ಗ್ರಾಮ ಪಂಚಾಯಿತಿ ಕಾರ್ಯದರ್ಶಿ ನೇಮಕಾತಿ; ಸರ್ಕಾರದ ಮಾಹಿತಿ
ಬೆಂಗಳೂರು, ಜುಲೈ 11; ಕರ್ನಾಟಕದಲ್ಲಿ ಗ್ರಾಮ ಪಂಚಾಯತಿ ಮಟ್ಟದಲ್ಲಿನ ನೇಮಕಾತಿಗೆ ಸಂಬಂಧಿಸಿದಂತೆ ಸರ್ಕಾರ ವಿಧಾನಸಭೆ ಕಲಾಪದಲ್ಲಿ ಉತ್ತರ ನೀಡಿದೆ. ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಗ್ರೇಡ್-1 ರಾಜ್ಯದಲ್ಲಿ ಒಟ್ಟು ಮಂಜೂರಾಗಿರುವ ಹುದ್ದೆಗಳು 2194. ಇವುಗಳಲ್ಲಿ ಸದ್ಯ 604 ಹುದ್ದೆ ಖಾಲಿ ಇದೆ.
ಕರ್ನಾಟಕದ ಬಜೆಟ್ ಅಧಿವೇಶನದಲ್ಲಿ ರಾಯಚೂರು ಗ್ರಾಮಾಂತರ ಕ್ಷೇತ್ರದ ಶಾಸಕ ಬಸನಗೌಡ ದದ್ದಲ್ ಕೇಳಿದ್ದ ಪ್ರಶ್ನೆಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಸಚಿವರು ಉತ್ತರ ನೀಡಿದ್ದಾರೆ.

ಶಾಸಕರು ಮತ್ತು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಪ್ರಸ್ತುತ ಖಾಲಿ ಇರುವ ಗ್ರಾಮ ಪಂಚಾಯತಿ ಕಾರ್ಯದರ್ಶಿ ಗ್ರೇಡ್-1, ಗ್ರಾಮ ಪಂಚಾಯತ್ ಕಾರ್ಯದರ್ಶಿ ಗ್ರೇಡ್-2 ಹುದ್ದೆಗಳ ವಿವರ, ಒಟ್ಟು ಮಂಜೂರಾದ ಹುದ್ದೆಗಳ ವಿವರ ಕೇಳಿದ್ದರು.
ಎಷ್ಟು ಹುದ್ದೆಗಳು ಖಾಲಿ?; ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರು ಉತ್ತರದಲ್ಲಿ ಗ್ರಾಮ ಪಂಚಾಯತಿ ಕಾರ್ಯದರ್ಶಿ ಗ್ರೇಡ್-1 2194 ಹುದ್ದೆಗಳು ಮಂಜೂರಾಗಿವೆ. ಗ್ರಾಮ ಪಂಚಾಯತ್ ಕಾರ್ಯದರ್ಶಿ ಗ್ರೇಡ್-2: 3827 ಹುದ್ದೆಗಳು ಮಂಜೂರಾಗಿವೆ ಎಂದು ಹೇಳಿದ್ದಾರೆ.
ಸಚಿವರು ಉತ್ತರದಲ್ಲಿ ಗ್ರಾಮ ಪಂಚಾಯತಿ ಕಾರ್ಯದರ್ಶಿ ಗ್ರೇಡ್-1 1590 ಹುದ್ದೆಗಳು ಭರ್ತಿಯಾಗಿವೆ. 604 ಹುದ್ದೆಗಳು ಖಾಲಿ ಇವೆ. ಗ್ರಾಮ ಪಂಚಾಯತ್ ಕಾರ್ಯದರ್ಶಿ ಗ್ರೇಡ್-2 3108 ಹುದ್ದೆಗಳು ಭರ್ತಿಯಾಗಿವೆ. 345 ಹುದ್ದೆಗಳು ಖಾಲಿ ಇವೆ ಎಂದು ಸದನಕ್ಕೆ ಮಾಹಿತಿ ನೀಡಿದ್ದಾರೆ.
ಈ ಹುದ್ದೆಗಳಲ್ಲಿ ಬೆಂಗಳೂರು ಗ್ರಾಮಾಂತರ 2, ಬೆಂಗಳೂರು ನಗರ 0, ಚಿಕ್ಕಬಳ್ಳಾಪುರ 16, ಚಿತ್ರದುರ್ಗ 32, ದಾವಣಗೆರೆ 3, ಕೋಲಾರ 15, ರಾಮನಗರ 6, ಶಿವಮೊಗ್ಗ 32, ತುಮಕೂರು 31, ಬಾಗಲಕೋಟೆ 20, ಬೆಳಗಾವಿ 76 ಹುದ್ದೆಗಳು ಖಾಲಿ ಇವೆ ಎಂದು ಮಾಹಿತಿ ಕೊಟ್ಟಿದ್ದಾರೆ.
ಧಾರವಾಡ 19, ಗದಗ 14, ಹಾವೇರಿ 9, ಉತ್ತರ ಕನ್ನಡ 11, ವಿಜಯಪುರ 3, ಚಿಕ್ಕಮಗಳೂರು 27, ಉಡುಪಿ 4, ದಕ್ಷಿಣ ಕನ್ನಡ 28, ಕೊಡಗು 16, ಮಂಡ್ಯ 30, ಹಾಸನ 15, ಮೈಸೂರು 36, ಚಾಮರಾಜನಗರ 22, ರಾಯಚೂರು 44, ಬೀದರ್ 23, ಬಳ್ಳಾರಿ 11, ಯಾದಗಿರಿ 6, ಕಲಬುರಗಿ 25, ಕೊಪ್ಪಳ 9 ಮತ್ತು ವಿಜಯನಗರದಲ್ಲಿ 19 ಹುದ್ದೆಗಳು ಖಾಲಿ ಇವೆ.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ (ಪಿಡಿಒ) ಒಟ್ಟು ಮಂಜೂರಾಗಿರುವ ಹುದ್ದೆಗಳು 6021. ಇವುಗಳಲ್ಲಿ 5321 ಹುದ್ದೆಗಳು ಭರ್ತಿಯಾಗಿವೆ. 660 ಹುದ್ದೆಗಳು ಖಾಲಿ ಇದೆ ಎಂದು ಸಹ ಸಚಿವರು ಮಾಹಿತಿ ನೀಡಿದ್ದಾರೆ.












Click it and Unblock the Notifications