ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದ ಉದ್ಯೋಗ ನೇಮಕಾತಿಯಲ್ಲಿ ಶೇ.1ರಷ್ಟು ಕುಸಿತ

|
Google Oneindia Kannada News

ನವದೆಹಲಿ, ಆಗಸ್ಟ್ 9: ಭಾರತದಲ್ಲಿ ಹಬ್ಬದ ಸೀಸನ್ ಸಮೀಪಿಸುತ್ತಿರುವಂತೆಯೇ, ಜಾಗತಿಕ ಆರ್ಥಿಕ ಹಿಂಜರಿತ, ಹಣದುಬ್ಬರದ ಭಯದ ಮಧ್ಯೆ ತಿಂಗಳಿನಿಂದ ತಿಂಗಳಿಗೆ ನೇಮಕಾತಿಯಲ್ಲಿ ಶೇ.1ರಷ್ಟು ಇಳಿಕೆಯಾಗಿದೆ ಎಂದು ಸೋಮವಾರ ಬಿಡುಗಡೆಯಾದ ವರದಿಯೊಂದರಲ್ಲಿ ಉಲ್ಲೇಖಿಸಲಾಗಿದೆ.

ಮಾನ್‌ಸ್ಟರ್ ಎಂಪ್ಲಾಯ್‌ಮೆಂಟ್ ಇಂಡೆಕ್ಸ್ ವರದಿಯ ಪ್ರಕಾರ, ಐಟಿ ವಲಯದಲ್ಲಿ ಶೇ.6ರಷ್ಟು ಉದ್ಯೋಗಿಗಳನ್ನು ಕಳೆದ ವರ್ಷ ವಜಾಗೊಳಿಸಿದ ನಂತರದಲ್ಲಿ ನೇಮಕಾತಿಗೆ ಸಂಬಂಧಿಸಿದ ತಿದ್ದುಪಡಿ ಅನ್ನು ಮಾಡಿಕೊಳ್ಳುವುದಕ್ಕೆ ಮುಂದುವರಿಸಿದೆ.

15,000 ಪ್ರಾಥಮಿಕ ಶಿಕ್ಷಕರ ನೇಮಕಾತಿ ಪರೀಕ್ಷೆ: ಆಗಸ್ಟ್ ಕೊನೆಯ ವಾರ ಫಲಿತಾಂಶ15,000 ಪ್ರಾಥಮಿಕ ಶಿಕ್ಷಕರ ನೇಮಕಾತಿ ಪರೀಕ್ಷೆ: ಆಗಸ್ಟ್ ಕೊನೆಯ ವಾರ ಫಲಿತಾಂಶ

"ಭಾರತೀಯ ಐಟಿ ಸ್ಥಿರೀಕರಣದಲ್ಲಿ ನೇಮಕಾತಿಯೊಂದಿಗೆ, ಸಾಫ್ಟ್‌ವೇರ್, ಹಾರ್ಡ್‌ವೇರ್, ಟೆಲಿಕಾಂ ವಲಯದಲ್ಲಿ ಶೇ.3ರಷ್ಟು ವೃತ್ತಿಪರರಿಗೆ ಬೇಡಿಕೆ ಕಡಿಮೆಯಾಗಿದೆ. ಎಂಜಿನಿಯರಿಂಗ್/ ಉತ್ಪಾದನೆ ವಲಯದಲ್ಲಿ ಶೇ.16, ಖರೀದಿ ಮತ್ತು ಲಾಜಿಸ್ಟಿಕ್ಸ್ ಹಾಗೂ ಪೂರೈಕೆ ಸರಪಳಿಯಲ್ಲಿ ಶೇ.14ರಷ್ಟು ಮತ್ತು ಹೆಲ್ತ್‌ಕೇರ್ ರಂಗದಲ್ಲಿ ಶೇ.12ರಷ್ಟು ಹಾಗೂ ಇತರ ಕಾರ್ಯಗಳಲ್ಲಿ ಹಿಂದಿನ ವರ್ಷಕ್ಕೆ ಹೋಲಿಸಿದರೆ ಅತ್ಯಧಿಕ ವಾರ್ಷಿಕ ಕುಸಿತವನ್ನು ದಾಖಲಿಸಿದೆ ಎಂದು ವರದಿಯು ತಿಳಿಸಿದೆ.

