SSLC ಪಾಸ್ ಆದವರಿಗೆ ಖಚಿತ ಉದ್ಯೋಗ ನೀಡುವ ಡಿಪ್ಲೋಮಾ ಕೋರ್ಸ್‌ಗಳು
ಬೆಂಗಳೂರು, ಮೇ 09: ಕರ್ನಾಟಕದ ಎಸ್‌ಎಸ್‌ಎಲ್‌ಸಿ ಪರೀಕ್ಷೆ 2024 ಫಲಿತಾಂಶ ಗುರುವಾರ ಪ್ರಕಟವಾಗುತ್ತಿದೆ. ಮುಂದೇನು ಎಂಬ ಪ್ರಶ್ನೆ ಹಲವು ವಿದ್ಯಾರ್ಥಿಗಳದ್ದು. ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ (GTTC) 2024-25ನೇ ಸಾಲಿನ ಡಿಪ್ಲೊಮಾ ಕೋರ್ಸ್‌ಗಳ ಪ್ರವೇಶಾತಿ ಅಧಿಸೂಚನೆ ಪ್ರಕಟಿಸಿದೆ.
ಕರ್ನಾಟಕ ಸರ್ಕಾರದ ನೋಂದಾಯಿತ ಸೊಸೈಟಿಯಾದ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ (GTTC)ಯಲ್ಲಿ 10ನೇ ತರಗತಿ ಪಾಸ್ ಆದ ಅಭ್ಯರ್ಥಿಗಳಿಗೆ 2024-25ನೇ ಸಾಲಿನ ಡಿಪ್ಲೋಮಾ ಕೋರ್ಸುಗಳಿಗೆ ಪ್ರವೇಶಾತಿ ಕುರಿತು ಮಾಹಿತಿ ನೀಡಲಾಗಿದೆ. ಆಸಕ್ತರು ಕೋರ್ಸ್ ಮಾಡಬಹುದು.

ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರವು 1972ರಲ್ಲಿ ಡೆನ್ಮಾರ್ಕ್ ಸರ್ಕಾರದ ಸಹಯೋಗದೊಂದಿಗೆ ಮತ್ತು ಕರ್ನಾಟಕ ಸರ್ಕಾರದ ಸಹಭಾಗಿತ್ವದಲ್ಲಿ ದ್ವಿಪಕ್ಷೀಯ ಅಭಿವೃದ್ಧಿ ಸಹಕಾರ ಒಪ್ಪಂದದ ಅಡಿಯಲ್ಲಿ ಬೆಂಗಳೂರಿನ ರಾಜಾಜಿನಗರದ ಕೈಗಾರಿಕಾ ಪ್ರದೇಶದಲ್ಲಿ ಸ್ಥಾಪನೆಗೊಂಡಿದೆ.
ಪ್ರಸ್ತುತ ರಾಜ್ಯಾದ್ಯಂತ 30 ಡಿಪ್ಲೋಮಾ ಕಾಲೇಜುಗಳನ್ನು ಹೊಂದಿದ್ದು, ಡಿಪ್ಲೊಮಾ, ಪೋಸ್ಟ್ ಡಿಪ್ಲೊಮಾ ಹಾಗೂ ಎಂ.ಟೆಕ್ ಕೋರ್ಸುಗಳನ್ನು ನಡೆಸುವ AICTE ಯಿಂದ ಅನುಮೋದನೆಗೊಂಡ ಅತ್ಯುನ್ನತ ತಾಂತ್ರಿಕ ಶಿಕ್ಷಣ ಸಂಸ್ಥೆಯಾಗಿದೆ. ಕರ್ನಾಟಕ ಸರ್ಕಾರದ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋವಾಯ ಇಲಾಖೆಯಡಿಯಲ್ಲಿ ಸ್ವಾಯತ್ತ ಸಂಸ್ಥೆಯಾಗಿ ಕಾರ್ಯನಿರ್ವಹಿಸುತ್ತಿದೆ.
ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ ರಾಜ್ಯಾದ್ಯಂತ ಸ್ಥಾಪಿಸಲಾಗಿರುವ 30 ಜಿಟಿಟಿಸಿ ಕೇಂದ್ರಗಳಲ್ಲಿ 2024- 25ನೇ ಸಾಲಿನ ಡಿಪ್ಲೋಮಾ ಕೋರ್ಸುಗಳಿಗೆ ಪ್ರವೇಶಾತಿ ಪ್ರಕ್ರಿಯೆಯನ್ನು ಪ್ರಾರಂಭಿಸಿದ್ದು, 2023-24ನೇ ಸಾಲಿನ SSLC ಫಲಿತಾಂಶ ಬಿಡುಗಡೆಯಾದ ನಂತರ ಆನ್‌ಲೈನ್ ಮೂಲಕ ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗುವುದು. ಪ್ರವೇಶಾತಿ ಪ್ರಕ್ರಿಯೆಯು ಮರಿಟ್ ಮತ್ತು ರೋಸ್ಟರ್ ಆಧಾರದ ಮೇಲೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮೂಲಕ ನಡೆಸಲಾಗುವುದು ಎಂದು ಹೇಳಿದೆ.
