IBM: ಕಚೇರಿ ಹತ್ತಿರವೇ 'ಮನೆ' ಮಾಡಿ, ಇಲ್ಲವೇ 'ಕೆಲಸ ಬಿಡಿ' ಎಂದ ಹೆಸರಾಂತ ಐಟಿ ಕಂಪನಿ
ನವದೆಹಲಿ, ಜನವರಿ 30: ಪ್ರತಿಷ್ಠಿತ ಸಾಫ್ಟ್‌ವೇರ್ ಕಂಪನಿಗಳಲ್ಲಿ ಒಂದಾಗಿರುವ IBM ಕಂಪನಿಯು ತನ್ನ ವ್ಯಾಪ್ತಿಯಲ್ಲಿ ಇನ್ನೂವರೆಗೆ ರಿಮೋಟ್‌ನಲ್ಲಿ ಕೆಲಸ ಮಾಡುತ್ತಿರುವ ವ್ಯವಸ್ಥಾಪಕರಿಗೆ (ಮ್ಯಾನೇಜರ್) ಎಚ್ಚರಿಕೆ ಸಂದೇಶ ರವಾನಿಸಿದೆ.
ಅದೇನೆಂದರೆ ಮ್ಯಾನೇಜರ್‌ಗಳು ನಿಮ್ಮ ಹತ್ತಿರ ಕಂಪನಿಯ ಕಚೇರಿಗೆ ಬರಬೇಕು. ನಿಮ್ಮ ಮನೆಯನ್ನು ಹತ್ತಿರ ಕಚೇರಿಯ ಸ್ಥಳಕ್ಕೆ ಸ್ಥಳಾಂತರಿಸಿ ಇಲ್ಲವೇ ಕೆಲಸ ಬಿಡಿ ಎಂದು ಐಬಿಎಂ ಹೇಳಿದೆ. ಈ ಕುರಿತು ಬ್ಲೂಮ್‌ಬರ್ಗ್ ವರದಿ ತಿಳಿಸಿದೆ.

ಈ ಸಂಬಂಧ ಐಬಿಎಂ ಜನವರಿ 16 ರಂದು ಮೆಮೊ ಹೊರಡಿಸಿದೆ. ಅದರ ಪ್ರಕಾರ, ಯುನೈಟೆಡ್ ಸ್ಟೇಟ್ಸ್‌ನಲ್ಲಿ ಕೆಲಸ ಮಾಡುವ ಎಲ್ಲಾ ಮ್ಯಾನೇಜರ್‌ಗಳು "ಪ್ರಸ್ತುತ ಕೆಲಸದ ಸ್ಥಳದ ಸ್ಥಿತಿಯನ್ನು ಲೆಕ್ಕಿಸದೆಯೇ" ವಾರಕ್ಕೆ ಕನಿಷ್ಠ ಮೂರು ಬಾರಿ ಹತ್ತಿರದ ಕಚೇರಿ ಅಥವಾ ಕ್ಲೈಂಟ್ ಸ್ಥಳಕ್ಕೆ ವರದಿ ಮಾಡಲು ಕಂಪನಿಯು ಕಟ್ಟುನಿಟ್ಟಿನ ಸೂಚನೆ ನೀಡಿದೆ.
ಜಾನ್ ಗ್ರ್ಯಾಂಗರ್ ಪ್ರತಿಕ್ರಿಯೆ
ಹೆಚ್ಚುವರಿಯಾಗಿ, ಬ್ಯಾಡ್ಜ್-ಇನ್ ಡೇಟಾವನ್ನು "ವೈಯಕ್ತಿಕ ಉಪಸ್ಥಿತಿಯನ್ನು ನಿರ್ಣಯಿಸಲು" ನಿಯೋಜಿಸಲಾಗುವುದು ಮತ್ತು ಅದನ್ನು ವ್ಯವಸ್ಥಾಪಕರು ಮತ್ತು ಮಾನವ ಸಂಪನ್ಮೂಲಗಳೊಂದಿಗೆ ಹಂಚಿಕೊಳ್ಳಲಾಗುವುದು ಎಂದು ಹಿರಿಯ ಉಪಾಧ್ಯಕ್ಷ ಜಾನ್ ಗ್ರ್ಯಾಂಗರ್ ತಮ್ಮ ಟಿಪ್ಪಣಿಯಲ್ಲಿ ತಿಳಿಸಿದ್ದಾರೆ.
