಯಕ್ತಿಕ ಸಂದರ್ಶನ.

ಅರ್ಜಿ ಸಲ್ಲಿಸಲು ಕೊನೆ ದಿನಾಂಕ 20/02/2017.
ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ಕಿಸಿ

(ಒನ್ಇಂಡಿಯಾ ಸುದ್ದಿ)

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
IDBI Bank has invited applications for the recruitment of 111 Specialist Officer (Manager, Assistant General Manager (AGM) & Deputy General Manager (DGM)) vacancies for different functional areas. Eligible candidates may apply online from 01-02-2017 to 20-02-2017.
Please Wait while comments are loading...