ಜಿಟಿಟಿಸಿ ಡಿಪ್ಲೋಮಾ ಕೋರ್ಸುಗಳು: ಈ ಎಲ್ಲಾ ಕೋರ್ಸ್‌ಗಳಿಗೆ ವಿದ್ಯಾರ್ಹತೆ 10ನೇ ತರಗತಿಯಾಗಿದೆ. ಕೋರ್ಸ್ ಅವಧಿ 3+1 (ಕಡ್ಡಾಯ ಒಂದು ವರ್ಷದ ಇಂಟರ್ನ್‌ಶಿಪ್ ತರಬೇತಿ) ಎಂದು ಪ್ರವೇಶಾತಿ ಅಧಿಸೂಚನೆಯಲ್ಲಿ ಸ್ಪಷ್ಟಪಡಿಸಲಾಗಿದೆ.
ಡಿಪ್ಲೋಮಾ ಇನ್ ಟೂಲ್ & ಡ್ರೈ ಮೇಕಿಂಗ್, ಡಿಪ್ಲೋಮಾ ಇನ್ ಪ್ರಿಶಿಸನ್ ಮ್ಯಾನುಫ್ಯಾಕ್ಚರಿಂಗ್, ಡಿಪ್ಲೋಮಾ ಇನ್ ಮೆಕ್ಯಾಟ್ರಾನಿಕ್ಸ್, ಡಿಪ್ಲೋಮಾ ಇನ್ ಇಲೆಕ್ಟ್ರಿಕಲ್ & ಇಲೆಕ್ಟ್ರಾನಿಕ್ಸ್, ಡಿಪ್ಲೋಮಾ ಇನ್ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ & ಮಶೀನ್ ಲರ್ನಿಂಗ್, ಡಿಪ್ಲೋಮಾ ಇನ್ ಅಟೋಮೇಶನ್ & ರೋಬೋಟಿಕ್ಸ್, ಡಿಪ್ಲೋಮಾ ಇನ್ ಇಲೆಕ್ಟ್ರಾನಿಕ್ಸ್ & ಕಮ್ಯುನಿಕೇಶನ್ ಇಂಜಿನಿಯರಿಂಗ್.
ಜಿಟಿಟಿಸಿ ಡಿಪ್ಲೋಮಾ ಕಾಲೇಜಿನ ವಿಶೇಷತೆಗಳು ಹೀಗಿವೆ. ಶೇ 30 ಕ್ಲಾಸ್‌ರೂಮ್ ತರಬೇತಿ, ಶೇ 70 ಪ್ರಾಯೋಗಿಕ ತರಬೇತಿ, ಉದ್ಯಮಗಳ ಬೇಡಿಕೆಗೆ ಅನುಸಾರ ಪಠ್ಯಕ್ರಮ ರಚನೆ, ಸ್ಟೈಫಂಡ್ ಸಹಿತ ಒಂದು ವರ್ಷ ಅವಧಿಯ ಇಂಟರ್ನ್‌ಶಿಪ್, ಶೇಕಡ 100 ರಷ್ಟು ಉದ್ಯೋಗಾವಕಾಶ.
ಜಿಟಿಟಿಸಿ ಡಿಪ್ಲೋಮಾ ಕಾಲೇಜುಗಳು ಇರುವ ಸ್ಥಳ ಬೆಂಗಳೂರು, ಮೈಸೂರು, ಧಾರವಾಡ, ಮದ್ದೂರು, ಹಾಸನ, ಮಂಗಳೂರು, ಕಲಬುರಗಿ, ಬೆಳಗಾವಿ, ದಾಂಡೇಲಿ, ಹೊಸಪೇಟೆ, ಹರಿಹರ, ಕೂಡಲಸಂಗಮ, ಕನಕಪುರ, ಲಿಂಗಸುಗೂರು, ಗುಂಡ್ಲುಪೇಟೆ, ಕಡೂರು, ಹುಮನಾಬಾದ್, ಕೋಲಾರ, ತುಮಕೂರು, ಶಿವಮೊಗ್ಗ, ಗೌರಿಬಿದನೂರು, ಚಿಕ್ಕೋಡಿ, ಗೋಕಾಕ್, ಉಡುಪಿ, ಯಾದಗಿರಿ, ಚಿತ್ರದುರ್ಗ, ಚಳ್ಳಕೆರೆ, ಕೊಪ್ಪಳ, ದೇವನಹಳ್ಳಿ ಮಾಗಡಿ.
ಆಸಕ್ತರು ಹೆಚ್ಚಿನ ಮಾಹಿತಿಗಾಗಿ ಸಹಾಯವಾಣಿ ಸಂಖ್ಯೆ 155267ಕ್ಕೆ ಕರೆ ಮಾಡಬಹುದು ಅಥವ https://gttc.karnataka.gov.in, https://cetonline.karnataka.gov.in/kea ವೆಬ್‌ಸೈಟ್‌ಗೆ ಭೇಟಿ ನೀಡಬಹುದು.












Click it and Unblock the Notifications