3562 ಪ್ರೊಬೆಷನರಿ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ
ಬೆಂಗಳೂರು, ಆಗಸ್ಟ್ 20 : ದೇಶಾದ್ಯಂತ ವಿವಿಧ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಖಾಲಿ ಇರುವ 3562 ಪ್ರೊಬೆಷನರಿ ಆಫೀಸರ್ ಹುದ್ದೆಗಳ ನೇಮಕಾತಿಗಾಗಿ ಐಬಿಪಿಎಸ್ ಅರ್ಜಿ ಆಹ್ವಾನಿಸಿದೆ.
ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಆನ್ ಲೈನ್ ಮೂಲಕ ದಿನಾಂಕ 05.09.2017ರೊಳಗೆ ಅರ್ಜಿ ಸಲ್ಲಿಸಲು ಕೋರಲಾಗಿದೆ.

ವಿದ್ಯಾರ್ಹತೆ: ಅಭ್ಯರ್ಥಿಗಳು ಯಾವುದೇ ಪದವಿ (ಬಿ.ಎ. / ಬಿ.ಕಾಂ./ ಬಿ.ಎಸ್ಸಿ/ ಬಿ.ಸಿ.ಎ./ಬಿ.ಬಿ.ಎಂ/ಬಿ.ಬಿ.ಎ./ಬಿ.ಇ./ ಬಿ.ಎಸ್.ಡಬ್ಲ್ಯೂ/ ಎಲ್.ಎಲ್.ಬಿ /ಇತ್ಯಾದಿ) ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.
ವಯಸ್ಸಿನ ಮಿತಿ: ಸಾಮಾನ್ಯ ಅಭ್ಯರ್ಥಿಗಳಿಗೆ ಕನಿಷ್ಠ 20 ವರ್ಷ, ಗರಿಷ್ಠ 30 ವರ್ಷ, ಎಸ್ಸಿ ಹಾಗೂ ಎಸ್ಟಿ ಅಭ್ಯರ್ಥಿಗಳಿಗೆ 35, ಹಿಂದೂಳಿದ ವರ್ಗದ ಅಭ್ಯರ್ಥಿಗಳಿಗೆ 33 ವರ್ಷ ವಯೋಮಿತಿಯನ್ನು ನಿಗದಿ ಪಡಿಸಲಾಗಿದೆ.
ಅರ್ಜಿ ಸಲ್ಲಿಸಲು ಈ ಲಿಂಕನ್ನು ಕ್ಲಿಕ್ಕಿಸಿ
ಸೂಚನೆ: ಅರ್ಜಿ ಸಲ್ಲಿಸುವ ದಿನಾಂಕದೊಳಗೆ ವಿದ್ಯಾರ್ಹತೆಯ ಅಂಕಪಟ್ಟಿಗಳನ್ನು ಹೊಂದಿರಬೇಕು.












Click it and Unblock the Notifications