ನೀವು ಕಚೇರಿಗೆ ಬಾರದೇ ಅಥವಾ ನಿಮ್ಮ ನಿವಾಸವನ್ನು ಕಂಪನಿಯ ಹತ್ತಿರ ಸ್ಥಳಾಂತರಿಸಲು ಒಪ್ಪದೇ ಇನ್ನೂ ನೀವು ರಿಮೋಟ್ ರೀತಿಯಲ್ಲಿ (WFH) ಆಗಿ ಕೆಲಸ ಮಾಡಲು ಇಚ್ಚಿಸಿದರೆ ನೀವು ಐಬಿಎಂ ಕಂಪನಿ ಬಿಡಬಹುದ ಎಂದು ಮೆಮೋನಲಲ್ಇ ಗ್ರ್ಯಾಂಗರ್ ಸೂಚಿಸಿದ್ದಾರೆ. ಇದು ಐಬಿಎಂ ಮ್ಯಾನೇಜರ್‌ಗಳಿಗೆ ಸಂಕಷ್ಟ ತಂದೊಡ್ಡಿದೆ.
ಸಮತೋಲನ ಉದ್ಯೋಗ ವಾತಾವರಣಕ್ಕೆ ಐಬಿಎಂ ಆದ್ಯತೆ
ಮ್ಯಾನೇಜರ್‌ಗಳಿಗೆ ಕಚೇರಿ ಕಡ್ಡಾಯಗೊಳಿಸಿರುವ IBM ಕಂಪನಿಯು ಹೆಚ್ಚು ಉತ್ಪಾದಕ, ನವೀನ ಮತ್ತು ನಮ್ಮ ಗ್ರಾಹಕರಿಗೆ ಸೇವೆ ಸಲ್ಲಿಸಲು ಸಾಧ್ಯವಾಗುವಂತೆ ಮಾಡುವ ಮುಖಾಮುಖಿ ಸಂವಹನಕ್ಕೆ ಆದ್ಯತೆ ನೀಡುತ್ತಿದೆ. ಸಮತೋಲನದ ಕೆಲಸದ ವಾತಾವರಣವನ್ನು ಒದಗಿಸುವುದರ ಮೇಲೆ ಕೇಂದ್ರೀಕರಿಸಿದೆ. ಈ ನಿಟ್ಟಿನಲ್ಲಿ ಇಂತದ್ದೊಂದು ನಿರ್ಧಾರ ಕೈಗೊಂಡಿದೆ ಎನ್ನಲಾಗಿದೆ. ಕೆಲವು ಇದನ್ನು ಕಂಪನಿಯ ಟಾರ್ಗೆಟ್ ಎಂದು ಆರೋಪಿಸಿದ್ದಾರೆ.

ಯುನೈಟೆಡ್ ಸ್ಟೇಟ್ಸ್‌ನಲ್ಲಿ ಕಾರ್ಯನಿರ್ವಾಹಕರು ಮತ್ತು ಜನರ ವ್ಯವಸ್ಥಾಪಕರು ವಾರಕ್ಕೆ ಕನಿಷ್ಠ ಮೂರು ದಿನ ಕಚೇರಿಯಲ್ಲಿರಬೇಕು ಎಂದು ಕಂಪನಿಯ ವಕ್ತಾರರು ತಿಳಿಸಿದ್ದಾರೆ. ಮಿಲಿಟರಿ ಸೇವೆಯಲ್ಲಿರುವವರು ಅಥವಾ ವೈದ್ಯಕೀಯ ಸಮಸ್ಯೆಗಳಿರುವವರನ್ನು ಹೊರತುಪಡಿಸಿ ಉಳಿದವರಿಗೆ ಈ ಸೂಚನೆ ಅನ್ವಯಿಸಲಿದೆ.