Hiring sees 1 per cent dip amidst inflation fear in india

ವೃತ್ತಿಪರರ ಬೇಡಿಕೆಯಲ್ಲಿ ಗಣನೀಯ ಕುಸಿತ: ಮಾಧ್ಯಮ ಮತ್ತು ಮನರಂಜನೆ ಉದ್ಯಮದಲ್ಲಿ ಶೇ.25ರಷ್ಟು ಬದಲಾವಣೆ ಕಂಡು ಬಂದಿದ್ದು, ಗಮನಾರ್ಹವಾದ ಅಂಶವಾಗಿದೆ. ಇಂಜಿನಿಯರಿಂಗ್, ಸಿಮೆಂಟ್, ನಿರ್ಮಾಣ, ಕಬ್ಬಿಣ/ ಉಕ್ಕು ಶೇ.24ರಷ್ಟು ಮತ್ತು ಶಿಪ್ಪಿಂಗ್/ಮೆರೈನ್ ಶೇ.21ರಷ್ಟು ಸೇರಿದಂತೆ ಕೆಲವು ಇತರ ಕೈಗಾರಿಕೆಗಳು ವೃತ್ತಿಪರರ ಬೇಡಿಕೆಯಲ್ಲಿ ಗಣನೀಯ ಕುಸಿತವನ್ನು ಕಂಡಿವೆ.

ಯಾವ ವಲಯದಲ್ಲಿ ನೇಮಕಾತಿ ಹೆಚ್ಚಳ?: ಉತ್ಪಾದನೆ ಮತ್ತು ನಿರ್ಮಾಣ ವಲಯದಲ್ಲಿ ಶೇ.14ರಷ್ಟು ಬೇಡಿಕೆ ಹೆಚ್ಚಾಗಿದೆ. ಅದೇ ರೀತಿ BPO, ITES ಶೇ.10ರಷ್ಟು, ರಿಯಲ್ ಎಸ್ಟೇಟ್ ಶೇ.10 ಮತ್ತು ಪ್ರಯಾಣ ಮತ್ತು ಪ್ರವಾಸೋದ್ಯಮ ಶೇ.8ರಷ್ಟು ಸೇರಿದಂತೆ ನೇಮಕಾತಿಯಲ್ಲಿ ಏರಿಕೆ ಕಂಡು ಬಂದಿದೆ. ಚಿಲ್ಲರೇ ವಲಯವು ಹಬ್ಬದ ನೇಮಕಾತಿಯಲ್ಲಿ ಶೇ.10ರಷ್ಟು ಏರಿಕೆಯನ್ನು ಕಂಡಿದೆ, ಆದರೆ ರಾಸಾಯನಿಕ ಉದ್ಯಮವು ನೇಮಕಾತಿ ಚಟುವಟಿಕೆಯಲ್ಲಿ ಶೇ.32ರಷ್ಟು ಅತ್ಯಧಿಕ ಬೆಳವಣಿಗೆಯನ್ನು ಕಂಡಿದೆ.

ನೇಮಕಾತಿಯಲ್ಲಿ ಯಾವ ನಗರ ಹಿಂದೆ ಬಿದ್ದಿದೆ?: ಹೈದರಾಬಾದ್ ಶೇ.8, ದೆಹಲಿ-ಎನ್‌ಸಿಆರ್ ಶೇ.6, ಚೆನ್ನೈ ಶೇ.4ರಷ್ಟು ನೇಮಕಾತಿ ಹೆಚ್ಚಳದ ಮೂಲಕ ಉತ್ತಮ ಸಾಧನೆ ತೋರಿವೆ. ಇವುಗಳ ನಂತರದ ಸ್ಥಾನದಲ್ಲಿ ಗುರುತಿಸಿಕೊಂಡಿರುವ ಪುಣೆ ಶೇ.4 ಮತ್ತು ಕೊಚ್ಚಿ ಶೇ.1ರಷ್ಟು ಏರಿಕೆಯನ್ನು ಹೊಂದಿವೆ. ಜೈಪುರ್ 1ರಷ್ಟು, ಬರೋಡಾ ಶೇ.2ರಷ್ಟು, ಬೆಂಗಳೂರು ಶೇ.2ರಷ್ಟು ಕುಸಿತವನ್ನು ದಾಖಲಿಸಿದೆ. ಆದರೆ ಕೋಲ್ಕತ್ತಾ ನೇಮಕಾತಿ ವಿಷಯದಲ್ಲಿ ಬರೋಬ್ಬರಿ ಶೇ.11ರಷ್ಟು ಕುಸಿತವನ್ನು ದಾಖಲಿಸಿದೆ.

English summary
Hiring sees 1 per cent dip amidst inflation fear in india. Know More.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X