ಐಸಿಐಸಿಐ ಬ್ಯಾಂಕಲ್ಲಿ ಪ್ರೊಬೆಷನರಿ ಆಫೀಸರ್ ಹುದ್ದೆಗೆ ಅರ್ಜಿ ಹಾಕಿ

Posted By:
Subscribe to Oneindia Kannada

ಬೆಂಗಳೂರು, ಮೇ 30: ಖಾಸಗಿ ವಲಯದ ಪ್ರಮುಖ ಬ್ಯಾಂಕ್ ಐಸಿಐಸಿಐ ಹಾಗೂ ಮಣಿಪಾಲ್ ಅಕಾಡೆಮಿ ಪ್ರೊಬೆಷನರಿ ಆಫೀಸರ್ ಹುದ್ದೆಗಾಗಿ ಪ್ರಕಟಣೆ ಹೊರಡಿಸಿವೆ, ನವೆಂಬರ್ 2016 ಹಾಗೂ ಫೆಬ್ರವರಿ 2017ರಲ್ಲಿ ತರಬೇತಿ ಪಡೆಯಲಿರುವ ಅಭ್ಯರ್ಥಿಗಳು ಈಗಲೇ ಅರ್ಜಿ ಹಾಕಬೇಕಾಗುತ್ತದೆ. ಆಸಕ್ತರು ಜೂನ್ 30, 2016ರೊಳಗೆ ಅರ್ಜಿ ಸಲ್ಲಿಸಬಹುದು.

ಹುದ್ದೆಯ ಹೆಸರು: ಪ್ರೊಬೆಷನರಿ ಅಧಿಕಾರಿ

ವಯೋಮಿತಿ:
30/06/2016ರಂತೆ ಅಭ್ಯರ್ಥಿಯ ವಯಸ್ಸು 25 ವರ್ಷ ದಾಟಿರಬಾರದು(30/06/1991 ರಂದು ಅಥವಾ ಆನಂತರ ಹುಟ್ಟಿದವರಾಗಿರಬೇಕು)

ವಿದ್ಯಾರ್ಹತೆ: ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ (ಸರಾಸರಿ ಶೇ 55ರಷ್ಟು)

ಆಯ್ಕೆ ಪ್ರಕ್ರಿಯೆ:ಅಭ್ಯರ್ಥಿಗಳು ಆನ್ ಲೈನ್ ನಲ್ಲಿ ಆಪ್ಟಿಟ್ಯೂಡ್ ಪರೀಕ್ಷೆ, ಆನ್ ಲೈನ್ ನಲ್ಲಿ ಸೈಕೊಮೆಟ್ರಿಕ್ ಅಸೈನ್ಮೆಂಟ್, ಸಮೂಹ ಸಂವಹನ ಕಾರ್ಯಕ್ರಮ, ವೈಯಕ್ತಿಕ ಸಂದರ್ಶನದಲ್ಲಿ ಪಾಲ್ಗೊಳ್ಳಬೇಕು.

ICICI Bank Probationary Officer Post 2016 Apply Online

ಅರ್ಜಿ ಸಲ್ಲಿಸುವುದು ಹೇಗೆ?:
* www.icicicareers.com ಗೆ ಲಾಗಿನ್ ಆಗಿ ಅಥವಾ ನೇರವಾಗಿ ಈ ಲಿಂಕ್ ಕ್ಲಿಕ್ ಮಾಡಿ

* ಪ್ರೊಬೆಷನರಿ ಆಫೀಸರ್ ಪೊಗ್ರಾಂ ಕ್ಲಿಕ್ ಮಾಡಿ, ಅಪ್ಲೈ ಒತ್ತಿ

* ಸಂಬಂಧಿಸಿದ ಹುದ್ದೆ ಆಯ್ಕೆ ಮಾಡಿಕೊಂಡ ಮೇಲೆ ನಿಖರವಾದ ಮಾಹಿತಿಯೊಂದಿಗೆ ಅರ್ಜಿ ತುಂಬಿರಿ

* Apply Here ಒತ್ತಿ, ಅರ್ಜಿಯ ಪ್ರಿಂಟ್ ಔಟ್ ತೆಗೆದುಕೊಳ್ಳಿ

ಅರ್ಜಿ ಸಲ್ಲಿಸಲು ಕೊನೆ ದಿನಾಂಕ 30/06/2016

ಈ ಸುದ್ದಿಯನ್ನು ಇಂಗ್ಲೀಷಿನಲ್ಲಿ ನೋಡಲು ಕ್ಲಿಕ್ ಮಾಡಿ

* ಐಸಿಐಸಿಐ ಬ್ಯಾಂಕ್ ನೇಮಕಾತಿ ಬಗ್ಗೆ FAQs ಇಲ್ಲಿದೆ ಡೌನ್ ಲೋಡ್ ಮಾಡಿಕೊಳ್ಳಿ

* ಮಾದರಿ ಪ್ರಶ್ನೆ ಪತ್ರಿಕೆ ಇಲ್ಲಿದೆ ನೋಡಿ

(ಒನ್ಇಂಡಿಯಾ ಸುದ್ದಿ)

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
ICICI Bank, Manipal Acadamy has given an employment notification for the recruitment of Probationary Officer vacancies through training programme in batch of November 2016 & February 2017. Eligible candidates can apply online on or before 30-06-2016.
Please Wait while comments are loading...