• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಹಾಸನ: ಅಂಗನವಾಡಿ ಕಾರ್ಯಕರ್ತೆ, ಸಹಾಯಕಿಯರ ಹುದ್ದೆಗೆ ಅರ್ಜಿ ಆಹ್ವಾನ

|

ಹಾಸನ, ಜೂನ್ 18: ಕರ್ನಾಟಕ ಮಹಿಳಾ ಮತ್ತು ಅಭಿವೃದ್ಧಿ ಇಲಾಖೆಯು ಹಾಸನ ಜಿಲ್ಲೆಯಲ್ಲಿ 2020ನೇ ನೇಮಕಾತಿ ಅಧಿಸೂಚನೆ ಹೊರಡಿಸಿದೆ.

ಆಲೂರು ತಾಲ್ಲೂಕಿನ ಗ್ರಾಮ ಅಥವಾ ವಾರ್ಡ್‍ಗಳಲ್ಲಿ ಅಂಗನವಾಡಿ ಕಾರ್ಯಕರ್ತೆ ಹಾಗೂ ಅಂಗನವಾಡಿ ಸಹಾಯಕಿಯರ ಹುದ್ದೆಗಳು ಖಾಲಿ ಇದ್ದು, ಅವುಗಳನ್ನು ಭರ್ತಿ ಮಾಡುವ ಸಲುವಾಗಿ ಆಸಕ್ತ ಸ್ಥಳೀಯ ಮಹಿಳಾ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ ಎಂದು ಆಲೂರು ಶಿಶು ಅಭಿವೃದ್ಧಿ ಯೋಜನಾಧಿಕಾರಿ ತಿಳಿಸಿದ್ದಾರೆ.

SSC ನೇಮಕಾತಿ 2020: 1564 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

ಖಾಲಿ ಇರುವ ಹುದ್ದೆ, ಗ್ರಾಮ ಪಂಚಾಯಿತಿ, ಮೀಸಲಾತಿ ವಿವರ:

* ಹಂಚೂರು ಗ್ರಾಮ ಪಂಚಾಯಿತಿ ಗಂಗರ ಅಂಗನವಾಡಿ ಕೇಂದ್ರ ಹುದ್ದೆ ಮಿನಿ ಅಂಗನವಾಡಿ ಕಾರ್ಯಕರ್ತೆ, ಮೀಸಲಾತಿ ಇತರೆ,

* ಕುಂದೂರು ಗ್ರಾಮ ಪಂಚಾಯಿತಿ ಸಾಣೇನಹಳ್ಳಿ ಅಂಗನವಾಡಿ ಕೇಂದ್ರ, ಹುದ್ದೆ ಸಹಾಯಕಿ, ಮೀಸಲಾತಿ ಇತರೆ,

* ದೊಡ್ಡಕಣಗಾಲು ಗ್ರಾಮ ಪಂಚಾಯಿತಿ ರಾಜನಹಳ್ಳಿ ಅಂಗನವಾಡಿ ಕೇಂದ್ರ, ಹುದ್ದೆ ಸಹಾಯಕಿ, ಮೀಸಲಾತಿ ಇತರೆ,

* ತಾಳೂರು ಗ್ರಾಮ ಪಂಚಾಯಿತಿ ಚಿಕ್ಕ ಕಣಗಾಲು ಅಂಗನವಾಡಿ ಕೇಂದ್ರ, ಹುದ್ದೆ ಸಹಾಯಕಿ, ಮೀಸಲಾತಿ ಪರಿಶಿಷ್ಟ ಜಾತಿ,

* ಮಲ್ಲಾಪುರ ಗ್ರಾಮ ಪಂಚಾಯಿತಿ ಕರಡಿ ಬೆಟ್ಟ ಅಂಗನವಾಡಿ ಕೇಂದ್ರ, ಹುದ್ದೆ ಸಹಾಯಕಿ, ಮೀಸಲಾತಿ ಇತರೆ,

* ಪಾಳ್ಯ ಗ್ರಾಮ ಪಂಚಾಯಿತಿ ಚನ್ನಹಳ್ಳಿ ಅಂಗನವಾಡಿ ಕೇಂದ್ರ, ಹುದ್ದೆ ಸಹಾಯಕಿ, ಮೀಸಲಾತಿ ಇತರೆ

* ಅಬ್ಬನ ಗ್ರಾಮಪಂಚಾಯಿತಿ ಅಬ್ಬನ ಅಂಗನವಾಡಿ ಕೇಂದ್ರ, ಹುದ್ದೆ ಸಹಾಯಕಿ, ಮೀಸಲಾತಿ ಇತರೆ,

* ಪಾಳ್ಯ ಗ್ರಾಮ ಪಂಚಾಯಿತಿ ಪಾಳ್ಯ ಪಶ್ಚಿಮ ಬಡಾವಣೆ ಅಂಗನವಾಡಿ ಕೇಂದ್ರ, ಹುದ್ದೆ ಸಹಾಯಕಿ, ಮೀಸಲಾತಿ ಇತರೆ.

ಆಸಕ್ತರು ಆನ್‍ಲೈನ್ ಮೂಲಕ

ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸಲು ಜುಲೈ 6 ಕೊನೆಯ ದಿನಾಂಕವಾಗಿರುತ್ತದೆ.

ಹೆಚ್ಚಿನ ಮಾಹಿತಿಗಾಗಿ ಆಲೂರು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿ ದೂರವಾಣಿ ಸಂಖ್ಯೆ: 08170-218220ಗೆ ಸಂಪರ್ಕಿಸಬಹುದಾಗಿದೆ.

English summary
Women and Child Department (WCD) Hassan recruitment 2020 notification has been released on official website for the recruitment of Anganwadi workers Helpers at Alur, Hassan.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X