ಕಚೇರಿಗೆ ಬಾರದವರಿಗೆ ಬಡ್ತಿ ಸಿಗದಿರಬಹುದು
ಐಬಿಎಂ ಕಚೇರಿಯಿಂದ ದೂರದಿಂದಲೇ ಕೆಲಸ ಮಾಡುತ್ತಿರುವ ಉದ್ಯೋಗಿಗಳು ಮತ್ತು ಕೆಲಸಕ್ಕೆ ತೆರಳಲು ಸಾಕಷ್ಟು ಹತ್ತಿರದಲ್ಲಿ ವಾಸಿಸದೇ ಇರುವವರು ಆಗಸ್ಟ್‌ನ ಆರಂಭದೊಳಗೆ ಹತ್ತಿರದ ಕಚೇರಿಗೆ ಸ್ಥಳಾಂತರಿಸಲು ಕೇಳಿಕೊಳ್ಳಲಾಗಿದೆ. ಕಳೆದ ವರ್ಷ ಆಗಸ್ಟ್‌ನಲ್ಲಿ, IBM ಇಂಡಿಯಾ ಸಿಇಒ ಅರವಿಂದ್ ಕೃಷ್ಣ ಅವರು ಸಂದರ್ಶನವೊಂದರಲ್ಲಿ ಮಾತನಾಡಿ, ಕಚೇರಿಯಲ್ಲಿ ಕೆಲಸ ಮಾಡದ ಉದ್ಯೋಗಿಗಳಿಗೆ ಬಡ್ತಿ ಪಡೆಯಲು ಕಷ್ಟವಾಗಬಹುದು ಎಂದು ತಿಳಿಸಿದ್ದರು. ಇದು ಸಹ ಉದ್ಯೋಗಿಗಳ ಆತಂಕಕ್ಕೆ ಕಾರಣವಾಗಿತ್ತು.
ಇತ್ತೀಚಿನ ದಿನಗಳಲ್ಲಿ ಕಚೇರಿಗೆ ಬಂದು ಕೆಲಸ ನಿರ್ವಹಿಸುವಂತೆ ಹೇಳಿದ ಕಂಪನಿಗಳಲ್ಲಿ ಐಬಿಎಂ ಮೊದಲಲ್ಲ. ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ, ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್) ಸಹ ತಮ್ಮ ಉದ್ಯೋಗಿಗಳಿಗೆ ಅಕ್ಟೋಬರ್ 1 ರಿಂದ ವಾರದ ಎಲ್ಲಾ ಐದು ದಿನಗಳಲ್ಲಿ ಕಚೇರಿಯಿಂದ ಕೆಲಸ ಮಾಡಲು ಸೂಚನೆ ನೀಡಿತ್ತು. ಇವು ಸೇರಿದಂತೆ ಹಲವು ಐಟಿ ಕಂಪನಿಗಳು ಹೈಬ್ರೀಡ್ ವ್ಯವಸ್ಥೆ ಜಾರಿಗೆ ತಂದಿವೆ.
ಹೈಬ್ರೀಡ್ ವ್ಯವಸ್ಥೆ ಯಡಿ ವಾರದಲ್ಲಿ ಎರಡರಿಂದ ಮೂರು ದಿನ ಐಟಿ ಉದ್ಯೋಗಿಯು ಕಂಪನಿಯಲ್ಲಿಯೇ ಕೆಲಸ ಮಾಡಬೇಕಿದೆ. ಬಾಕಿ ದಿನ ಮನೆಯಿಂದ ಕೆಲಸ (WFH) ಮಾಡಲು ಅವಕಾಶ ಇದೆ.












Click it and Unblock the Notifications